ಜಾನಪದ ಕಲಾ ಪ್ರಕಾರದ ಮೂಲ ಸ್ವರೂಪ ಉಳಿಯಲಿ: ಟಿ. ತಿಮ್ಮೇಗೌಡ


Team Udayavani, Mar 22, 2022, 12:45 PM IST

ಜಾನಪದ ಕಲಾ ಪ್ರಕಾರದ ಮೂಲ ಸ್ವರೂಪ ಉಳಿಯಲಿ: ಟಿ. ತಿಮ್ಮೇಗೌಡ

ಮುಂಬಯಿ: ನಾವು ನಿಮ್ಮವರಿಗಾಗಿ ನೀವು ನಮ್ಮವರಿಗೆ ಜಾನಪದವನ್ನು ಕಟ್ಟಿ ಬೆಳೆಸಲು ಪ್ರಯತ್ನಿಸೋಣ. ಮಹಿಳೆಯರೇ ಜಾನಪದದ ಜೀವಾಳವಾಗಿದ್ದು, ಕಲಾಭಿರುಚಿವುಳ್ಳವರಿಂದ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ. ಗ್ರಾಮೀಣ ಜನರ ನಡೆ-ನುಡಿಗಳೇ ಜಾನಪದದ ಬೇರುಗಳಾಗಿದ್ದು, ಇದರ ಅವನತಿ ಬಗ್ಗೆ ಆತಂಕ ಬೇಡ. ಜಾನಪದವೇ ನಮ್ಮ ಮೂಲ ಸಂಸ್ಕೃತಿಯಾಗಿದ್ದು, ಇಂತಹ ಪವಿತ್ರ ಕಲೆಎಲ್ಲೂ ಮಿಶ್ರಣವಾಗಬಾರದು, ಜಾನಪದದ ಹೆಸರಲ್ಲಿ ಸಿನೆಮಾ ಹಾಡುಗಳ ಮಿಶ್ರಣವೂ ಸಲ್ಲದು. ಮುಖ್ಯವಾಗಿ ಜನಪದ ಕಲಾಪ್ರಕಾರಗಳು ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದಿರಲಿ. ಮೂಲ ಜಾನಪದ ನಶಿಸಿಹೋಗದಂತೆ ಜಾಗೃತರಾಗುವ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ ಬೆಂಗಳೂರು ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ  ಮಾ. 20ರಂದು ಸಂಜೆ  ನಾಮಫಲಕ ಅನಾವರಣಗೊಳಿಸಿ ಕರ್ನಾಟಕ ಜಾನಪದ ಪರಿಷತ್‌ ಬೆಂಗಳೂರು ಇದರ ಮಹಾರಾಷ್ಟ್ರ ಘಟಕವನ್ನು  ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರು ಒಂದಾಗಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ-ಬೆಳೆಸಲು ಪಣ ತೊಡೋಣ ಎಂದರು.

