15 ಎಕರೆ ಪ್ರದೇಶದಲ್ಲಿ ಜಲ ಕ್ರಾಂತಿಗೆ ಜಿಡಗಾ ಶ್ರೀ ನಾಂದಿ
Team Udayavani, Mar 22, 2022, 10:32 AM IST
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ನವಕಲ್ಯಾಣ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿ ತಮ್ಮ ಶ್ರೀಮಠದ 15 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡುವ ಮೂಲಕ ಜಲಕ್ರಾಂತಿಗೆ ನಾಂದಿಯಾಗಿದ್ದಾರೆ.
ಜಿಡಗಾ ಗ್ರಾಮ ಪಂಚಾಯಿತಿ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ ಕೆರೆ ನಿರ್ಮಾಣಕ್ಕೆ ನಿವೇಶನ ಒದಗಿಸಿದ್ದಾರೆ. ಇದರಿಂದಾಗಿ ಮಾದರಿ ಕಾಮಗಾರಿಯಾಗಿ ಜಲ ಸಂಗ್ರಹವಾಗಿ ನೆರೆಹೊರೆಯ ರೈತರಿಗೆ ಅನುಕೂಲವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆರೆ ವಿಸ್ತಾರ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಬಯಕೆ ಹೊಂದಿರುವ ಶ್ರೀಗಳು ರಾಜ್ಯ ಸರ್ಕಾರಕ್ಕೆ 80 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿ, ಅನುದಾನಕ್ಕೆ ಕಾಯುತ್ತಿದ್ದಾರೆ.
ಈ ಕೆರೆಯಲ್ಲಿ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಮರಗಳು, ನಿಸರ್ಗದ ವಾತಾವರಣವಿರುವ ಪ್ರವಾಸಿ ತಾಣ ನಿರ್ಮಿಸಲು ಮುಂದಾಗಿದ್ದಾರೆ. ಅಲ್ಲದೇ ಕೆರೆಯ ಸುತ್ತಲಿನ ಪ್ರದೇಶ ರೈತರಿಗೆ ಕೃಷಿಗೆ ವರವಾಗಲಿದೆ. ಜತೆಗೆ ದನಕರುಗಳಿಗೆ ನೀರಿನ ಅನುಕೂಲವಾಗಿದ್ದು, ಪರಿಸರ ಜನ-ಜಾನುವಾರುಗಳಿಗೆ ನೀರಿನ ಅನುಕೂಲದ ಜೊತೆಗೆ ಜಲ ಸಂರಕ್ಷಣೆ ಮುಂದಾಗಿರುವುದು ಜಲಕ್ರಾಂತಿಗೆ ಕಾರಣವಾಗಿದೆ.
ಕೆರೆ ನಿರ್ಮಿಸಿ ನೀರಿನ ಸಂಗ್ರಹ
ಖಜೂರಿ ಕೋರಣೇಶ್ವರ ಮಠದ ಟ್ರಸ್ಟ್ ಆಶ್ರಯದಲ್ಲಿ ಶ್ರೀಮಠದ ಹೊಲದಲ್ಲಿ ಪ್ರತ್ಯೇಕ ಎರಡು ಉದ್ಯೋಗ ಖಾತ್ರಿ ಅಡಿಯಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಜಲ ಕ್ರಾಂತಿಗೆ ಶ್ರೀ ಮಠವು ನಾಂದಿಹಾಡಿದೆ. ಕೆಲವು ವರ್ಷಗಳ ಹಿಂದೆ ಖಜೂರಿ ಆಳಂಗಾ ಗ್ರಾಮದ ಮಾರ್ಗಮಧ್ಯದಲ್ಲಿನ ಮಠದ ಎರಡು ಎಕರೆ ಪ್ರದೇಶದಲ್ಲಿ ಖಜೂರಿ ಗ್ರಾಮ ಪಂಚಾಯಿತಿಯಿಂದ ಕೆರೆ ನಿರ್ಮಾಣವಾಗಿ ನೀರು ಸಂಗ್ರಹಗೊಂಡು ಜನ, ಜಾನುವಾರು, ನೆರೆ ಹೊರೆಯವರಿಗೆ ನೀರಿನ ಅನುಕೂಲವಾಗಿದೆ. ಮತ್ತೊಂದೆಡೆ ಪ್ರಸಕ್ತ ಸಾಲಿನಲ್ಲಿನ ಶ್ರೀ ಮಠದ ಬಬಲೇಶ್ವರ ಗ್ರಾಮದ ಹತ್ತಿರದ ಎರಡು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಕಾಮಗಾರಿ ಮುಕ್ತಾಯವಾಗಿದ್ದರಿಂದ ಬರುವ ಮಳೆಗಾಲಕ್ಕೆ ನೀರು ಸಂಗ್ರಹಿಸಿಕೊಳ್ಳಲು ಕೆರೆ ಸಿದ್ಧವಾಗಿದೆ. ಕೆರೆಯಿಂದ ನೀರಿನ ಅನುಕೂಲವಾಗಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ ಹೇಳುತ್ತಲೇ ಜಲ ಸಂರಕ್ಷಣೆಗೆ ಹೆಜ್ಜೆಯನ್ನಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.