ಕೊರಟಗೆರೆ: ಹಲವೆಡೆ ಜಪ್ತಿ ಮಾಡಿದ್ದ ಮದ್ಯ ಅಧಿಕಾರಿಗಳಿಂದ ನಾಶ
Team Udayavani, Mar 23, 2022, 6:14 PM IST
ಕೊರಟಗೆರೆ: ತಾಲ್ಲೂಕಿನ ವಿವಿಧೆಡೆ ಜಪ್ತಿ ಮಾಡಿದ್ದ ಮದ್ಯವನ್ನು 211.680 ಲೀಟರ್ ಮದ್ಯ, 5.580 ಲೀಟರ್ ಬಿಯರ್ ಮತ್ತು 16.400 ಲೀಟರ್ ಸೇಂದಿಯನ್ನು ಅಬಕಾರಿ ಅಧಿಕಾರಿ ಶ್ರೀಲತಾ ಮತ್ತು ತಂಡದ ಸಿಬ್ಬಂದಿಗಳು ಬುಧವಾರ ನಾಶ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಮಾನ್ಯ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಹಾಗೂ ಮಧುಗಿರಿ ವಿಭಾಗದ ಮಾನ್ಯ ಉಪ ಅಧೀಕ್ಷಕರ ನೇತೃತ್ವದಲ್ಲಿ ಉಪ ತಹಶಿಲ್ದಾರ್, ಕೆ ಎಸ್ ಬಿಸಿಎಲ್ ಡಿಪೋ ತುಮಕೂರು,ಮತ್ತು ಸ್ಥಳೀಯ ಪಂಚರ ಸಮಕ್ಷಮದಲ್ಲಿ ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಟ್ಟಣ ಪಂಚಾಯತಿ ಕಸ ತ್ಯಾಜ್ಯ ವಿಲೇವಾರಿ ಘಟಕ ಬೋಡ ಬಂಡೇನಹಳ್ಳಿ ರಸ್ತೆ ಕೊರಟಗೆರೆ ಟೌನ್ ಇಲ್ಲಿ ಅಧಿಕಾರಿಗಳ ಸಮಕ್ಷಮದಲ್ಲಿ ಮದ್ಯವನ್ನು ನಾಶಪಡಿಸಲಾಗಿದೆ.
ನಾಶ ಪಡಿಸುವ ಸಮಯದಲ್ಲಿ ಮಧುಗಿರಿಯ ಅಬಕಾರಿ ಉಪ ಅಧೀಕ್ಷಕರಾದ ಸುರೇಶ್.ಆರ್ ಕೆಎಸ್ ಬಿಸಿಎಲ್ ಘಟಕ ತುಮಕೂರು ಉಪ ವಿಭಾಗದ ಕೆ.ನಾರಾಯಣ್, ಉಪ ತಹಶಿಲ್ದಾರ್ ಹೆಚ್ ಕೆ. ಚಂದ್ರಪ್ಪ, ಕೊರಟಗೆರೆಯ ಅಬಕಾರಿ ನಿರೀಕ್ಷಕರಾದ ಶ್ರೀ ಲತಾ, ಉಪ ನಿರೀಕ್ಷಕರಾದ ವೈಷ್ಣವಿ ಕುಲಕರ್ಣಿ,ಹೆಚ್.ಜಿ ಲೀಲಾ ವೆಂಕಟೇಶ್,ಸಿಬ್ಬಂದಿಗಳಾದ ಹಮೀದ್ ಬುಡಕಿ,ಮಲ್ಲಿಕಾರ್ಜುನ್, ಮಂಜುಳಾ, ಕಿರಣ್ ಕುಮಾರ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.