ಭೀಬತ್ಸ ಘಟನೆ: 8 ವರ್ಷದ ಬಾಲಕಿಯ ತಲೆ ಕಡಿದು, ಊರೆಲ್ಲಾ ಸುತ್ತಿದ ಆರೋಪಿ!
ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮದೊಳಗೆ ಓಡಾಡಿದ್ದ. ಬಳಿಕ ಕೊಳವೆ ಬಾವಿ ಬಳಿ ತಲೆಯನ್ನು ತೊಳೆದಿದ್ದ.
Team Udayavani, Mar 26, 2022, 11:57 AM IST
ಸಂಬಾಲ್ಪುರ್: ಎಂಟು ವರ್ಷದ ಬಾಲಕಿಯ ತಲೆ ಕಡಿದು, ನಂತರ ರುಂಡವನ್ನು ಹಿಡಿದು ಇಡೀ ಗ್ರಾಮದ ಸುತ್ತ ಓಡಾಡಿದ 30 ವರ್ಷದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಒಡಿಶಾದ ಸಂಬಾಲ್ಪುರ್ ನಲ್ಲಿ ಶುಕ್ರವಾರ (ಮಾರ್ಚ್ 25) ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವನಿತಾ ವಿಶ್ವಕಪ್: ಪಾಕ್ ವಿರುದ್ಧ ಗೆದ್ದರೂ ಕೂಟದಿಂದ ಹೊರಬಿದ್ದ ಆತಿಥೇಯ ನ್ಯೂಜಿಲ್ಯಾಂಡ್
ಜಮನಕಿರಾ ಬ್ಲಾಕ್ ನ ಗ್ರಾಮದಲ್ಲಿ ನಡೆದ ಈ ಭೀಕರ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಅಲ್ಲದೇ ಈ ಘಟನೆಯ ಹಿಂದಿನ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ವಿವರಿಸಿದೆ.
8 ವರ್ಷದ ಬಾಲಕಿ ಶುಕ್ರವಾರ ಬೆಳಗ್ಗೆ ಹೊಲಕ್ಕೆ ಮಲವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿ ಕೊಡಲಿ ತೆಗೆದುಕೊಂಡು ಆಕೆಯ ಶಿರಚ್ಛೇದ ಮಾಡಿದ್ದ. ನಂತರ ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮದೊಳಗೆ ಓಡಾಡಿದ್ದ. ಬಳಿಕ ಕೊಳವೆ ಬಾವಿ ಬಳಿ ತಲೆಯನ್ನು ತೊಳೆದಿದ್ದ.
ಈ ಸಂದರ್ಭದಲ್ಲಿ ಕಡಿದ ತಲೆಯನ್ನು ತೊಳೆಯುತ್ತಿದ್ದ ಪತಿಯನ್ನು ಕಂಡ ಪತ್ನಿ ಆತನನ್ನು ಪ್ರಶ್ನಿಸಿದಾಗ ವಾಗ್ವಾದಕ್ಕಿಳಿದಿದ್ದ. ಕೊಡಲಿ ತೋರಿಸಿ ಪತ್ನಿಗೂ ಬೆದರಿಕೆ ಒಡ್ಡಿದ್ದ. ನಂತರ ಆತ ಅಲ್ಲೇ ನೆಲದ ಮೇಲೆ ಮಲಗಿರುವುದಾಗಿ ವರದಿ ತಿಳಿಸಿದೆ.
ವಿಷಯ ತಿಳಿದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿ ಮದ್ಯವ್ಯಸನಿಯಾಗಿರುವುದು ತಿಳಿದು ಬಂದಿದೆ. ಆದರೆ ಮೃತಪಟ್ಟ ಬಾಲಕಿಯ ಕುಟುಂಬದ ಜೊತೆ ಯಾವುದೇ ದ್ವೇಷ ಇರಲಿಲ್ಲವಾಗಿತ್ತು ಎಂದು ಕುಚಿಂಡಾ ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿ ರಾಜ್ ಕಿಶೋರ್ ಮಿಶ್ರಾ ತಿಳಿಸಿದ್ದಾರೆ.
ಕೊಡಲಿಯನ್ನು ವಶಕ್ಕೆ ಪಡೆದಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಜಮಾನಕಿರಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರೇಮ್ ಜೀತ್ ದಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.