ವಿಶ್ವಶಾಂತಿಗೆ ಭಂಗ ತಾರದಿರಲಿ ರಷ್ಯಾದ ಒಣಪ್ರತಿಷ್ಠೆ


Team Udayavani, Mar 26, 2022, 6:00 AM IST

ವಿಶ್ವಶಾಂತಿಗೆ ಭಂಗ ತಾರದಿರಲಿ ರಷ್ಯಾದ ಒಣಪ್ರತಿಷ್ಠೆ

ರಷ್ಯಾ ಸೇನೆ ಉಕ್ರೇನ್‌ ವಿರುದ್ಧ ಸಮರ ಸಾರಿ ಶುಕ್ರವಾರ ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಎರಡೂ ಸೇನೆಗಳಲ್ಲೂ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ.

ಯುದ್ಧದ ಪರಿಣಾಮವಾಗಿ ಉಕ್ರೇನ್‌ ಸಂಪೂರ್ಣ ಜರ್ಝರಿತಗೊಂಡಿದ್ದು ಸಹಸ್ರಾರು ಸಂಖ್ಯೆಯ ಅಮಾಯಕರು ಬಲಿಯಾಗುತ್ತಿದ್ದಾರೆ ಮಾತ್ರವಲ್ಲದೆ ನಿರ್ವಸಿತರಾಗುತ್ತಿದ್ದಾರೆ. ಆಹಾರದ ಗೋದಾಮಿನಂತಿದ್ದ ಉಕ್ರೇನ್‌ನಲ್ಲೀಗ ಆಹಾರದ ಕೊರತೆ ಕಾಡತೊಡಗಿದೆ. ಖಾರ್ಕಿವ್‌ನಲ್ಲಂತೂ ಜನರು ಆಹಾರವಿಲ್ಲದೆ ಬಳಲುತ್ತಿದ್ದು ಬೇರೆ ನಗರಗಳತ್ತ ವಲಸೆ ಹೋಗಲೂ ಸಾಧ್ಯವಿಲ್ಲದಷ್ಟು ಅಶಕ್ತರಾಗಿದ್ದಾರೆ. ಇದರ ನಡುವೆ ರಷ್ಯಾ ಸೇನೆ ಉಕ್ರೇನ್‌ನ ಪ್ರಮುಖ ನಗರಗಳು, ವಾಯುನೆಲೆ, ಸೇನಾ ನೆಲೆ, ಇಂಧನ ಕೇಂದ್ರ, ಸಂಶೋಧನ ಕೇಂದ್ರಗಳನ್ನು ಗುರಿಯಾಗಿಸಿ ಸತತ ದಾಳಿ ನಡೆಸುತ್ತಲೇ ಇದೆ. ಈ ದಾಳಿಯ ಸಂದರ್ಭದಲ್ಲಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿರುವ ರಷ್ಯಾ ಈ ಮೂಲಕ ಉಕ್ರೇನ್‌ ಅನ್ನು ತನ್ನ ಶಸ್ತ್ರಾÕಸ್ತ್ರಗಳ ಪ್ರಯೋಗಶಾಲೆಯನ್ನಾಗಿಸಿದೆ.

