![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 25, 2022, 11:04 AM IST
ಹುಬ್ಬಳ್ಳಿ: ಲವ್ ಜಿಹಾದ್‌ನಂತಹ ಘಟನೆಗಳು ರಾಜ್ಯದಲ್ಲಿ ಮೇಲಿಂದ ಮೇಲೆ ಮರುಕಳಿಸುತ್ತಿದ್ದು, ರಾಜ್ಯದಲ್ಲಿ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ದುಷ್ಕೃತ್ಯಗಳನ್ನು ತಡೆಯಲು ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದಿಂದ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟಿಸಿ, ಹಿಂದೂ ಯುವತಿಯರನ್ನು ಪುಸಲಾಯಿಸಿ, ವಂಚಿಸಿ ಹಾಗೂ ಮದುವೆಯಾಗಿ ನಂತರ ಕಿರುಕುಳ ನೀಡಲಾಗುತ್ತಿದೆ. ಯುವತಿಯರ ಸೌಮ್ಯತೆಯನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಗದುಗಿನ ಯುವತಿಯೊಬ್ಬನ್ನ ಮುಸ್ಲಿಂ ವ್ಯಕ್ತಿ ಲವ್ ಜಿಹಾದ್‌ಗೆ ಒಳಪಡಿಸಿ ವಂಚನೆ ಮಾಡಿದ್ದಾನೆ. ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಅವಳನ್ನು ಮದುವೆಯಾಗಿದ್ದಾನೆ. ನಂತರ ಈ ವಿಚಾರ ಗೊತ್ತಾಗಿ ವಿರೋಧಿಸಿದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇಂತಹ ಘಟನೆಗಳು ಹಿಂದೂ ಯುವತಿಯರು ಹಾಗೂ ಮಹಿಳೆಯರಲ್ಲಿ ಭೀತಿ ಸೃಷ್ಟಿಸಿವೆ. ಹೀಗಾಗಿ ಇಂತಹ ನೀಚ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸರಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ತರಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯದರ್ಶಿ ಗೋವರ್ಧನ ರಾವ್ ಮಾತನಾಡಿ, ರಾಜ್ಯದಲ್ಲಿ ಲವ್ ಜಿಹಾದ್ ನಂತಹ ಪ್ರಕರಣಗಳು ಮೇಲಿಂದ ಮೇಲೆ ಮರುಕಳಿಸುತ್ತಿವೆ. ಹಿಂದೂ ಯುವತಿಯರ ಮಾನಭಂಗ, ವಂಚನೆ, ಮೋಸದ ಮದುವೆ ಮೂಲಕ ಅವರನ್ನು ವಂಚಿಸುವ ದುಷ್ಕೃತ್ಯಗಳು ನಡೆಯುತ್ತಿವೆ. ಇವುಗಳಿಗೆ ಕಡಿವಾಣ ಇಲ್ಲದಂತಾಗಿರುವುದು ಹಿಂದೂ ಯುವತಿಯರ ಮೇಲೆ ಇಂತಹ ವಂಚನೆಗಳು ನಡೆಯುತ್ತಿವೆ. ಕೂಡಲೇ ಸರಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ರಮೇಶ ಕದಂ, ಶಿವಾನಂದ ಸತ್ತಿಗೇರಿ, ರಘು ಯಲ್ಲಪ್ಪನವರ, ದತ್ತಮೂರ್ತಿ ಕುಲಕರ್ಣಿ, ಚೇತನ ರಾವ್, ವಿಜಯ ಕ್ಷೀರಸಾಗರ, ಸಂಧ್ಯಾ ದೀಕ್ಷಿತ, ರೂಪಾ ಶೆಟ್ಟಿ, ಸೀಮಾ ಲದ್ವಾ, ವಸಂತ ನಾಡಜೋಶಿ, ಚಂದ್ರಶೇಖರ ಗೋಕಾಕ, ಸುಭಾಸ ಇದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.