ಕರ್ನಾಟಕ ಜಾನಪದ ಪರಿಷತ್‌ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ  ಅಧ್ಯಕ್ಷತೆಯಲ್ಲಿ  ಜರಗಿದ ಸಮಾರಂಭವನ್ನು ಲೆಕ್ಕಪರಿಶೋಧಕ ಪ್ರವೀಣ್‌ ಭೋಜ ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ, ನಾನು ಜಾನಪದ ಕಲೆಯ ಆರಾಧಕ. ಜಾನಪದ ಸಾಹಿತ್ಯವೆಂದರೆ ಸಾಮಾನ್ಯ ಜನರ ಜ್ಞಾನದಿಂದ ಜನರ ಸಂತೋಷಕ್ಕಾಗಿರುವ ಕಲೆಯಾಗಿದೆ. ಸಾಹಿತ್ಯ, ಹಾಡು, ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಇವೆಲ್ಲವೂ ಮನುಷ್ಯನ ಬದುಕಿನಲ್ಲಿ ಅವಿನಾಭಾವ ಸಂಬಂಧ ಹೊಂದಿರುವಂಥದ್ದಾಗಿದೆ. ಜಾನಪದ ಅನ್ನುವುದು ನಮ್ಮ ಸಂಪ್ರದಾಯದ ಪ್ರಜ್ಞೆ ಮತ್ತು ಸಂಪ್ರದಾಯದ ಕಲೆಯ ಕೊಂಡಿಯಗಿದೆ. ಇದನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ ಕರ್ತವ್ಯ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಗುರ್ಮೆ ಫೌಂಡೇಶನ್‌ ಕಾಪು ಇದರ ಸಂಸ್ಥಾಪಕಾ ಧ್ಯಕ್ಷ, ವಾಗ್ಮಿ ಗುರ್ಮೆ ಸುರೇಶ್‌ ಶೆಟ್ಟಿ ಬಳ್ಳಾರಿ ಮುಖ್ಯ ಅತಿಥಿಯಾಗಿ ಹಾಗೂ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ ಜಬ್ಟಾರ್‌ ಸಮೋ ಸಂಪಾಜೆ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದಹಾಸ ಕೆ. ಶೆಟ್ಟಿ ಹಾಗೂ ಕನ್ನಡ ಜಾನಪದ ಪರಿಷತ್‌ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಡಾ| ಸುರೇಂದ್ರಕುಮಾರ್‌ ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಪಕ್ಕಳ, ಗೌರವ ಪ್ರಧಾನ ಕೋಶಾಧಿಕಾರಿ ಗಣೇಶ್‌ ಜಿ. ನಾಯ್ಕ, ಜತೆ ಕಾರ್ಯದರ್ಶಿ ಪದ್ಮನಾಭ ಸಸಿಹಿತ್ಲು, ಜತೆ ಕೋಶಾಧಿಕಾರಿ ಕುಸುಮಾ ಸಿ. ಪೂಜಾರಿ, ಘಟಕದ ಮಹಿಳಾ ವಿಭಾಗಾಧ್ಯಕ್ಷೆ ಅನಿತಾ ಯು. ಶೆಟ್ಟಿ, ಸಾಂಸ್ಕೃತಿಕ ವಿಭಾಗಾಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಉಪಸ್ಥಿತದ್ದರು. ಮಹಾರಾಷ್ಟ್ರದ ಹೆಸರಾಂತ ಕಲಾ ತಂಡಗಳಿಂದ ಜಾನಪದ ಸಮೂಹ ನೃತ್ಯ ಸ್ಪರ್ಧೆ, ಸಮೂಹ ಗಾಯನ, ಹಿರಿಯ ಅರ್ಥಧಾರಿ ಜಬ್ಟಾರ್‌ ಸಮೋ ತಂಡದಿಂದ “ಕುರುಕ್ಷೇತ್ರದಲ್ಲಿ ಕೌರವ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ನೃತ್ಯ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಅಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಅವರು ವಿವಿಧ ಸಂಘ-ಸಂಸ್ಥೆಗಳ ಮುಖ್ಯ ಸ್ಥರು, ಗಣ್ಯರನ್ನು ಗೌರವಿಸಿದರು. ಸ್ಪರ್ಧೆಯ ತೀರ್ಪುಗಾರರಾದ ಪುಷ್ಕಳ್‌ಕುಮಾರ್‌ ತೋನ್ಸೆ, ಅಭಿಜ್ಞಾ ಹೆಗ್ಡೆ ಹಾಗೂ ಸ್ಪರ್ಧಾ ತಂಡದ ಮೇಲ್ವಿಚಾರಕರನ್ನು ಗೌರವಿಸಲಾಯಿತು.  ಮಲ್ಲಿಕಾ ಆರ್‌. ಶೆಟ್ಟಿ, ವೀಣಾ ಎಂ. ಶೆಟ್ಟಿ, ಪ್ರಮೀಳಾ ಆರ್‌. ಶೆಟ್ಟಿ  ಪ್ರಾರ್ಥನೆಗೈದರು. ನಾಡಗೀತೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಡಾ| ಸುರೇಂದ್ರಕುಮಾರ್‌ ಹೆಗ್ಡೆ ಸ್ವಾಗತಿಸಿ ದರು. ಅಶೋಕ ಪಕ್ಕಳ ಅತಿಥಿಗಳನ್ನು ಪರಿಚಯಿಸಿದರು. ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸರ್ವರ ಪ್ರಶಂಸೆಗೆ  ಪಾತ್ರವಾದ ಕಾರ್ಯಕ್ರಮ :