ಉಕ್ರೇನ್‌ ನ್ಯಾಟೋ ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳಲು ಮುಂದಾ ದುದೇ ರಷ್ಯಾದ ದಾಳಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆಯಾದರೂ ಈ ದಾಳಿಯ ಮೂಲಕ ರಷ್ಯಾ ಜಗತ್ತಿನ ಬಲಾಡ್ಯ ರಾಷ್ಟ್ರಗಳಿಗೆ ಪ್ರಬಲ ಸಂದೇಶ ರವಾನಿಸಲು ಮುಂದಾಗಿದೆ ಎಂಬುದು ಸುಳ್ಳಲ್ಲ. ಉಕ್ರೇನ್‌ ವಿರುದ್ಧ ರಷ್ಯಾ ಆಕ್ರಮಣ ಆರಂಭಿಸಿದ ವೇಳೆ ಇದು ದ್ವಿಪಕ್ಷೀಯ ವಿಚಾರವಾಗಿದ್ದು ಬೇರೆ ಯಾವುದೇ ರಾಷ್ಟ್ರ ಹಸ್ತಕ್ಷೇಪ ನಡೆಸಿದಲ್ಲಿ ಇತಿಹಾ ಸದಲ್ಲಿ ಹಿಂದೆಂದೂ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ನೇರವಾಗಿ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದರು. ಈ ಮೂಲಕ ರಷ್ಯಾ, ಉಕ್ರೇನ್‌ ಆದಿಯಾಗಿ ಈ ಹಿಂದಿನ ಸೋವಿಯತ್‌ ಯೂನಿಯನ್‌ಗೆ ಸೇರಿದ ದೇಶಗಳಲ್ಲಿ ಐರೋಪ್ಯ ರಾಷ್ಟ್ರಗಳು ಪ್ರಾಬಲ್ಯ ಸ್ಥಾಪಿಸುತ್ತಿರುವುದನ್ನು ಸಹಿಸಲಾಗದು ಮಾತ್ರವಲ್ಲದೆ ಈ ರಾಷ್ಟ್ರಗಳ ಮೇಲೆ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಲು ರಷ್ಯಾ ಮುಂದಾಗಿರುವುದರ ಸುಳಿವನ್ನು ನೀಡಿದ್ದರು.

ಒಂದೆಡೆಯಿಂದ ರಷ್ಯಾ ಉಕ್ರೇನ್‌ನಲ್ಲಿ ನಿರಂತರ ಶೆಲ್‌, ಕ್ಷಿಪಣಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿ ಅಂತಾರಾಷ್ಟ್ರೀಯ ನಿಯಮಾ ವಳಿಗಳೆಲ್ಲವನ್ನೂ ಗಾಳಿಗೆ ತೂರುತ್ತಿದ್ದರೆ ಜಾಗತಿಕ ಸಮುದಾಯ ಮಾತ್ರ ಇನ್ನೂ ರಷ್ಯಾದ ವಿರುದ್ಧ ಆರ್ಥಿಕ ದಿಗ್ಬಂಧನಗಳಿಗಷ್ಟೇ ಸೀಮಿತ ವಾಗಿದೆಯೇ ವಿನಾ ಕನಿಷ್ಠ ಬಿಗಿ ಸಂದೇಶ ರವಾನಿಸುವಲ್ಲಿಯೂ ವಿಫ‌ಲ ವಾಗಿದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯಾದಿ ಯಾಗಿ ಇನ್ಯಾವುದೇ ಜಾಗತಿಕ ಸಂಸ್ಥೆಗಳಿಗೆ ರಷ್ಯಾದ ಈ ಮನುಕುಲ ವಿರೋಧಿ ದಾಳಿಗೆ ತಡೆ ಒಡ್ಡಲು ಸಾಧ್ಯವಾಗಿಲ್ಲ.
ಯುದ್ಧ ಇನ್ನೂ ಮುಂದುವರಿದದ್ದೇ ಆದಲ್ಲಿ ಅದರ ಪರಿಣಾಮಗಳು ಘನಘೋರ ಆಗುವ ಸಾಧ್ಯತೆಗಳಿವೆ. ಯುದ್ಧಕ್ಕೆ ಅಂತ್ಯ ಹಾಡಿ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಯುದ್ಧ ಕೇವಲ ಒಣಪ್ರತಿಷ್ಠೆ, ಶಕ್ತಿ ಮತ್ತು ಸರ್ವಾಧಿ ಕಾರದ ಪ್ರದರ್ಶನವಾದೀತೇ ವಿನಾ ಯಾವುದೇ ಸಮಸ್ಯೆಗೆ ಪರಿಹಾರ ನೀಡಲಾರದು ಎಂಬುದನ್ನು ಎಲ್ಲ ರಾಷ್ಟ್ರಗಳು ಮೊದಲು ಮನಗಾಣ ಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ರಷ್ಯಾ ಕೂಡ ವಿಶ್ವಶಾಂತಿಯನ್ನು ಕಾಯ್ದುಕೊಳ್ಳುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.