ಉಡುಪಿ ನಗರ: ವಾಹನ ನಿಲುಗಡೆ ನಿತ್ಯದ ಸಮಸ್ಯೆ : ವಾಹನ ನಿಲುಗಡೆಗೆ ಜಾಗವೇ ಇಲ್ಲ!

Team Udayavani, Mar 26, 2022, 3:50 PM IST

ಉಡುಪಿ ನಗರ: ವಾಹನ ನಿಲುಗಡೆ ನಿತ್ಯದ ಸಮಸ್ಯೆ

ಉಡುಪಿ : ಟ್ರಾಫಿಕ್‌ ದಟ್ಟಣೆಯಿಂದಾಗಿ ಉಡುಪಿ ನಗರ ಪ್ರವೇಶಕ್ಕಿರುವ ಅಡೆತಡೆಗಳ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ನಗರದೊಳಗೆ ಹೋದ ಬಳಿಕದ ಸಮಸ್ಯೆಯೇ ಮತ್ತೂಂದು ರೀತಿಯದ್ದು. ಅಂಗಡಿ-ಮಳಿಗೆಗಳಿಗೆ ಹೋಗಬೇಕೆಂದರೆ ವಾಹನವನ್ನು ಎಲ್ಲಿ ನಿಲುಗಡೆ ಮಾಡಬೇಕು ಎಂಬ ಚಿಂತೆ ವಾಹನ ಸವಾರರದ್ದು. ಹಾಗೆಯೇ ಅವೈಜ್ಞಾನಿಕ ವೃತ್ತಗಳೂ ವಾಹನ ಸವಾರರ ಗೊಂದಲಕ್ಕೆ ಕಾರಣವಾಗಿದೆ.

ವಾಹನ ನಿಲುಗಡೆಗೆ ಜಾಗವೇ ಇಲ್ಲ!
ಉಡುಪಿ ನಗರದಲ್ಲಿ ಪ್ರಸ್ತುತ ಇರುವ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದ ಬಳಿ ಬಿಟ್ಟರೆ ಬೇರೆ ಎಲ್ಲಿಯೂ ಅಧಿಕೃತ ವಾಹನ ನಿಲುಗಡೆಗೆ ಜಾಗವೇ ಇಲ್ಲ ಎಂಬಂತಾಗಿದೆ. ಒಂದೆಡೆ ಫ‌ುಟ್‌ಪಾತ್‌ಗಳನ್ನು ಅಂಗಡಿಗಳು ಆಕ್ರಮಿಸಿಕೊಂಡಿವೆ. ಪ್ರಸ್ತುತ ರಸ್ತೆಯ ಬದಿಯಲ್ಲಿರುವ ಬಿಳಿ ಬಣ್ಣದ ಹೊರಭಾಗದಲ್ಲಿ ಹೆಚ್ಚಿನ ಮಂದಿ ವಾಹನ ನಿಲುಗಡೆಗೊಳಿಸುತ್ತಿದ್ದಾರೆ. ಆದರೆ ಇದು ತಾತ್ಕಾಲಿಕವಷ್ಟೇ. ಬನ್ನಂಜೆ ಬಳಿಯೂ ಹೆದ್ದಾರಿಯುದ್ದಕ್ಕೂ ವಾಹನ ನಿಲುಗಡೆ ಮಾಡಲಾಗುತ್ತಿದೆ. ಈ ಹಿಂದೆ ಕೋರ್ಟ್‌ ಎದುರುಗಡೆ ಪ್ರದೇಶದಲ್ಲಿಯೂ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಆದರೆ ಪೊಲೀಸ್‌ ಭಯದಿಂದ ಅದು ನಿಂತುಹೋಗಿದೆ. ನಗರದ ಶಿರಿಬೀಡು, ಕಲ್ಸಂಕ, ಮಾರುತಿ ವಿಥಿಕಾ, ತೆಂಕಪೇಟೆ, ಬಡಗುಪೇಟೆ, ಪಿಪಿಸಿ ಸಹಿತ ಎಲ್ಲ ಅಂಗಡಿ-ಮುಂಗಟ್ಟುಗಳ ಎದುರು ವಾಹನ ನಿಲುಗಡೆ ಮಾಡುತ್ತಿರುವುದು ಟ್ರಾಫಿಕ್‌ ದಟ್ಟಣೆ ಹೆಚ್ಚಳವಾಗಲು ಕಾರಣವಾಗುತ್ತಿದೆ.