ಕರ್ನಾಟಕದ ಜಾನಪದ ಕಲೆಯನ್ನು ರಂಗದ ಮೇಲೆ ಸಾûಾತ್ಕರಿಸಿದ ಜಾನಪದ ಪರಿಷತ್‌ ಮಹಾರಾಷ್ಟ್ರ ಘಟಕವು ಜನಮನದ ಆಶೋತ್ತರ  ಗಳಿಗೆ ಸ್ಪಂದಿಸಿದ ಪರಿ ಅನನ್ಯವಾಗಿತ್ತು. ಘಟಕದ ಅಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಅವರ ಸದ್ಗುಣತೆ, ತೆರೆಮರೆಯ ಕೊಡುಗೆಗೆ ಸಭಾಗೃಹ ತುಂಬಿ ತುಳುಕುವಂತೆ ಮಾಡಿದ ಮುಂಬಯಿ ತುಳು-ಕನ್ನಡಿಗರ ಪ್ರೋತ್ಸಾಹ ಅಪಾರವಾಗಿತ್ತು. ವಿಶೇಷವೆಂದರೆ ಸಂಪೂರ್ಣ ಕಾರ್ಯಕ್ರಮವು ಸಮಯಕ್ಕೆ ಅನುಗುಣವಾಗಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಪ್ರಸಿದ್ಧ ವಾಗ್ಮಿಗಳಾದ ಗುರ್ಮೆ ಸುರೇಶ್‌ ಶೆಟ್ಟಿ ಮತ್ತು ಯಕ್ಷಗಾನ ಅರ್ಥಧಾರಿ ಜಬ್ಟಾರ್‌ ಸಮೋ, ಲೆಕ್ಕಪರಿಶೋಧಕ ಪ್ರವೀಣ್‌ ಭೋಜ ಶೆಟ್ಟಿ ಅವರ ಮಾತುಗಳು ಭಾಗವಹಿಸಿದ್ದವರನ್ನು ಮಂತ್ರಮುಗ್ಧಗೊಳಿಸಿತು. ಡಾ| ಆರ್‌. ಕೆ. ಶೆಟ್ಟಿ ಅವರ ತಂಡದ ಶ್ರದ್ಧೆ, ಪರಿಶ್ರಮ, ಪ್ರಮಾಣಿಕತೆ ಗಣ್ಯರ ಪ್ರಶಂಸೆಗೆ ಪಾತ್ರವಾಯಿತು.

ಕರ್ತವ್ಯವೇ ಧರ್ಮ ಸಂಗಮವಾಗಿದ್ದು, ಜಾನಪದದ ಹೆಸರಲ್ಲಿ ಸಾಧಕರ ಸಾಮರ್ಥ್ಯ ಮೇಳೈಸಿ ಸಂಕಲ್ಪ ಸಿದ್ಧಿಯಾಗುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಭಾರತೀಯರ ಬಾಂಧವ್ಯಕ್ಕೆ ಜಾನಪದವೂ ಒಂದು ಶಕ್ತಿಯಾಗಿದ್ದು, ಮಕ್ಕಳಿಗೆ ಬುದ್ಧಿ ತಿಳಿಹೇಳುವ ಜಾನಪದ ಮನಪರಿವರ್ತನ ಶಕ್ತಿ ಹೊಂದಿದೆ. ನಮ್ಮ ಪೂರ್ವಜರು ಜಾನಪದದ ಮೂಲಕ ಬದುಕು ಕಟ್ಟಿಕೊಂಡು ನಮಗೆ ಅನುಭವದ ಸಾಹಿತ್ಯ ಕಟ್ಟಿಕೊಟ್ಟು ಜಾನಪದವನ್ನು ವರವನ್ನಾಗಿಸಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಪಸರಿಸಿ ಬಂದಿರುವ ಶ್ರೇಷ್ಠ ಕಲೆ ಇದಾಗಿದ್ದು, ಯುವ ಜನಾಂಗಕ್ಕೆ ಜಾನಪದವನ್ನು ಹಸ್ತಾಂತರಿಸಲು ಇಂತಹ ಸಂಸ್ಥೆಗಳ ಪರಿಶ್ರಮದಿಂದ ಸಾಧ್ಯವಾಗಲಿ.-ಗುರ್ಮೆ ಸುರೇಶ್‌ ಶೆಟ್ಟಿ ಉದ್ಯಮಿ, ಸಮಾಜ ಸೇವಕರು, ಸಾಹಿತಿ

