ರಷ್ಯಾಕ್ಕೆ ದೊಡ್ಡಮಟ್ಟದ ಹಾನಿ; 9,861 ಮಂದಿ ಯೋಧರ ಸಾವು; ಉಕ್ರೇನ್‌ನ ಮರುವಶಕ್ಕೆ ಕೀವ್‌ ನಗರ

Team Udayavani, Mar 23, 2022, 7:15 AM IST

ರಷ್ಯಾಕ್ಕೆ ದೊಡ್ಡಮಟ್ಟದ ಹಾನಿ; 9,861 ಮಂದಿ ಯೋಧರ ಸಾವು; ಉಕ್ರೇನ್‌ನ ಮರುವಶಕ್ಕೆ ಕೀವ್‌ ನಗರ

ಜರ್ಮನಿ ಪ್ರವೇಶಿಸಿದ ಉಕ್ರೇನ್‌ನ ನಿರಾಶ್ರಿತರ ತಂಡ.

ಕೀವ್‌/ಮಾಸ್ಕೋ: ಉಕ್ರೇನ್‌ ಮೇಲೆ ದಾಳಿ ನಡೆಸಿ ರಷ್ಯಾ ಇದುವರೆಗೆ 9,861 ಸೈನಿಕರನ್ನು ಕಳೆದುಕೊಂಡಿದೆ ಮತ್ತು 16 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಗಾಯಗಳಾಗಿವೆ. ರಷ್ಯಾ ಸರಕಾರ‌ದ ಪರವಾಗಿರುವ ವೆಬ್‌ಸೈಟ್‌ ಒಂದರಲ್ಲಿ ಈ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿದೆ.

ಜಗತ್ತಿನಾದ್ಯಂತ ಈ ಅಂಶ ಪ್ರಚಾರ ಪಡೆದುಕೊಳ್ಳುತ್ತಲೇ ಅದನ್ನು ವಾಪಸ್‌ ಪಡೆಯಲಾಗಿದೆ.

ಅಫ್ಘಾನಿಸ್ಥಾನದಲ್ಲಿ ರಷ್ಯಾ 1979ರಿಂದ 10 ವರ್ಷ ಗಳ ಕಾಲ ನಡೆಸಿದ್ದ ಸಂಘರ್ಷದಲ್ಲಿ 15 ಸಾವಿರ ಮಂದಿ ಸೈನಿಕರು ಸಾವಿಗೀಡಾಗಿದ್ದರು. ಈ ನಡುವೆ 2,389 ಮಂದಿ ಮಕ್ಕಳನ್ನು ಲುಗಾನ್ಸ್ಕ್  ಮತ್ತು ಡಾನೆಸ್ಕ್ ನಿಂದ ರಷ್ಯಾ ಅಪಹರಿಸಿದೆ ಎಂದು ಅಮೆರಿಕ ಸರಕಾರ‌ ಆರೋಪಿಸಿದೆ. ಇದೇ ವೇಳೆ, ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಇನ್ನೊಂದೆಡೆ, ಕೀವ್‌ ನಗರದ ಹೊರವಲಯವನ್ನು ಉಕ್ರೇನ್‌ ಸೇನೆ ಮರುವಶ ಮಾಡಿಕೊಂಡಿದೆ.