ಅಂಬಲಪಾಡಿ ಜಂಕ್ಷನ್‌
ಸಂತೆಕಟ್ಟೆ ಮೂಲಕ ಮಂಗಳೂರಿನತ್ತ ತೆರಳುವ ವಾಹನಗಳು ಮತ್ತೂಂದೆಡೆ ಅಜ್ಜರಕಾಡು ಬಳಿಗೆ ತೆರಳುವ ವಾಹನಗಳು ಆ ಕಡೆಯಿಂದ ಅಂಬಲಪಾಡಿಯಿಂದ ಸಂತೆಕಟ್ಟೆ, ಅಜ್ಜರಕಾಡು, ಮಂಗಳೂರಿನತ್ತ ತೆರಳುವ ವಾಹನಗಳು ಅತ್ತ ಮಂಗಳೂರಿನಿಂದ ಆಗಮಿಸಿ ಅಜ್ಜರಕಾಡು, ಸಂತೆಕಟ್ಟೆ, ಅಂಬಲಪಾಡಿಗೆ ತೆರಳುವ ವಾಹನಗಳು ಆಗಮಿಸುತ್ತವೆ. ಮೇಲ್ನೋಟಕ್ಕೆ ಈ ಭಾಗದಲ್ಲಿ ಸಿಗ್ನಲ್‌ ಲೈಟ್‌ ಹಾಗೂ ಸಿಸಿಟಿವಿಗಳನ್ನು ಅಳವಡಿಸಿದರೆ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಣೆಯಾಗಲು ಸಾಧ್ಯವಿದೆ. ಪ್ರಸ್ತುತ 2ರಿಂದ 3 ಮಂದಿ ಟ್ರಾಫಿಕ್‌ ಪೊಲೀಸ್‌ ಸಿಬಂದಿ ಇಲ್ಲಿ ಕರ್ತವ್ಯ ನಿರತರಾಗಿದ್ದಾರೆ.

ಇದನ್ನೂ ಓದಿ : ವಿವೇಕ್ ಅಗ್ನಿಹೋತ್ರಿ ವಿರುದ್ಧ ದೂರು ದಾಖಲು: ಭೋಪಾಲಿಗಳ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದೇನು?

ಕಲ್ಸಂಕ
ಕಲ್ಸಂಕ ಭಾಗದಲ್ಲಿ ಟ್ರಾಫಿಕ್‌ ದಟ್ಟಣೆ ನಿಯಂತ್ರಿಸಲು ಅದೆಷ್ಟು ಪ್ರಯೋಗ ಮಾಡಿದರೂ ಸಾಕಾಗುತ್ತಿಲ್ಲ. ಸೈರನ್‌ ಮೂಲಕ ತಿಳಿಸುವುದು, ಒಂದು ಬದಿ ನಿಲ್ಲಿಸಿ ಮತ್ತೂಂದು ಬದಿ ಸಂಚಾರಕ್ಕೆ ಅನುವು ಮಾಡುವುದು ಹೀಗೆ ನಾನಾ ಪ್ರಯೋಗಗಳನ್ನು ಟ್ರಾಫಿಕ್‌ ಪೊಲೀಸರು ಈ ಭಾಗದಲ್ಲಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಬೇರೆ ರೀತಿಯ ಸಮಸ್ಯೆಗಳೂ ಉದ್ಬವಿಸಿರುವುದರಿಂದ ಮತ್ತೆ ಯಥಾಸ್ಥಿತಿ ಮುಂದುವರಿಯುತ್ತಿದೆ. ಆದರೂ ಈ ಹಿಂದಿಗಿಂತ ಈಗ ಸಮಸ್ಯೆ ತಕ್ಕ ಮಟ್ಟಿಗೆ ಪರವಾಗಿಲ್ಲ ಎಂಬಂತಿದೆ. ಅಂಬಾಗಿಲು ಕಡೆಯಿಂದ ಮಣಿಪಾಲ, ಶ್ರೀಕೃಷ್ಣ ಮಠದಿಂದ ಸಿಟಿ ಬಸ್‌ ನಿಲ್ದಾಣ, ಸಿಟಿ ಬಸ್‌ ನಿಲ್ದಾಣದಿಂದ ಅಂಬಾಗಿಲು ಕಡೆ ತೆರಳುವವರಿಗೆ ಮುಕ್ತ ಎಡ ಸಂಚಾರಕ್ಕೆ ಅವಕಾಶ ಇಲ್ಲದಿರುವ ಕಾರಣ ಇಲ್ಲಿ ದಟ್ಟಣೆಗೆ ಕಾರಣವಾಗುತ್ತಿದೆ. ಪ್ರಸ್ತುತ ಇರುವ ಸ್ಥಳಾವಕಾಶವನ್ನು ವಿಸ್ತರಿಸಿದರಷ್ಟೇ ಸಮಸ್ಯೆ ಅಂತ್ಯಕಾಣಲು ಸಾಧ್ಯವಿದೆ.

