ಉಕ್ರೇನ್ ತುಂಬ ಸಾಮೂಹಿಕ ಸಮಾಧಿ; ರಷ್ಯಾ ದಾಳಿಯಿಂದ ಈವರೆಗೆ 1,081 ಸಾವು
ವಿಶ್ವಸಂಸ್ಥೆ ಅಧಿಕಾರಿಗಳು
Team Udayavani, Mar 26, 2022, 7:35 AM IST
ವಿಶ್ವಸಂಸ್ಥೆ: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 1,081 ಮಂದಿ ಸಾವಿಗೀಡಾಗಿದ್ದಾರೆ. ಉಕ್ರೇನ್‌ನ ಬಹುತೇಕ ಎಲ್ಲ ಕಡೆ ಸಾಮೂಹಿಕ ಸಮಾಧಿಗಳನ್ನು ಕಂಡುಬರುತ್ತಿವೆ. ಇದು ಯುದ್ಧದಲ್ಲಿ ಅಪಾರ ಮಟ್ಟದ ಸಾವುಗಳಾಗಿರುವುದಕ್ಕೆ ಸಾಕ್ಷಿ ಒದಗಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ಇದಲ್ಲದೆ ಕಳೆದ ವಾರ ಉಕ್ರೇನ್‌ನ ಮರಿಯು ಪೋಲ್ ನಗರದ ರಂಗಮಂದಿರದ ಮೇಲೆ ಆಗಿದ್ದ ಬಾಂಬ್ ದಾಳಿಯಲ್ಲಿ ಕನಿಷ್ಠ 300 ಮಂದಿ ಸಾವಿಗೀ ಡಾಗಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧ ಆರಂಭ ವಾದ ಅನಂತರ ಇಲ್ಲಿಯವರೆಗೆ 1,707 ಮಂದಿ ಗಾಯ ಗೊಂಡಿದ್ದಾರೆ ಎಂದು ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ ಮತ್ತೊಂದು ಒಕ್ಕಣೆಯನ್ನೂ ನೀಡಿರುವ ಕಚೇರಿ ಲಭ್ಯವಿರುವ ಮಾಹಿತಿಯ ಪ್ರಕಾರ ಇಷ್ಟು ಲೆಕ್ಕ ಸಿಕ್ಕಿದೆ. ನಿಜವಾದ ಸಾವು ನೋವು ಇನ್ನೂ ಅಧಿಕವಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ತೈಲಾಗಾರ ಧ್ವಂಸ: ಇದೇ ವೇಳೆ ಉಕ್ರೇನ್‌ನ ಅತೀ ದೊಡ್ಡ ತೈಲಾ ಗಾರವನ್ನು ಧ್ವಂಸ ಗೊಳಿಸಿರುವುದಾಗಿ ರಷ್ಯಾ ಹೇಳಿದೆ. “ಕೀವ್ ನಗರದ ಬಳಿಯಿರುವ ಹಳ್ಳಿಯಲ್ಲಿ ಈ ತೈಲಾ ಗಾರವಿತ್ತು. ಅದನ್ನು ಕಲಿಬರ್ ಎಂಬ ಕ್ಷಿಪಣಿಯನ್ನು ಪ್ರಯೋಗಿ ಸಲಾಗಿತ್ತು’ ಹೇಳಿದೆ.
ಮೇ 9ರಂದು ಯುದ್ಧ ಸಮಾಪ್ತಿ!: ತನ್ನ ಮೇಲಿನ ದಾಳಿಯನ್ನು ರಷ್ಯಾ, ಮೇ 9ರಂದು ನಿಲ್ಲಿಸಬಹುದೆಂಬ ಆಶಾಕಿರಣವನ್ನು ಉಕ್ರೇನ್ ವ್ಯಕ್ತಪಡಿಸಿದೆ. ಆ ದಿನ ಎರಡನೇ ಮಹಾಯುದ್ಧದಲ್ಲಿ ರಷ್ಯಾ ಗೆದ್ದ ದಿನ. ಅದರ ಸವಿನೆನಪಿನಲ್ಲಿ ರಷ್ಯಾ, ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬಹುದು ಎಂದು ಅದು ಹೇಳಿದೆ.
ಪೋಲೆಂಡ್‌ಗೆ ಬೈಡನ್: ರಷ್ಯಾ ದಾಳಿ ತಡೆಯುವ ನಿಟ್ಟಿನಲ್ಲಿ ಶಾಂತಿ ಮಾತುಕತೆ ಆರಂಭಿಸಲುವ ಪ್ರಯತ್ನದ ಭಾಗವಾಗಿ ಅಮೆರಿಕದ ಅಧ್ಯಕ್ಷ ಬೈಡನ್ ಶುಕ್ರವಾರ ಪೋಲೆಂಡ್‌ಗೆ ಆಗಮಿಸಿದ್ದಾರೆ.
ಪತ್ನಿ ಷೇರು: ರಿಷಿ ಜಾಣ್ಮೆಯ ಉತ್ತರ
“ಭಾರತ ಮೂಲದ ಇನ್ಫೋಸಿಸ್ ಕಂಪೆನಿಯಲ್ಲಿ ನಿಮ್ಮ ಪತ್ನಿ ಅಕ್ಷತಾ ಮೂರ್ತಿ (ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ) ಷೇರು ಹೊಂದಿದ್ದಾರೆ. ಆ ಕಂಪನಿ ರಷ್ಯಾದಲ್ಲಿ ತನ್ನ ಕಚೇರಿ ಹಾಗೂ ವ್ಯವಹಾರಗಳನ್ನು ಹೊಂದಿದೆ. ಯುನೈಟೆಡ್ ಕಿಂಗ್‌ಡಮ್ ಸರಕಾರ, ಈಗ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳ ಮೇಲೆ ನಿರ್ಬಂಧ ಹೇರಿದೆ. ಆದರೆ ಆ ನಿರ್ಬಂಧಗಳನ್ನು ನಿಮ್ಮ ಮನೆಯವರೇ (ಪತ್ನಿ) ಕೇಳುವುದು ಅನುಮಾನವಾಗಿದೆ, ಅಲ್ಲವೇ?’ – ಇಂಥದ್ದೊಂದು ಪ್ರಶ್ನೆ ಯುನೈಟೆಡ್ ಕಿಂಗ್‌ಡಮ್‌ನ ಆರ್ಥಿಕ ಸಚಿವ ಭಾರತ ಮೂಲದ ರಿಷಿ ಸುನಾಕ್ ಅವರಿಗೆ ಟಿವಿ ಸಂದರ್ಶನ ವೊಂದರಲ್ಲಿ ಕೇಳಲಾಗಿದೆ. ಇದಕ್ಕೆ ಜಾಣ್ಮೆಯ ಉತ್ತರ ಕೊಟ್ಟಿರುವ ರಿಷಿ, “ನಾನು ಒಬ್ಬ ಸಚಿವನಾಗಿ ಸರಕಾರ ಕೈಗೊಂಡ ತೀರ್ಮಾನಗಳ ಬಗ್ಗೆ ಮಾತ ನಾಡಲು ಬಂದಿದ್ದೇನೆ. ನನ್ನ ಪತ್ನಿಯ ವೈಯಕ್ತಿಕ ತೀರ್ಮಾನಗಳ ಬಗ್ಗೆ ಅಲ್ಲ” ಎಂದಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.