ನಾಳೆ ಗುಬ್ಬಿ-ಅರಣ್ಯ-ಜಲ ಸಂರಕ್ಷಣೆ ಜಾಗೃತಿಗಾಗಿ ಸೈಕ್ಲಿಂಗ್
Team Udayavani, Mar 22, 2022, 4:40 PM IST
ವಿಜಯಪುರ: ವಿಶ್ವ ಗುಬ್ಬಚ್ಚಿ ದಿನಾಚರಣೆ(ಮಾ. 20), ವಿಶ್ವ ಅರಣ್ಯ ದಿನಾಚರಣೆ (ಮಾ. 22) ಹಾಗೂ ವಿಶ್ವ ಜಲ ದಿನಾಚರಣೆ (ಮಾ. 23) ಅಂಗವಾಗಿ ಪರ್ಯಾವರಣ ಸಂರಕ್ಷಣಾ ವೇದಿಕೆಯಿಂದ ಮಾ. 23ರಂದು ನಗರದಲ್ಲಿ ಬೃಹತ್ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.
ಪರಿಸರ ಸಂರಕ್ಷಣಾ ಗತಿವಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸೈಕಲ್ ಜಾಥಾ ಕುರಿತು ಸೋಮವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಬಸವರಾಜ ಬೈಜಚಬಾಳ ಹಾಗೂ ಸೈಕ್ಲಿಂಗ್ ಸಂಸ್ಥೆ ರಾಜ್ಯಾಧ್ಯಕ್ಷ ರಾಜು ಬಿರಾದಾರ, ವಿವಿಧ ಪರಿಸರ ಸಂರಕ್ಷಣೆ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
ಸೈಕಲ್ ಜಾಥಾದಲ್ಲಿ ಸುಮಾರು 500 ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದ ಬಂಜಾರಾ ಕ್ರಾಸ್‌ನಲ್ಲಿ ಮಾ. 23ರಂದು ಬೆಳಗ್ಗೆ 6ಕ್ಕೆ ಚಾಲನೆ ದೊರೆಯಲಿದ್ದು, ಲಿಂಗದ ಗುಡಿ, ಸಿದ್ಧೇಶ್ವರ ಗುಡಿ, ಮಹಾತ್ಮಾ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಐತಿಹಾಸಿಕ ಗಗನ ಮಹಲ್ ಬಂದು ತಲುಪಲಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಸುನೀಲಕುಮಾರ, ಜಿ.ಪಂ. ಸಿಇಒ ರಾಹುಲ್ ಸಿಂಧೆ, ಎಸ್ಪಿ ಆನಂದಕುಮಾರ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪರಿಸರದ ವೈವಿಧ್ಯತೆ ಸಂರಕ್ಷಣೆ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪರಿಸರಕ್ಕೆ ಪೂರಕವಾಗಿರುವ ಸೈಕ್ಲಿಂಗ್ ಮೂಲಕವೇ ಜಾಗೃತಿಗೆ ಮುಂದಾಗಿದ್ದೇವೆ ಎಂದರು.
ಹೆಚ್ಚುತ್ತಿರುವ ಮರಗಳ ವಿನಾಶದಿಂದ ಶುದ್ಧ ಗಾಳಿಗೆ ಸಂಚಕಾರ ಬಂದಿದೆ. ಪಕ್ಷಿ ಸಂಕುಲಕ್ಕೆ ಅದರಲ್ಲೂ ಗುಬ್ಬಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ಮತ್ತೂಂದೆಡೆ ಜಲ ಮಾಲಿನ್ಯ, ಜಲಮೂಲಗಳ ವಿನಾಶದಿಂದಾಗಿ ಮನುಕುಲ ಮಾತ್ರವಲ್ಲ ಇಡೀ ಜೀವವೈವಿಧ್ಯಕ್ಕೆ ಅಪಾಯದ ದುಸ್ಥಿತಿಗೆ ತಲುಪಿದೆ. ಇದನ್ನು ತಡೆಯಲು ಜನರದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಸರಕ್ಕೆ ಮಾರಕವಾಗಿರುವ ನಿಷೇಧಿತ ಪ್ಲಾಷ್ಟಿಕ್ ಬಳಕೆ ಮಾಡದತೆ, ಪರಿಸರ ಸ್ನೇಹಿ ಚೀಲಗಳನ್ನು ಮಾರುಕಟ್ಟೆಗೆ ನಾವೇ ಕೊಂಡೊಯ್ದು ವಸ್ತುಗಳನ್ನು ಖರೀದಿಸುವ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪರಿಶುದ್ಧ ಗಾಳಿ ಮಾತ್ರವಲ್ಲ ಪರಿಸರ ಸಂರಕ್ಷಣೆಯ ಪಾಠ ಕಲಿತಿದ್ದೇವೆ. ಹೀಗಾಗಿ ಸಸಿಗಳನ್ನು ನೆಟ್ಟು ಮರಗಳಾಗಿ ಬೆಳೆಸುವ ಮಹತ್ವ, ಮನೆಗಳ ಛಾವಣಿ ಮೇಲೆ ಹಸಿರು ಮನೆಗಳ ನಿರ್ಮಾಣ ಹಾಗೂ ಮನೆಗಳಲ್ಲಿನ ತ್ಯಾಜ್ಯದ ನೀರಿನ ಮರು ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಮಳೆ ನೀರು ಕೊಯ್ಲು ಮೂಲಕ ಜಲ ಸಂರಕ್ಷಣೆ ಜೊತೆಗೆ ವಿದ್ಯುತ್ ಮಿತ ಬಳಕೆಯಿಂದ ಜಲ ಆಧಾರಿತ ವಿದ್ಯುತ್ ಉತ್ಪಾದನೆ ತಗ್ಗಸಿ ಹಾಗೂ ಸೌರ ವಿದ್ಯುತ್ ಬಳಕೆ ಮೂಲಕ ಪರಿಸರ ಸ್ನೇಹಿ ಇಂಧನ ಬಳಸುವ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಸಿದ್ದೇವೆ ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಪರಿಸರದ ಎಲ್ಲ ವಿಭಾಗಕ್ಕೆ ಅಪಾಯ ತಂದೊಡ್ಡಿರುವ ಪ್ಲಾಸ್ಟಿಕ್ ಮರು ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ, ಜನ ಸಮುದಾಯದ ಸಹಕಾರದಲ್ಲಿ ಅನುಷ್ಠಾನಕ್ಕೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಪರಿಸರ ಸಂರಕ್ಷಣೆ ಗತಿವಿ ಸಂಸ್ಥೆಯ ವಿವಿಧ ವಿವಿಧ ವಿಭಾಗಗಳ ಪ್ರಮುಖರಾದ ಶಶಿಧರ ರೂಡಗಿ, ಪಲ್ಲವಿ ವಾಯದಂಡೆ, ಡಾ| ಬಾಬು ಸಜ್ಜನ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.