ಧರ್ಮ-ಸಂಸ್ಕಾರದಿಂದ ನೆಮ್ಮದಿ: ಶ್ರೀ ಸಿದ್ದರಾಮ ಶಿವಾಚಾರ್ಯ
Team Udayavani, Mar 22, 2022, 12:40 PM IST
ಜೇವರ್ಗಿ: ಧರ್ಮ-ಸಂಸ್ಕಾರದಿಂದಲೇ ಮಾನವ ಸಮುದಾಯಕ್ಕೆ ನೆಮ್ಮದಿ ಎಂದು ಸದ್ಗುರು ವಿಶ್ವಾರಾಧ್ಯ ತಪೋವನ ಮಠದ ಪೀಠಾಧಿಪತಿ ಡಾ| ಸಿದ್ಧರಾಮ ಶಿವಾಚಾರ್ಯರು ನುಡಿದರು.
ತಾಲೂಕಿನ ಶಖಾಪುರ ಎಸ್.ಎ ಗ್ರಾಮದ ಆರಾಧ್ಯ ದೈವ ಸಿದ್ಧಕುಲ ಚಕ್ರವರ್ತಿ ಸದ್ಗುರು ವಿಶ್ವಾರಾಧ್ಯರು ಮತ್ತು ಧರ್ಮಪತ್ನಿ ಮಾತೋಶ್ರೀ ಬಸವಾಂಬೆ ತಾಯಿಯವರ 71 ನೇ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಪ್ರತಿಯೊಬ್ಬರೂ ಮಠ, ಮಂದಿರಗಳಲ್ಲಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಧರ್ಮಾಚರಣೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಅಂದಾಗ ಮಾತ್ರ ಸಾತ್ವಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಲಿಂ.ಸಿದ್ಧರಾಮ ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದರು. ಅವರ ಸಮಾಜಮುಖೀ ಚಿಂತನೆಗಳು ಈಗಲೂ ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಎಂದು ನುಡಿದರು.
ಲಿಂ.ಸಿದ್ಧರಾಮ ಶಿವಯೋಗಿಗಳ ತತ್ವ ಪದಗಳ ಆಧಾರಿತ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಬೀದರನ ಗುರುದೇವಾನಂದ ಆಶ್ರಮದ ಗಣೇಶಾನಂದ ಸ್ವಾಮೀಜಿ “ಕರುಣಿಸೆನ್ನನು ಶ್ರೀಗುರುವೇ’ ಎನ್ನುವ ವಿಷಯದ ಕುರಿತು ಪ್ರವಚನ ನೀಡಿದರು.
ಮುಖಂಡರಾದ ಸೋಮನಗೌಡ ಪಾಟೀಲ ಹಾಲಗಡ್ಲಾ, ಸಿದ್ರಾಮಪ್ಪಗೌಡ ಹರನೂರ, ಶಾಂತಗೌಡ ಪಾಟೀಲ ಐನಾಪುರ, ಬಸವಂತ್ರಾಯಗೌಡ ಮಾಲಿಪಾಟೀಲ ಹರನೂರ, ಬಾಪುಗೌಡ ಪಾಟೀಲ ಹಾಲಗಡ್ಲಾ, ನಿಂಗಣ್ಣಗೌಡ ಪಾಟೀಲ ಹರನೂರ, ಶರಣು ಸಾಹು ಗೋಗಿ, ದುಂಡಪ್ಪ ಮೋದಿ, ಶಂಕರಗೌಡ ಪಾಟೀಲ, ಸಿದ್ರಾಮಪ್ಪ ಕೋಬಾಳ, ವಿಶ್ವನಾಥಗೌಡ ಪಾಟೀಲ, ವೆಂಕೋಬರಾವ ವಾಗಣಗೇರಿ, ಶೇಖಪ್ಪಗೌಡ ಪೊಲೀಸ್ ಪಾಟೀಲ, ಮಹಾದೇವಪ್ಪ ಇಜೇರಿ, ಹಳ್ಳೆಪ್ಪ ದೇಸಾಯಿ, ಭೀಮರಾಯ ಹಾಗೂ ಶಖಾಪುರ, ಹರನೂರ, ಹಾಲಗಡ್ಲಾ, ಅವರಾದ ಗ್ರಾಮಸ್ಥರು ಭಾಗವಹಿಸಿದ್ದರು. ಡಾ| ಮಹಾಂತಗೌಡ ಪಾಟೀಲ ಸೊನ್ನ ನಿರೂಪಿಸಿ, ವಂದಿಸಿದರು. ಮತ್ತಿಮಡು ಗ್ರಾಮದ ಅಣ್ಣಾರಾಯ ಶಳ್ಳಗಿ, ಹಂಗನಳ್ಳಿಯ ಸೂರ್ಯಕಾಂತ, ಕೊಲ್ಲೂರಿನ ಕುಮಾರಿ ಸಂಜನಾ ದೇಸಾಯಿ, ರವಿಸ್ವಾಮಿ ಗೋಟೂರ ಅವರಿಂದ ಸಂಗೀತ ಸೇವೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.