ಕ್ಷಯ ನಿರ್ಮೂಲನೆಗೆ ಜಾಗೃತಿ ಅಗತ್ಯ: ಡಾ|ಜವಳಿ
ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಗುರಿ
Team Udayavani, Mar 25, 2022, 12:25 PM IST
ಬಾಗಲಕೋಟೆ: ಸಾವಿರಾರು ವರ್ಷಗಳಿಂದ ಮಾನವ ಕುಲಕ್ಕೆ ಕಂಟಕವಾಗಿರುವ ಕ್ಷಯರೋಗದ ನಿರ್ಮೂಲನೆಗೆ ಜನಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯ ಡಾ|ಚಂದ್ರಕಾಂತ ಜವಳಿ ಹೇಳಿದರು.
ನವನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಎಎನ್‌ಎಂ ತರಬೇತಿ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕಾರ್ಯಾಲಯ, ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕ್ಷಯರೋಗ ವಾಸಿಯಾಗಲಾರದ ಕಾಯಿಲೆಯಾಗಿ ಪರಿಣಮಿಸಿತ್ತು. ಕ್ಷಯರೋಗಕ್ಕೆ ಒಳಗಾದವರನ್ನು ಪ್ರಾಣಿಗಿಂತಲೂ ಕೀಳಾಗಿ ಕಾಣುತ್ತಿದ್ದರು. ಅವರನ್ನು ಸಂಪರ್ಕಿಸದಂತೆ ಹೀನಾಯಸ್ಥಿತಿಯಲ್ಲಿ ಕಾಣುವಂತಾಗಿತ್ತು. ಆದರೆ ಇಂದು ಕ್ಷಯರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆತಿದ್ದು, ಗುಣಪಡಿಸುವಂತಹ ಕಾಯಿಲೆಯಾಗಿದೆ. ಜನರಲ್ಲಿ ಇನ್ನು ಇದರ ಬಗ್ಗೆ ತಪ್ಪು ತಿಳುವಳಿಕೆ ಇದ್ದು, ಕ್ಷಯ ಬಂದಿದೆ ಎಂದರೆ ಮನೆಯವರಿಂದ, ಸ್ನೇಹಿತರಿಂದ, ಸಮಾಜದಿಂದಲೇ ದೂರವಿರಬೇಕಾಗುತ್ತದೆ ಎಂಬ ಕೀಳರಿಮೆಯಿಂದ ರೋಗಿ ತಾನು ಬಳಲುವುದಲ್ಲದೇ ತನಗಿದ್ದ ಕಾಯಿಲೆ ಸೋಂಕನ್ನು ಪರರಿಗೂ ತಗುಲಿಸುತ್ತಿದ್ದಾನೆ. ಇದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಪಿ.ಎ.ಹಿಟ್ನಳ್ಳಿ ಮಾತನಾಡಿ, 2025ರೊಳಗಾಗಿ ಕ್ಷಯರೋಗ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಲಾಗಿದ್ದು, ರೋಗ ಮುಕ್ತ ಘೋಷಣೆಗಳೊಂದಿಗೆ ಕಾರ್ಯಪ್ರವೃತ್ತರಾಗಬೇಕಾಗಿದೆ. ಈಗಾಗಲೇ ಜಿಲ್ಲೆಯ 27 ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಸದಸ್ಯರಿಗೆ, ಜಿಲ್ಲಾ, ತಾಲೂಕು ಪಂಚಾಯಿತಿ ಆಡಳಿತ ಮಂಡಳಿಗಳಿಗೆ ಜಾಗೃತಿಯ ಬಗ್ಗೆ ತಿಳಿಸಲಾಗಿದ್ದು, ಪ್ರತಿ ತಾಲೂಕಿನ ಎರಡು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕ್ಷಯರೋಗ ಜಾಗೃತಿ ಕುರಿತಾದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಓರ್ವ ವೃದ್ದೆಗೆ ಟಿಬಿ ರೋಗದ ಕೊನೆಯ ಹಂತದ ಚಿಕಿತ್ಸೆಯಾದ ಎಂಡಿಆರ್ ಟಿಬಿ ಔಷಧ ಕಿಟ್‌ನ್ನು ವಿತರಿಸಲಾಯಿತು. ಇದು ರಾಜ್ಯದಲಿಯೇ ಬಾಗಲಕೋಟೆ ಜಿಲ್ಲೆಯಲ್ಲಿ ವಿತರಿಸಲಾದ ಪ್ರಥಮ ಔಷಧಿ ಕಿಟ್ ಇದಾಗಿದೆ.
ಎ.ಎನ್.ಎಂ ಕೇಂದ್ರದ ಪ್ರಾಚಾರ್ಯ ಸುಮಾ ರಂಜನಗಿ, ಡಾ| ಕೋರಿ, ಡಾ| ಗಾಣಿಗೇರ, ಡಾ| ಪ್ರಿಯದರ್ಶಿನಿ, ಡಾ| ರಾಘವೇಂದ್ರ ಸವದತ್ತಿ ಉಪಸ್ಥಿತರಿದ್ದರು.
ಕ್ಷಯರೋಗ ಮನುಷ್ಯನ ಕೂದಲು ಮತ್ತು ಉಗುರು ಹೊರತುಪಡಿಸಿ ದೇಹದ ಯಾವುದೇ ಭಾಗಕ್ಕೆ ಬರಬಹುದಾದ ಕಾಯಿಲೆಯಾಗಿದ್ದು, ಇದಕ್ಕೆಲ್ಲ ಚಿಕಿತ್ಸೆ ಇದೆ. ಸರಕಾರ ಕ್ಷಯ ರೋಗ ನಿರ್ಮೂಲನೆಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಆರೈಕೆ ದೊರೆಯಲಿದ್ದು, ರೋಗಿಗಳು ಭಯಪಡದೇ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತರಾಗಬೇಕು.
ಡಾ| ಚಂದ್ರಕಾಂತ ಜವಳಿ, ತಜ್ಞ ವೈದ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.