ವೃದ್ಧಾಪ್ಯ ಲೆಕ್ಕಿಸದೆ ಸ್ನಾತಕೋತ್ತರ ಪರೀಕ್ಷೆ ಬರೆದ ಇಬ್ಬರು ಹಿರಿಯರು…!
Team Udayavani, Mar 26, 2022, 3:43 PM IST
ವಿಜಯಪುರ : ಸರ್ಕಾರಿ ಸೇವೆಯ ನಿವೃತ್ತಿಯ ನಂತರವೂ 81 ಹಾಗೂ 66 ರ ಹರೆಯ ಲೆಕ್ಕಿಸದೇ ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಯುವಶಕ್ತಿಗೆ ಶೈಕ್ಷಣಿಕ ಮಾದರಿ ರೂಪಿಸಿದ್ದಾರೆ. ನಾಲ್ಕು ಸ್ನಾತಕೋತ್ತರ ಪದವಿ ಪಡೆದರೂ ಐದನೇ ಪದವಿಗೆ ಓರ್ವ ವೃದ್ಧರು ಪರೀಕ್ಷೆ ಬರೆದರೆ, ಇಂಗ್ಲೀಷ ಭಾಷೆಯಲ್ಲಿ ಜ್ಞಾನ ಸಂಪಾದನೆಗೆ ಮತ್ತೋರ್ವ ವೃದ್ಧರು ಸ್ನಾತಕೋತ್ತರ ಪದವಿ ಪರೀಕ್ಷೆ ಎದುರಿಸಿದ್ದಾರೆ.
ನಗರದ ಬಿಎಲ್‍ಡಿಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿಇಇ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ, ಎಂ.ಎ. ಇಂಗ್ಲೀಷ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋ ದಿಂದ 4 ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದೀಗ 5ನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ್ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್..ಯಾರೀಕೆ ರಿತು ಖಂಡೂರಿ?
ಸಿಂದಗಿ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಸೇವೆ ಸಲ್ಲಿಸಿದ್ದ 66 ವರ್ಷದ ಪರಸಪ್ಪ ಮಡಿವಾಳರ, ಇದೀಗ ಇಂಗ್ಲೀಷ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದ್ಧಾರೆ.
ಸರ್ಕಾರಿ ಸೇವಾ ನಿವೃತ್ತಿ ಎಂದರೆ ಅದು ಕೇವಲ ವೃತ್ತಿಗೆ ಮಾತ್ರ ನಿವೃತ್ತಿ. ಆದರೆ ಜೀವನದಲ್ಲಿ ಜ್ಞಾನಾರ್ಜನೆ, ನಿರಂತರ ಚಟುವಟಿಕೆ ಹಾಗೂ ಕ್ರಿಯಾಶೀಲತೆಯಿಂದ ಇರಲು ಶೈಕ್ಷಣಿಕ ಜಾನ ಸಂಪಾದನೆ ಅತ್ಯಗತ್ಯ. ಹೀಗಾಗಿ ಈ ಇಬ್ಬರೂ ಹಿರಿಯರು ನಾಗರಿಕರು ವಿದ್ಯಾರ್ಜನೆಯನ್ನು ಮುಂದುವರೆಸಿದ್ದಾರೆ.
ನಗರದಲ್ಲಿರುವ ಇಗ್ನೋ ಕೇಂದ್ರದ ಸಂಯೋಜಕ ಡಾ.ಮಂಜುನಾಥ ಕೋರಿ, ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಭಾರತಿ ಖಾಸನೀಸ, ಸಂಸ್ಥೆಯ ಆಡಳಿತಾಧಿಕಾರಿ ಸೇರಿದಂತೆ ಇತರರು ಹಿರಿಯ ನಾಗರಿಕರ ಈ ವಿಶಿಷ್ಟ ಚಟುವಟಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.