ದೆಹಲಿ-ದೋಹಾ ಕತಾರ್ ಏರ್ ವೇಸ್ ನಲ್ಲಿ ಕಾಣಿಸಿಕೊಂಡ ಹೊಗೆ; ವಿಮಾನ ತುರ್ತು ಭೂಸ್ಪರ್ಶ
Team Udayavani, Mar 21, 2022, 7:46 PM IST
ನವದೆಹಲಿ: ದೆಹಲಿಯಿಂದ ದೋಹಾಕ್ಕೆ ತೆರಳುತ್ತಿದ್ದ ಕತಾರ್ ಏರ್ ವೇಸ್ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ಸೋಮವಾರ (ಮಾ.21)ರಂದು ತುರ್ತು ಭೂಸ್ಪರ್ಶ ಮಾಡಿದೆ.
ದೆಹಲಿಯಿಂದ ದೋಹಾಕ್ಕೆ ತೆರಳುತ್ತಿದ್ದ ಕ್ಯೂಆರ್ 579 ವಿಮಾನದ ಕಾರ್ಗೋ ಹೋಲ್ಡ್ ನಿಂದ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರನ್ನು ಕರಾಚಿಯಲ್ಲಿ ಸುರಕ್ಷಿತವಾಗಿ ತುರ್ತಾಗಿ ಇಳಿಸಲಾಗಿದೆ.
ಈ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇನ್ನೊಂದು ವಿಮಾನದ ಮೂಲಕ ದೋಹಾಗೆ ಕಳಿಸಲಾಗಿದೆ ಎಂದು ಕತಾರ್ ವಿಮಾನಯಾನ ಸಂಸ್ಥೆಯು ತಿಳಿಸಿದೆ.
ಯಾವುದೇ ದೊಡ್ಡ ಅನಾಹುತ ಆಗಿಲ್ಲ. ಆದರೆ ನಮ್ಮ ಪ್ರಯಾಣಿಕರಿಗೆ ಆದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಕತಾರ್ ಏರ್ ವೇಸ್ ಹೇಳಿದೆ.
ಈ ವಿಮಾನದಲ್ಲಿ ಹೊಗೆ ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Uddhav Thackeray: ಚಂದ್ರಚೂಡ್ ಜಡ್ಜ್ ಬದಲು ಅಧ್ಯಾಪಕರಾಗಿದ್ದರೆ ಖ್ಯಾತಿ ಸಿಗುತ್ತಿತ್ತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.