ಗ್ರಾಮೀಣ ಜನಜೀವನ ಸುಧಾರಣೆಗೆ ಸೆಲ್ಕೋ ಸಾಥ್
Team Udayavani, Mar 24, 2022, 2:51 PM IST
ಯಾದಗಿರಿ: ವಿದ್ಯುತ್ ಅಭಾವದಿಂದ ಗ್ರಾಮೀಣ ಭಾಗದ ಜನ ಇಂದಿಗೂ ಸಂಕಷ್ಟದ ಬದುಕು ದೂಡುತ್ತಿದ್ದು, ಸೋಲಾರ್‌ನಿಂದ ಚಲಿಸುವಂಥ ಯಂತ್ರೋಪಕರಣಗಳು ಜೀವನ ಬದಲಿಸುವ ಸಾಧನಗಳಾಗಿವೆ ಎಂದು ಸುಲೇಪೇಟ್ ಸೌರ ಉದ್ಯಮಿ ನಿರ್ಮಲಾ ಗಾಣಾಪುರ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‌ನಿಂದ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜೀವನ ನಿರ್ವಹಣೆ ಜೊತೆಗೆ ಸಮಾಜದ ಇತರ ಮಹಿಳೆಯರ ಬಲರ್ವಧನೆಗೆ ಸೆಲ್ಕೊ ಸಂಸ್ಥೆ ಸಹಕಾರಿಯಾಗಿದೆ. ಮಹಿಳೆಯರ ಸಬಲೀಕರಣ, ಏಳ್ಗೆಗೆ ಸೆಲ್ಕೋ ಸಾಕಷ್ಟು ಒತ್ತು ನೀಡಿದೆ. ವಿದ್ಯುತ್ ಕಡಿತದಿಂದ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸೆಲ್ಕೊ ಸಂಸ್ಥೆಯು ವಿದ್ಯುತ್ ದೀಪ, ರೊಟ್ಟಿ ಮಾಡುವ ಯಂತ್ರಗಳು, ಝರಾಕ್ಸ್ ಮಷೀನ್, ಹೊಲಿಗೆ ಯಂತ್ರ, ಖಾರ ಕುಟ್ಟುವ ಯಂತ್ರ ಸೇರಿದಂತೆ ಸುಮಾರು 40ಕ್ಕೂ ಅಧಿಕ ಯಂತ್ರೋಪಕರಣಗಳನ್ನು ಸೋಲಾರ್ ಸಹಾಯದಿಂದಲೇ ನಡೆಸುತ್ತಿರುವುದು ನಿಜಕ್ಕೂ ಉಪಯುಕ್ತಕರ ಎಂದರು.
ಇಂಥ ಸೌಲಭ್ಯ ಗ್ರಾಮೀಣ ಭಾಗದ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಸಣ್ಣ ಉದ್ಯಮ ಸ್ಥಾಪಿಸಿ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಸ್ವಸಹಾಯ ಸಂಘ, ಸೆಲ್ಕೋ ಸಂಸ್ಥೆ ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕಲಿಕೆ ಟ್ರಸ್ಟ್ ಜಿಲ್ಲಾ ಮುಖ್ಯಸ್ಥ ಗಿರೀಶ್ ಮಾತನಾಡಿ, ಸೋಲಾರ್ ಜೀವನದ ಅವಿಭಾಜ್ಯ ಅಂಗವಾಗಿದೆ. ಇದೊಂದು ಖಾಲಿಯಾಗದ ಇಂಧನ ಮೂಲ. ಸೌರ ಇಂಧನ ಮೂಲಕ ಉದ್ಯೋಗ ಸೃಜನೆಗೂ ಆದ್ಯತೆ ನೀಡಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಇದೊಂದು ಬೃಹತ್ ಉದ್ಯಮವಾಗಿ ಬೆಳೆಯುವುದರಲ್ಲಿ ಶಂಕೆ ಬೇಡ. ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆ ಅನೇಕ ರೀತಿಯ ಯಂತ್ರೋಪಕರಣಗಳಿಗೆ ಸೋಲಾರ್ ಅಳವಡಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಬೆಂಗಳೂರಿನ ಸೆಲ್ಕೋ ಉಪ ಮಹಾ ಪ್ರಬಂಧಕ ಸುದೀಪ್ತ್ ಘೋಷ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಬೆಂಗಳೂರು ಸೆಲ್ಕೊ ಸಹಾಯಕ ಮಹಾ ಪ್ರಬಂಧಕ ಕರಿಸ್ವಾಮಿ ಕೆ. ನಿರೂಪಿಸಿದರು. ಕ್ಷೇತ್ರ ವ್ಯವಸ್ಥಾಪಕ ಯಲ್ಲಾಲಿಂಗ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.