![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 22, 2022, 2:17 PM IST
ರಾಮಗನರ: ತಾಲೂಕಿನ ಬಿಡದಿ ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ ಎಂಬುದು ಮರಿಧೀಚಿಕೆಯಾಗಿದೆ. ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ತಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಕಳೆದುಕೊಂಡಿರುವ ಕೆಲವು ನಿವಾಸಿಗಳಿಂದಾಗಿ ಬಿಡದಿ ಪಟ್ಟಣದ ಬಹುತೇಕ ಬಡಾವಣೆಗಳು ಗಬ್ಬೆದ್ದು ಹೋಗಿದೆ.
ಬಹುತೇಕ ಎಲ್ಲ ಬಡಾವಣೆಗಳಲ್ಲೂ ಟನ್‌ಗಟ್ಟಲೆ ತ್ಯಾಜ್ಯ ವಿಲೇವಾರಿಯಾಗದೆ ರಸ್ತೆ ಬದಿಯಲ್ಲಿ ಶೇಖರಣೆ ಯಾಗುತ್ತಿದೆ. ತ್ಯಾಜ್ಯ ಕೊಳೆತು ನಾರುತ್ತಿದ್ದು, ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಆದರೆ ಪುರಸಭೆಯ ಅಧಿಕಾರಿಗಳು ತ್ಯಾಜ್ಯವನ್ನು ವಿಲೇವಾರಿ ಮಾಡದೆ ಇದು ತಮ್ಮ ಹೊಣೆ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೊಂದೆಡೆ ರಸ್ತೆ ಬದಿಯನ್ನು ತಿಪ್ಪೆ ಯನ್ನಾಗಿಸಿಕೊಂಡಿರುವ ನಾಗರಿಕರು ಗೃಹ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಬಿ
ಡದಿಯ ಪ್ರತಿಷ್ಠಿತ ಬಡಾವಣೆಗಳ ಪೈಕಿ ಒಂದು ಯೋಗೇಶ್ ಲೇ ಔಟ್‌ನ ಮುಖ್ಯ ರಸ್ತೆಯಲ್ಲಿ ವಾರ ಕಳೆದರೂ ತ್ಯಾಜ್ಯ ರಾಶಿ ವಿಲೇವಾರಿ ಆಗಿಲ್ಲ. ಇಲ್ಲಿನ ಕೆಲವು ನಿವಾಸಿಗಳು ಸಹ ತಮ್ಮ ಹೊಣೆ ಮರೆತು ಇಲ್ಲಿ ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದ್ದಾರೆ. ತ್ಯಾಜ್ಯ ಈಗ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿದ್ದು, ಪಾದಚಾರಿಗಳು ತ್ಯಾಜ್ಯವನ್ನು ತುಳಿದೇ ಹೋಗಬೇಕಾಗಿದೆ.
ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪುರಸ ಭೆ ವಾಹನಗಳಿಗೆ ಕೊಡಬೇಕಾದದ್ದು ನಾಗರಿಕರ ಕರ್ತವ್ಯ. ಪುರಸಭೆಯ ವಾಹನ ಬರದಿದ್ದರೆ ಅಧಿಕಾರಿಗಳಿಗೆ ತಿಳಿಸಿ ವಾಹನ ಕರೆಸಿಕೊಂಡು ತ್ಯಾಜ್ಯ ಕೊಡ ಬೇಕು. ಆದರೆ ಇಲ್ಲಿರುವ ಪ್ರಜ್ಞಾವಂತ ನಾಗರಿಕರು ಸಹ ತಮ್ಮ ಹೊಣೆ ಮರೆತು ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿಯುತ್ತಿದ್ದಾರೆ.
ಬಳಸಲು ಅಯೋಗ್ಯವಾದ ಹಾಸಿಗೆಗಳನ್ನು ತಂದು ರಸ್ತೆಯಲ್ಲಿ ಬಿಸಾಡಿ ಹೋಗಿರುವು ದನ್ನು ಇಲ್ಲಿ ಕಾಣಬಹುದು. ಬಿಡದಿ ಪುರಸಭೆಯ ಅಧಿಕಾರಿಗಳು ಕಸ ವಿಲೇವಾರಿಗೆ ಸ್ಥಳ ಇಲ್ಲ ಎಂಬ ನೆಪ ಹೇಳದೆ, ತಕ್ಷಣ ರಸ್ತೆ ಬದಿಗಳಲ್ಲಿ ಶೇಖರಣೆ ಆಗಿರುವ ತ್ಯಾಜ್ಯವನ್ನು ತೆರವುಗೊಳಿಸ ಬೇಕು. ನಾಗರಿಕರು ಪುರಸಭೆಯ ವಾಹನಗಳಿಗೆ ತ್ಯಾಜ್ಯ ಕೊಟ್ಟು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು ಎಂಬುದು ಬಿಡದಿಯ ಬಹುತೇಕ ನಾಗರೀಕರ ಅಭಿಪ್ರಾಯ
ಯೋಗೇಶ್ ಬಡಾವಣೆಯಲ್ಲಿ ಕಳೆದ ಒಂದು ವಾರದಿಂದ ಶೇಖರಣೆ ಆಗಿರುವ ತ್ಯಾಜ್ಯ ತೆರವಾಗಿಲ್ಲ. ತ್ಯಾಜ್ಯ ಕೊಳೆತು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳು ತಕ್ಷಣ ಈ ಸಮಸ್ಯೆಯತ್ತ ಗಮನ ಹರಿಸಿ ತ್ಯಾಜ್ಯ ತೆರವುಗೊಳಿಸಬೇಕು. – ಮುತ್ತಣ್ಣ , ನಾಗರಿಕರು, ಬಿಡದಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.