ಪಡೀಲ್‌-ಕುಲಶೇಖರ: ದ್ವಿಗುಣಿತ ಪಥದಲ್ಲಿ ರೈಲು ಸಂಚಾರ ಆರಂಭ


Team Udayavani, Mar 22, 2022, 7:20 AM IST

ಪಡೀಲ್‌-ಕುಲಶೇಖರ: ದ್ವಿಗುಣಿತ ಪಥದಲ್ಲಿ ರೈಲು ಸಂಚಾರ ಆರಂಭ

ಮಂಗಳೂರು: ಪಡೀಲ್‌ -ಕುಲಶೇಖರ ನಡುವೆ ಹಳಿ ದ್ವಿಗುಣಗೊಂಡ ಪಥದಲ್ಲಿ ಸೋಮವಾರ ರೈಲುಗಳ ಸಂಚಾರ ಆರಂಭಗೊಂಡಿತು.

ಮಂಗಳೂರು ಜಂಕ್ಷನ್‌-ಪಣಂಬೂರು ಮಧ್ಯೆ ಹೊಸ ಸುರಂಗ ಸಹಿತ 19 ಕಿ.ಮೀ. ಹಳಿ ದ್ವಿಗುಣ ಕಾಮಗಾರಿಯಲ್ಲಿ ಬಾಕಿಯುಳಿದಿದ್ದ 2.6 ಕಿ.ಮೀ. ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಯೋಗ್ಯ ಎಂದು ದೃಢೀಕರಿಸಲ್ಪಟ್ಟ ಬಳಿಕ ಸೋಮವಾರ ಅಪರಾಹ್ನ 2.50ರ ವೇಳೆಗೆ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ರೈಲು ನಂ. 12618 ನಿಜಾಮುದ್ದೀನ್‌-ಎರ್ನಾಕುಳಂ ಜಂಕ್ಷನ್‌ ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ ಹೊಸ ದ್ವಿಗುಣ ಪಥದಲ್ಲಿ ಪ್ರಥಮವಾಗಿ ಹಾದುಹೋಯಿತು. ಮಂಗಳೂರು ಜಂಕ್ಷನ್‌ ಕಡೆಯಿಂದ ರೈಲು ನಂ. 12617 ಎರ್ನಾಕುಳಂ ಜಂಕ್ಷನ್‌-ನಿಜಾಮುದ್ದೀನ್‌ ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ ರೈಲು ಅಪರಾಹ್ನ 3.41ಕ್ಕೆ ಹೊಸದಾಗಿ ಸಂಚಾರಕ್ಕೆ ತೆರವುಗೊಂಡ ಸುರಂಗ ಮಾರ್ಗದಲ್ಲಿ ಹಾದು ಹೋಯಿತು.

ಇದರೊಂದಿಗೆ ಮಾ. 17ರಿಂದ ಈ ಮಾರ್ಗದಲ್ಲಿ ವ್ಯತ್ಯಯಗೊಂಡಿದ್ದ ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ.

ಪಡೀಲ್‌ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡಿಮಾರ್ಗದಲ್ಲಿ ಬಾಕಿಯುಳಿದಿದ್ದ ಅಂತಿಮ ಕಾಮಗಾರಿಗಳನ್ನು ಮಾ. 17ರಿಂದ ಮಾ. 19ರ ವರೆಗೆ ನಡೆಸಲಾಗಿತ್ತು. ಹೊಸ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಪ್ಯಾನಲ್‌ ಪಡೀಲ್‌ ರೈಲು ನಿಲ್ದಾಣದಲ್ಲಿ ಸೋಮವಾರ ಅಪರಾಹ್ನ 2ಕ್ಕೆ ಕಾರ್ಯಾರಂಭ ಮಾಡಿತು.

ಹೊಸ ಪಥ ಕಾರ್ಯಾರಂಭ ಮಾಡುವುದರೊಂದಿಗೆ ಕುಲಶೇಖರದಲ್ಲಿ ಕಾರ್ಯಾಚರಿಸುತ್ತಿದ್ದ ತಾತ್ಕಾಲಿಕ ನಿರ್ವಹಣ ನಿಲ್ದಾಣವನ್ನು ರದ್ದುಗೊಳಿಸಲಾಗಿದೆ.

ಕುಲಶೇಖರ-ಪಡೀಲ್‌ ಮಧ್ಯೆ 780 ಮೀ. ಉದ್ದದ ಹೊಸ ಸುರಂಗವನ್ನು 70 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪಣಂಬೂರು- ಕುಲಶೇಖರ ನಡುವೆ 2.26 ಕಿ.ಮೀ. ಮಾರ್ಗದಲ್ಲಿ 2ನೇ ಹಳಿ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳದೆ ರೈಲುಗಳು ಲೈನ್‌ ಕ್ಲಿಯರೆನ್ಸ್‌ಗೆ ಕಾಯಬೇಕಾಗಿತ್ತು. ರೈಲುಗಳನ್ನು ಮಂಗಳೂರು ಜಂಕ್ಷನ್‌ ಹಾಗೂ ಜೋಕಟ್ಟೆ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲಾಗುತ್ತಿತ್ತು. ಒಂದು ರೈಲು ಹಾದುಹೋದ ಬಳಿಕ ಇನ್ನೊಂದು ರೈಲಿಗೆ ಅನುಮತಿ ನೀಡಲಾಗುತ್ತಿತ್ತು. ಇದಲ್ಲದೆ ಸರಕು ಸಾಗಾಟ ರೈಲುಗಳ ಸಂಚಾರಕ್ಕೂ ಕಾಯಬೇಕಾಗುತ್ತಿತ್ತು. ಹೊಸ ಲೈನ್‌ ಸಂಚಾರಕ್ಕೆ ತೆರವುಗೊಂಡಿರುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.