ಪುತಿನ್‌ ಕಳ್ಳ ಆಸ್ತಿ ಮೊತ್ತ 1.2 ಲಕ್ಷ ಕೋಟಿ!: ವಿಶ್ವದ ನಾನಾ ರಾಷ್ಟ್ರಗಳಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ರವರಿಗೆ ಸೇರಿದೆಯೆನ್ನಲಾದ ಅಂದಾಜು 1.2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಇದೆ ಎಂಬ ಮಾಹಿತಿಯನ್ನು “ಆರ್ಗನೈಸ್ಡ್ ಕ್ರೈಮ್‌ ಆ್ಯಂಡ್‌ ಕರಪ್ಷನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ, “ಪುತಿನ್‌ರವರ ಈ ಬೇನಾಮಿ ಆಸ್ತಿಯಲ್ಲಿ ನಾನಾ ದೇಶಗಳಲ್ಲಿ ಹೇರಳವಾದ ಧನವಿರುವ ಬ್ಯಾಂಕ್‌ ಖಾತೆಗಳು, ಐಷಾರಾಮಿ ಹಡಗುಗಳು, ಖಾಸಗಿ ಜೆಟ್‌ಗಳು, ಲಂಡನ್‌, ದುಬೈಯಲ್ಲಿರುವ ಐಷಾರಾಮಿ ಬಂಗಲೆ ಸೇರಿದೆ’ ಎನ್ನಲಾಗಿದೆ.

ಭಾರತವನ್ನು ಟೀಕಿಸಿದ ಬೈಡನ್‌: ಉಕ್ರೇನ್‌ ಮೇಲೆ ದಾಳಿ ನಡೆಸಿರುವ ರಷ್ಯಾದ ಬಗ್ಗೆ ಭಾರತ ಮಾತನಾಡಲು ಹೆದರುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಭಾರತವನ್ನು ಟೀಕಿಸಿದ್ದಾರೆ. “ಪುತಿನ್‌ರವರ ಯುದ್ಧದಾಹವನ್ನು ಕ್ವಾಡ್‌ ಸದಸ್ಯ ರಾಷ್ಟ್ರಗಳಾದ ಜಪಾನ್‌, ಆಸ್ಟ್ರೇಲಿಯ ಖಂಡಿಸಿವೆ. ಆದರೆ ಕ್ವಾಡ್‌ ಸದಸ್ಯನಾಗಿರುವ ಭಾರತ ಸುಮ್ಮನಿದೆ. ಇದು, ರಷ್ಯಾ ಬಗ್ಗೆ ಭಾರತ ಹೊಂದಿರುವ ಭೀತಿಯನ್ನು ತೋರಿಸುತ್ತದೆ’ ಎಂದಿದ್ದಾರೆ.

3.5 ಕೋಟಿ ಮಂದಿ ವಲಸೆ
ಉಕ್ರೇನ್‌ ವಿರುದ್ಧ ರಷ್ಯಾ ಪ್ರಹಾರ ನಡೆಸಲಾರಂಭಿಸಿದ ಬಳಿಕದಿಂದ ಇದುವರೆಗೆ 3.5 ಕೋಟಿ ಮಂದಿ (35 ಮಿಲಿಯ) ಆ ದೇಶವನ್ನು ತೊರೆದಿದ್ದಾರೆ. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಐರೋಪ್ಯ ಒಕ್ಕೂಟ ಕಂಡ ಅತ್ಯಂತ ದೊಡ್ಡ ಜನರ ವಲಸೆ ಇದು ಎಂದು ಸ್ವಿಜರ್ಲೆಂಡ್‌ನ‌ ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಆಯುಕ್ತರ ಕಚೇರಿ (ಯುಎನ್‌ಎಚ್‌ಸಿಆರ್‌) ಪ್ರಕಟಿಸಿದೆ. ಪೋಲೆಂಡ್‌ಗೆ 2. 1 ಮಿಲಿಯ (21 ಲಕ್ಷ ) ಮಂದಿ ಪ್ರವೇಶಿಸಿದ್ದಾರೆ. ರೊಮೇನಿಯಾಕ್ಕೆ 5.40 ಲಕ್ಷ, ಮಾಲ್ಡೋವಾಕ್ಕೆ 3.67 ಲಕ್ಷಕ್ಕಿಂತ ಅಧಿಕ ಮಂದಿ ಉಕ್ರೇನಿಯನ್ನರು ನಿರಾಶ್ರಿತರಾಗಿ ಪ್ರವೇಶಿಸಿದ್ದಾರೆ.

ಟಾಪ್ ನ್ಯೂಸ್

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.