ಸೌರವ್ಯೂಹದಾಚೆ ಇವೆ 5 ಸಾವಿರ ಗ್ರಹಗಳು! ನಾಸಾ ವಿಜ್ಞಾನಿಗಳಿಂದ ಈ ಆವಿಷ್ಕಾರ
ಭೂಮಿ ಮಾದರಿಯದ್ದೂ ಸೇರಿ ಭಿನ್ನ ಬಾಹ್ಯಗ್ರಹಗಳ ಪತ್ತೆ
Team Udayavani, Mar 23, 2022, 7:50 AM IST
ನ್ಯೂಯಾರ್ಕ್: ನಮ್ಮ ಸೌರವ್ಯವಸ್ಥೆಯ ಹೊರಗೆ 5 ಸಾವಿರದಷ್ಟು ಜಗತ್ತುಗಳಿದ್ದು, ಆ ಪೈಕಿ ಕೆಲವು ಭೂಮಿಯಂತೆಯೇ ಇವೆ ಎಂದರೆ ನಂಬುತ್ತೀರಾ?
ನಂಬಲೇಬೇಕು. ಬ್ರಹ್ಮಾಂಡದ ಗಡಿಯಾಚೆ ಒಂದು ಹೆಜ್ಜೆ ಮುಂದೆ ಇಟ್ಟಿರುವ ನಾಸಾ, ಬಾಹ್ಯಾಕಾಶದಾಳದಲ್ಲಿ ಆವಿಷ್ಕಾರಕ್ಕೊಳಪಡಲು ಕಾಯುತ್ತಿರುವ 5 ಸಾವಿರಕ್ಕೂ ಅಧಿಕ ಗ್ರಹಗಳಿವೆ ಎಂಬುದನ್ನು ಕಂಡುಕೊಂಡಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು 65 ಹೊಸ ಗ್ರಹಗಳನ್ನು ಆವಿಷ್ಕರಿಸಿದ್ದು, ನಮ್ಮ ಸೌರವ್ಯವಸ್ಥೆಯ ಹೊರಗೆ ಪ್ರತ್ಯೇಕ ನಕ್ಷತ್ರಗಳ ಕಕ್ಷೆಯಲ್ಲಿ ಸುತ್ತುತ್ತಿರುವ ಸಾವಿರಾರು ಗ್ರಹಗಳ ಅಸ್ತಿತ್ವವನ್ನೂ ಪತ್ತೆಹಚ್ಚಿದೆ. ಈ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಮೈಲುಗಲ್ಲನ್ನು ನಾಸಾ ಸಾಧಿಸಿದೆ.
ಈಗ ಪತ್ತೆಯಾಗಿರುವ 65 ಬಾಹ್ಯಗ್ರಹಗಳ ಮೇಲ್ಮೈ ಗಳಲ್ಲಿ ನೀರು, ಸೂಕ್ಷ್ಮಾಣುಜೀವಿಗಳು, ಅನಿಲಗಳು ಅಥವಾ ಜೀವಿಗಳಿವೆಯೇ ಎಂಬುದರ ಬಗ್ಗೆ ಅಧ್ಯಯನವನ್ನೂ ನಾಸಾ ನಡೆಸಲಿದೆ.
ಹೇಗಿವೆ 5 ಸಾವಿರ ಗ್ರಹಗಳು?
ಸೌರವ್ಯವಸ್ಥೆಯ ಹೊರಗೆ ಪತ್ತೆಯಾಗಿರುವ 5 ಸಾವಿರ ಗ್ರಹಗಳು ಸಂಯೋಜನೆ ಹಾಗೂ ಗುಣವಿಶೇಷಗಳಲ್ಲಿ ಒಂದಕ್ಕೊಂದು ಭಿನ್ನವಾಗಿವೆ. ಕೆಲವೊಂದು ಭೂಮಿಯ ಮಾದರಿಯ ಸಣ್ಣ ಗಾತ್ರದ ಶಿಲೆಗಳಿರುವ ಲೋಕಗಳಾದರೆ, ಗುರು ಗ್ರಹಕ್ಕಿಂತಲೂ ದೊಡ್ಡ ಗಾತ್ರದ ಗ್ರಹಗಳು, ನಮ್ಮ ಗ್ರಹಕ್ಕಿಂತ ದೊಡ್ಡದಾಗಿರುವ ಸೂಪರ್-ಅರ್ತ್‌ಗಳು, ನೆಪ್ಚೂನ್ ನ ಕಿರಿಯ ಸೋದರನಂತಿರುವ ಮಿನಿ ನೆಪ್ಚೂನ್ ಗಳೂ ಅಲ್ಲಿವೆ. ಏಕಕಾಲಕ್ಕೆ ಎರಡು ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಗ್ರಹಗಳೂ, ಮೃತ ನಕ್ಷತ್ರಗಳ ಕಕ್ಷೆಯಲ್ಲಿ ಸುತ್ತುತ್ತಿರುವ ಗ್ರಹಗಳೂ ಕಳೆದ 3 ದಶಕಗಳಲ್ಲಿ ಪತ್ತೆಯಾಗಿವೆ.
Today marks the discovery of over 5,000 known planets beyond our solar system according to the @NASAExoplanets Archive! ??
Listen to decades of discovery, and learn about the significance of each sound: https://t.co/RnZwqKfYYW pic.twitter.com/ZnXWOlvAPQ
— NASA (@NASA) March 21, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.