ಪ್ರತಿ ಗ್ರಾಪಂಗಳಲ್ಲೂ ಒಕ್ಕೂಟ ರಚನೆ
ಒಕ್ಕೂಟ ರಚನೆಯಲ್ಲಿ ಚಿಕ್ಕಮಗಳೂರು ರಾಜ್ಯದಲ್ಲಿಯೇ ಮೊದಲ ಜಿಲ್ಲೆ: ಜಿಪಂ ಸಿಇಒ ಪ್ರಭು
Team Udayavani, Mar 23, 2022, 4:20 PM IST
ತರೀಕೆರೆ: ಜಿಲ್ಲೆಯ 226 ಗ್ರಾಮ ಪಂಚಾಯಿತಿಗಳಲ್ಲಿ ಗಾಪಂ ಮಟ್ಟದ ಒಕ್ಕೂಟಗಳನ್ನು ರಚಿಸಲಾಗಿದೆ. 70 ಒಕ್ಕೂಟಗಳನ್ನು ರಚಿಸುವಂತೆ ಸರ್ಕಾರ ಸೂಚನೆ ನೀಡಿತ್ತು ಆದರೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಕ್ಕೂಟ ರಚಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಜಿಲ್ಲೆಯಾಗಿದೆ. ಈ ಒಕ್ಕೂಟ 85000 ಸದಸ್ಯರನ್ನು ಹೊಂದಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಒಕ್ಕೂಟಗಳನ್ನು ಮಾಡಲಾಗಿದೆ ಎಂದು ಜಿಪಂ ಸಿಇಒ ಜಿ.ಪ್ರಭು ನುಡಿದರು.
ಬಾವಿಕೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ನಡೆದ ನರ್ಸರಿ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಾವಿಕೆರೆ ಗ್ರಾಪಂನಲ್ಲಿ 39 ಸ್ವಸಹಾಯ ಗುಂಪುಗಳಿದ್ದು 922 ಸದಸ್ಯರನ್ನು ಹೊಂದಿದೆ. ಬಹುತೇಕ ಕುಟುಂಬಗಳು ಪುರುಷರ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಮನೆಯ ಜವಾಬ್ದಾರಿ ಹೊತ್ತು ಎಲ್ಲವನ್ನೂ ನಿರ್ವಹಿಸುವ ಶ್ರೇಯಸ್ಸು ಮನೆಯ ಹೆಣ್ಣು ಮಕ್ಕಳಿಗೆ ಸಲ್ಲುತ್ತದೆ. ಅವರು ಸ್ವಾವಲಂಬಿಗಳಾಗಬೇಕು ಎನ್ನುವುದು ಸರಕಾರದ ಉದ್ದೇಶ.
ಸ್ವ ಸಹಾಯ ಸಂಘಗಳ ಜತೆಗೆ ಅವರು ಆರ್ಥಿಕವಾಗಿ ಬಲಿಷ್ಠರಾಗಬೇಕು.ಸದೃಢರಾಗಬೇಕು ಎನ್ನುವುದು ಸರಕಾರದ ಉದ್ದೇಶ ಎಂದರು. ಸರಕಾರ ಅನೇಕ ಸೌಲಭ್ಯ ನೀಡುತ್ತದೆ. ಜಿಲ್ಲೆಯಲ್ಲಿ 1500 ಸ್ವ ಸಹಾಯ ಗುಂಪುಗಳಲ್ಲಿ ಸದಸ್ಯರನ್ನಾಗಿ ಮಾಡಲಾಗಿದೆ. ಅವರಿಗೆ ತರಬೇತಿ ನೀಡಿ ಅವರಿಂದ ಸ್ಥಳೀಯವಾಗಿ ಸಿಗುವ ಕಚ್ಚಾವಸ್ತುಗಳನ್ನು ಅವಲಂಬಿಸಿ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆ ಒದಗಿಸಲಾಗುವುದು. ಅವರು ತಯಾರಿಸುವ ವಸ್ತುಗಳಿಗೆ ಸ್ಥಳೀಯ ಮಟ್ಟದ ಸಂತೆ ಆಯೋಜಿಸಲಾಗುತ್ತದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಿದಲ್ಲಿ ಅವುಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ ಅವುಗಳಿಗೆ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡಲಾಗುವುದು ಎಂದರು.
ಒಕ್ಕೂಟಗಳು ಶ್ರದ್ಧೆ-ಆಸಕ್ತಿಯನ್ನು ಹೊಂದಿರಬೇಕು. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸುವುದು, ಮಾರುಕಟ್ಟೆ ವಸ್ತುಗಳನ್ನು ತರಲು ವಾಹನ ಸೌಲಭ್ಯವನ್ನು ಒದಗಿಸುವುದು, ರಿವಾಲ್ವಿಂಗ್ ಫಂಡ್ ನೀಡುವುದು, ಕಚ್ಚಾ ವಸ್ತುಗಳನ್ನು ಪೂರೈಕೆ ಮತ್ತು ಪ್ರತಿ ಪಂಚಾಯಿತಿಗಳಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಶೆಡ್ ನಿರ್ಮಿಸಲಾಗುತ್ತದೆ. ಹೆದ್ದಾರಿಗಳಲ್ಲಿ ಸ್ಥಳೀಯ ಸಂತೆಗಳಲ್ಲಿ ಮಾರುಕಟ್ಟೆ ಒದಗಿಸಲಾಗುತ್ತದೆ. ತಾಂತ್ರಿಕವಾಗಿ ಅವರಿಗೆ ಎಲ್ಲಾ ರೀತಿಯ ಮಾರ್ಗದರ್ಶನ ಮಾಡಲಾಗುತ್ತದೆ. ಪ್ರತಿ ಕುಟುಂಬಕ್ಕೂ ಮಹಿಳೆ ಆಸರೆಯಾಗಿರುವುದರಿಂದ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಜಿಪಿಎಫ್ ಸಂತೆ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಯತಿರಾಜ್, ಇಒ ಡಾ|ದೇವೇಂದ್ರಪ್ಪ, ಗಣೇಶ್, ನಾಗರಾಜ್, ವಲಯ ಅರಣ್ಯಾಧಿಕಾರಿ ಶಂಕರ್, ಮಹಿಳಾ ಒಕ್ಕೂಟ ಅಧ್ಯಕ್ಷ ಲತಾ, ಪಿಡಿಒ ಮಲ್ಲಿಕಾರ್ಜುನ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.