ಸಿಟಿ ಬಸ್‌ ನಿಲ್ದಾಣ
ಸಿಟಿ ಬಸ್‌ ನಿಲ್ದಾಣ ಮೇಲ್ದರ್ಜೆ ಕನಸು ಇನ್ನೂ ಹಾಗೆ ಉಳಿದುಕೊಂಡಿದೆ. ಇದರ ಪರಿಣಾಮ ದಿನನಿತ್ಯ ದಟ್ಟಣೆ ಈ ಭಾಗದಲ್ಲಿ ಸರ್ವೇಸಾಮಾನ್ಯ ಎಂಬಂತಾಗಿದೆ. ಬನ್ನಂಜೆಯಿಂದ ಮಣಿಪಾಲದತ್ತ ಹಾಗೂ ಬನ್ನಂಜೆಯಿಂದ ಸರ್ವಿಸ್‌ ಬಸ್‌ ತಂಗುದಾಣಕ್ಕೆ ತೆರಳುವ ವೇಳೆ ಅಶ್ವತ್ಥ ಮರದ ಬಳಿ ಉಂಟಾಗುವ ದಟ್ಟಣೆ
ಇಡೀ ನಗರಕ್ಕೆ ವಿಸ್ತರಣೆಯಾಗುತ್ತಿದೆ. ಈ ಭಾಗದಲ್ಲಿ ಟ್ರಾಫಿಕ್‌ ಪೊಲೀಸರ ಅಗತ್ಯತೆಯೂ ಕಂಡುಬಂದಿದೆ.

ಇತರ ದಟ್ಟಣೆ ಪ್ರದೇಶಗಳು
ಬ್ರಹ್ಮಗಿರಿ ಸರ್ಕಲ್‌, ಮೀನುಮಾರುಕಟ್ಟೆ, ಹಳೆ ಡಯನಾ ಸರ್ಕಲ್‌, ಬನ್ನಂಜೆ ಸರ್ಕಲ್‌, ಜೋಡುಕಟ್ಟೆ, ಉಡುಪಿ ಸಿಂಡಿಕೇಟ್‌ ಸರ್ಕಲ್‌ಗ‌ಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ವಾಹನ ದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಶಾಲಾ-ಕಾಲೇಜುಗಳು ಆರಂಭ ಹಾಗೂ ಮುಕ್ತಾಯದ ಬಳಿಕ ವಿದ್ಯಾರ್ಥಿಗಳ ಓಡಾಟವೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ವಾಹನ ಸವಾರರೂ ಜಾಗರೂಕತೆ ವಹಿಸುವ ಅಗತ್ಯತೆ ಇದೆ. ರಾತ್ರಿ ವೇಳೆಯೂ ಸರ್ಕಲ್‌ಗ‌ಳ ಗೋಚರವಿಲ್ಲದೆ ವಾಹನಗಳು ಅತೀ ವೇಗದಿಂದ ಚಲಿಸುವ ಕಾರಣ ಅಪಘಾತಕ್ಕೆ ಕಾರಣವಾಗುತ್ತಿದೆ.

ಟಾಪ್ ನ್ಯೂಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

6

Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?

1-eqwew

Rajyotsava Award: ಅರುಣ್‌ ಯೋಗಿರಾಜ್‌ ಸೇರಿ 69 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

firing

Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8(2)

Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ

5

Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ

1-sports

Sports; ಕುಚ್ಚೂರು: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Ajekar:ಪ್ರಿಯಕರನೊಂದಿಗೆ ಸೇರಿ ಪತಿಯ ಹ*ತ್ಯೆ ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ

Ajekar:ಪ್ರಿಯಕರನೊಂದಿಗೆ ಸೇರಿ ಪತಿಯ ಹ*ತ್ಯೆ ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

10

Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.