ಜಾನಪದ ಎಂದರೇನು, ಯಾಕೆ ಉಳಿಸಿ ಬೆಳೆಸಬೇಕು, ಜಾನಪದದಿಂದ ಏನಾಗುತ್ತದೆ ಎನ್ನುವವರಿಗೆ ಈ ಉತ್ಸವ ಉತ್ತರ ನೀಡಿದೆ. ನಮ್ಮ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಯುವ ಜನಾಂಗಕ್ಕೆ ಪರಿಚಯಿಸಿ, ಮುಂದಿನ ಹಂತಕ್ಕೆ ಕೊಂಡೊಯ್ಯುವ ಉದ್ದೇಶ ನಮ್ಮದಾಗಿದೆ. ಮುಂದೆ ಮಹಾರಾಷ್ಟ್ರದಾದ್ಯಂತ ಇದನ್ನು ವಿಸ್ತರಿಸುವ ಪ್ರಯತ್ನ ಮಾಡಲಿದ್ದೇವೆ. ಟಿ. ತಿಮ್ಮೇಗೌಡ ಅವರು ನೀಡಿದ ಜವಾಬ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲಿದ್ದೇವೆ.-ಡಾ| ಆರ್‌. ಕೆ. ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್‌ ಮಹಾರಾಷ್ಟ್ರ ಘಟಕ

ಒಂದು ತಲೆಮಾರಿನ ಸಾಮಾಜಿಕ, ಚಾರಿತ್ರಿಕ ಸಂಗತಿಗಳ ಮರು ಮನನ, ಸೃಷ್ಟೀಕರಣವನ್ನು ಪುನರ್‌ ಕಟ್ಟುವ ಕೆಲಸವನ್ನು ಮಾಡಬೇಕಾದ ಅನಿವಾರ್ಯವಿದೆ. ಮಹಾರಾಷ್ಟ್ರದಲ್ಲಿನ ಮಕ್ಕಳು ಜಾನಪದದ ಪ್ರಜ್ಞೆ ಮೂಡಿಸಿರುವುದು ನಿಜಕ್ಕೂ ಅಭಿನಂದನೀಯ. ಇದು ಕಲಾಸಕ್ತ ಆಸ್ತಿಕರಿಗೆ ಉತ್ತೇಜನ ಮತ್ತು ಬೆನ್ನೆಲುಬುವಿನ ಪಾಠವಾಗಿದೆ. ಜಾಗತೀಕರಣಕ್ಕೆ ಪ್ರಬಲವಾದ ಪೈಪೋಟಿಯನ್ನು ಕೊಡಬಲ್ಲ ಕಲಾಪ್ರಕಾರವಿದ್ದರೆ ಅದು ಯಕ್ಷಗಾನ ಮಾತ್ರ. ಇಂತಹ ಕಲೆಯ ಭೌತಿಕವಾದ ಸಾಹಿತ್ಯವನ್ನು ತಂತ್ರಜ್ಞಾನದ ಲೈವ್‌ ಬದಲಾಗಿ ಪ್ರತ್ಯಕ್ಷವಾಗಿ ಪ್ರದರ್ಶಿಸುವ ಪ್ರಯತ್ನ ನಡೆಯಬೇಕು.-ಜಬ್ಬಾರ್‌ ಸಮೋ ಸಂಪಾಜೆ ಪ್ರಸಿದ್ಧ ಯಕ್ಷಗಾನ ಅರ್ಥಧಾರಿ

 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

4

Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್‌ ವೆಲ್ಡಿಂಗ್‌ ದೋಷ ಕಾರಣ; ಸಮಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.