ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್! ಮಲಿನಕಾರಕ ಅಂಶ ಇದೇ ಮೊದಲ ಬಾರಿಗೆ ಪತ್ತೆ;
ನೆದರ್ಲೆಂಡ್ ವಿಜ್ಞಾನಿಗಳಿಂದ ಸಂಶೋಧನೆ
Team Udayavani, Mar 26, 2022, 8:00 AM IST
ನವದೆಹಲಿ: ಇದೇ ಮೊದಲ ಬಾರಿಗೆ ಮನುಷ್ಯನ ರಕ್ತದಲ್ಲಿ ಮಾಲಿನ್ಯದ ಪ್ರಮುಖ ಮೂಲವಾದ ಪ್ಲಾಸ್ಟಿಕ್‌ನ ಸಣ್ಣ ಕಣಗಳು (ಮೈಕ್ರೋಪ್ಲಾಸ್ಟಿಕ್) ಪತ್ತೆಯಾಗಿದೆ!
ನೆದರ್ಲೆಂಡ್‌ನ ವಿಜ್ಞಾನಿಗಳ ತಂಡವು ಪರೀಕ್ಷೆಗೊಳಪಡಿಸಿದ ಸ್ಯಾಂಪಲ್‌ಗಳ ಪೈಕಿ ಶೇ.80ರಷ್ಟು ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ದೃಢಪಟ್ಟಿದೆ. ಪ್ಲಾಸ್ಟಿಕ್‌ನ ಕಣಗಳು ಮಾನವ ಶರೀರದಲ್ಲೂ ಸಂಚರಿಸಿ, ಅಂಗಾಂಗಗಳಲ್ಲಿ ಉಳಿಯಬಲ್ಲದು ಎಂಬುದನ್ನು ಸಾಬೀತುಪಡಿಸುವ ಮಹತ್ವದ ಸಂಶೋಧನೆ ಇದಾಗಿದೆ.
ಈ ಕಣಗಳು ಮನುಷ್ಯನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವಾತಾವರಣದಲ್ಲಿ ಮಾಲಿನ್ಯ ಹೆಚ್ಚಲು ಇದೇ ಮೈಕ್ರೋಪ್ಲಾಸ್ಟಿಕ್‌ಗಳು ಕಾರಣ. ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಷನಲ್ ಎಂಬ ನಿಯತಕಾಲಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.
22ರ ಪೈಕಿ 17ರಲ್ಲಿ ಪ್ಲಾಸ್ಟಿಕ್ ಪತ್ತೆ:
22 ಮಂದಿ ಅಪರಿಚಿತ ದಾನಿಗಳ ರಕ್ತದ ಮಾದರಿಗಳನ್ನು ಈ ಸಂಶೋಧನೆಗೆ ಬಳಸಲಾಗಿತ್ತು. ಈ ಪೈಕಿ 17 ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಪತ್ತೆಯಾಗಿವೆ. ಇದರಲ್ಲಿ ಅರ್ಧದಷ್ಟು ಸ್ಯಾಂಪಲ್‌ಗಳಲ್ಲಿ ಪಾಲಿಥೈಲೀನ್ ಟೆರೆಫ¤ಲೇಟ್(ಪಿಇಟಿ) ಅಂದರೆ ಪಾನೀಯಗಳ ಬಾಟಲಿಗಳನ್ನು ಮಾಡಲು ಬಳಸುವ ಪ್ಲಾಸ್ಟಿಕ್ ಪತ್ತೆಯಾಗಿದೆ.
ಇದನ್ನೂ ಓದಿ :ಬುದ್ದಿಜೀವಿಗಳ ಸದನಕ್ಕೆ ಅರ್ಹರನ್ನು ಆಯ್ಕೆ ಮಾಡಿ: ಮಾಜಿ ಶಾಸಕ ಕೆ.ವೆಂಕಟೇಶ್
ಇನ್ನು ಶೇ.36ರಷ್ಟು ಮಂದಿಯಲ್ಲಿ ಆಹಾರದ ಪ್ಯಾಕೇಜಿಂಗ್‌ಗೆ ಬಳಸುವ ಪಾಲಿಸ್ಟಿರೀನ್, ಶೇ.23ರಷ್ಟು ಸ್ಯಾಂಪಲ್‌ಗಳಲ್ಲಿ ಚೀಲಗಳ ಪ್ಯಾಕೇಜಿಂಗ್‌ಗೆ ಬಳಸುವ ಪಾಲಿಥೈಲೀನ್ ಪ್ಲಾಸ್ಟಿಕ್ ಪತ್ತೆಯಾಗಿದೆ.
ಇವುಗಳ ಪ್ರಮಾಣವು ಕಡಿಮೆಯಿದ್ದರೂ, ಅಂದರೆ ಪ್ರತಿ ಮಿಲಿಲೀಟರ್ ರಕ್ತದಲ್ಲಿ 1.6 ಮೈಕ್ರೋಗ್ರಾಂ ಆಗಿದ್ದರೂ, ಇದು ಎಚ್ಚರಿಕೆಯ ಕರೆಗಂಟೆಯೇ ಆಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.