ಕೆಂಪೇಗೌಡರ ಕುರಿತು ಇನ್ನಷ್ಟು ಸಂಶೋಧನೆಯಾಗಲಿ
Team Udayavani, Mar 21, 2022, 2:37 PM IST
ನೆಲಮಂಗಲ: ಕೆಂಪೇಗೌಡರನ್ನು ಕುರಿತ ಕೆಲವು ನಿಖರ, ಸತ್ಯ ಸಂಗತಿಗಳ ಮರೆ ಮಾಚಿದ್ದು ಸಂಶೋಧನೆಗಳಾಗ ಬೇಕಿದೆ ಎಂದು ಕೆಂಪೇಗೌಡರ ನಾಟಕ ಕೃತಿ ರಚನಾಕಾರ ಪ್ರೊ.ನಾರಾಯಣಘಟ್ಟ ಸಲಹೆ ನೀಡಿದರು.
ನಗರದ ಬಿನ್ನಮಂಗಲದ ಕರ್ನಾಟಕಸರಕಾರಿನೌಕರರ ಸಂಘದ ಸಭಾಂಗಣದಲ್ಲಿ ರಂಗಶಿಕ್ಷಣ ಕೇಂದ್ರದಿಂದ ಆಯೋಜಿಸಲಾಗಿದ್ದ ರಾಜರ್ಷಿಕೆಂಪೇಗೌಡರ ವಂಶಾವಳಿ ನಾಟಕ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು.
ಕೆಂಪೇಗೌಡರ ಹುಟ್ಟು,ವಂಶಾವಳಿ ಬಗೆಗಿನ ತಪ್ಪು ಕಲ್ಪನೆ ಗಳು ಸಮಾಜದಲ್ಲಿವೆ, ಸರ್ವಧರ್ಮ, ಸರ್ವ ಜನಾಂಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೆಂಪೇಗೌಡರನ್ನು ಕೆಲವರು ಸಹಿಸಿಕೊಳ್ಳಲಿಲ್ಲ. ತನ್ನ ತಾಯಿಯ ಊರಿನ ಹೆಸರೇ ಈಗಿನ ಬೆಂಗಳೂರು, ಕೆಂಪೇಗೌಡರು ನಿರ್ಮಿ ಸಿದ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವ ಕೆಲಸ ಇಂದಿನ ರಾಜಕಾರಣಿಗಳಿಂದ ಆಗಿಲ್ಲ. ಕೆಂಪೇ ಗೌಡರಷ್ಟೇ ಸಮರ್ಥ ಆಳ್ವಿಕೆ ಮಾಡಿದ ಏಂಟು ರಾಜರು ಅವರ ವಂಶದಲ್ಲಿದ್ದಾರೆ. ರಣಬೈರೇಗೌಡ ಕೆಂಪೇಗೌಡ ವಂಶದ ಮೂಲಪುರುಷ, ಅವತಿ ಪ್ರಾಂತ್ಯದಿಂದ ಆಳ್ವಿಕೆ ಆರಂಭಿಸಿ ಜಯಗೌಡ ಎಂಬ ರಾಜನೂ ಪರಾಕ್ರಮಿ ಯಾಗಿದ್ದನು,350 ರಿಂದ 400 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಹೆಗ್ಗಳಿಕೆ ಕೆಂಪೇಗೌಡರ ರಾಜವಂಶಕ್ಕಿದೆ ಎಂದರು.
ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಕಾಸರಘಟ್ಟ ಗಂಗಾಧರ್ ಮಾತನಾಡಿ, ಕೆಂಪೇಗೌಡರು ನ್ಯಾಯ ತತ್ಪರತೆಗಾಗಿ ಬಾಳಿ ಬದುಕಿದವರು, ಮಕ್ಕಳನ್ನು ಕೇವಲ ಓದು, ಉದ್ಯೋಗ ಹಣ ಸಂಪಾದನೆಗಷ್ಟೆ ಸೀಮಿತ ಮಾಡಲಾಗುತ್ತಿದೆ. ಸಂಸ್ಕೃತಿ, ಇತಿಹಾಸರ್ವ ಜನಾಂಗದ ಮಹನೀಯರ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡುತ್ತಿಲ್ಲ, ಆದ್ದರಿಂದ ಮಕ್ಕಳಿಗೆ ನಾಡಿನ ಪರಂಪರೆಯನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ. ಇತಿಹಾಸ ಪರಂಪರೆಯುಳ್ಳು ನಾಟಕಗಳ ಪ್ರದರ್ಶನ ಮಾಡಿದಲ್ಲಿ ಇತಿಹಾಸದ ಜತೆಗೆ ಕಲೆಯೂ ಉಳಿಯಲಿದೆ ಎಂದರು.
ಕೃಷಿವಿಶ್ವವಿದ್ಯಾಲಯದ ವಿಶ್ರಾಂತಕುಲಪತಿ ನಾರಾಯಣ ಗೌಡ, ಬಿಜೆಪಿ ಉಪಾಧ್ಯಕ್ಷ ಜಗದೀಶ್‌ಚೌಧರಿ, ನಗರಸಭೆ ಸದಸ್ಯ ಅಂಜನಮೂರ್ತಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಾಸುದೇವಮೂರ್ತಿ, ಒಕ್ಕಲಿಗರಸಂಘದ ತಾ. ಅಧ್ಯಕ್ಷ ಬಿ.ಕೆ ತಿಮ್ಮರಾಜು, ಕವಿ ನಾರಾಯಣಘಟ್ಟ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರದೀಪ್‌ಕುಮಾರ್, ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು, ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾಸಿದ್ದರಾಜು, ಸಂಚಾಲಕ ಟಿ.ಕೃಷ್ಣಪ್ಪ, ಕುವೆಂಪು ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಜಿ ರಾಜು, ವಕೀಲ ಮೋಹನ್‌ಕುಮಾರ್, ನಾಟಕ ಬರಹಗಾರ ಪ್ರಕಾಶ್ ಇರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.