ಮೂಲ್ಕಿ: ಕಲ್ಲಿನಿಂದ ಮುಖಕ್ಕೆ ಜಜ್ಜಿ ವ್ಯಕ್ತಿ ಕೊಲೆ; ಆರೋಪಿ ಬಂಧನ
Team Udayavani, Mar 22, 2022, 10:20 AM IST
ಮೂಲ್ಕಿ: ಬಪ್ಪನಾಡು ಗ್ರಾಮದ ಮೂಲ್ಕಿ ಪೇಟೆಯ ಪುನರೂರು ಪೆಟ್ರೋಲ್ ಬಂಕ್ ಬಳಿ ಮಾ. 19 ರಂದು ನಡೆದ ಕೊಲೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಮುರುಗನ್ (46) ಎಂದು ಗುರುತಿಸಲಾಗಿದ್ದು, ಇವರು ಪ್ರಸ್ತುತ ತೋಕೂರು ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಮುಖವನ್ನು ಕಲ್ಲಿನಿಂದ ಜಜ್ಜಿ ವ್ಯಕ್ತಿಯನ್ನು ಕೊಲೆ ಮಾಡಿದ್ದು, ಭಾನುವಾರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕಾರ್ಕಳದ ಮುಂಡ್ಕೂರಿನ ಕಟ್ಟಡ ಕಾರ್ಮಿಕ ಹರೀಶ್ ಸಾಲಿಯಾನ್ (37) ಎಂದು ಗುರುತಿಸಲಾಗಿದೆ.
ಹರೀಶ್ ಸಾಲಿಯಾನ್ ಮತ್ತು ಆರೋಪಿ ಮುರುಗನ್ ಶನಿವಾರ ರಾತ್ರಿ ದೇವಸ್ಥಾನಕ್ಕೆ ಬಂದಿದ್ದಾಗ, ಹಣಕಾಸಿನ ವ್ಯವಹಾರದ ವಿಚಾರವಾಗಿ ಮನಸ್ತಾಪವುಂಟಾಗಿದೆ.
ಬಳಿಕ ಇಬ್ಬರೂ ಬಾರ್‌ಗೆ ಹೋಗಿ ಕುಡಿದಿದ್ದರು. ಸಣ್ಣಪುಟ್ಟ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದ ಮುರುಗನ್ ಹರೀಶ್ ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರಷ್ಯಾ ಆಕ್ರಮಣ ವಿರೋಧಿಸುವಲ್ಲಿ ಭಾರತದಿಂದ ‘ಅಸ್ಥಿರ’ ನಿಲುವು: ಜೋ ಬೈಡನ್
ಕೊಲೆ ಆರೋಪಿ ಮುರುಗನ್ ನನ್ನು ಮುಲ್ಕಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ .
ಮಂಗಳೂರು ನಗರದ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಮುಲ್ಕಿ ಪೊಲೀಸ್ ನಿರೀಕ್ಷಕರಾದ ಶ್ರೀ ಕುಸುಮಾಧರ್ ರವರ ನೇತೃತ್ವದಲ್ಲಿ, ಪಿಎಸ್ಐ ಶ್ರೀ ವಿನಾಯಕ ತೋರಗಲ್, ಪ್ರೋಬೆಷನರಿ ಪಿಎಸ್ ಐ ಕೃಷ್ಣ, ಎಎಸ್ಐ ಉಮೇಶ್, ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.