ಸಾಧನೆಗೆ ಗುರುವಿನ ಆಶೀರ್ವಾದ ಮುಖ್ಯ; ನೀಲಕಂಠ ಸ್ವಾಮಿ
ಈ ಮೂಲಕ ಕುಂದರನಾಡಿನ ಕೀರ್ತಿಯನ್ನು ನಾಡಿಗೆ ತಲುಪಿಸುತ್ತಿದ್ದಾರೆ
Team Udayavani, Mar 26, 2022, 6:31 PM IST
ಗೋಕಾಕ: ಜಾತ್ರೆಗಳಲ್ಲಿ ಭಾಗವಹಿಸುವುದರಿಂದ ನಾಡಿನ ಅನೇಕ ಮಠಾಧೀಶರ ಆಶೀರ್ವಾದ ಸಿಗುತ್ತದೆ. ಇದರಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಮುರಗೋಡದ ಮಹಾಂತ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮಿಗಳು ಆಶೀರ್ವದಿಸಿದರು. ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಕುಂದರನಾಡೋತ್ಸವ-2022ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ಮಠಗಳಿಗೆ ಆಸ್ತಿ-ಅಂತಸ್ತು ಮುಖ್ಯವಲ್ಲ, ಭಕ್ತರೇ ಮಠಗಳ ಆಸ್ತಿ. ಜೀವನದಲ್ಲಿ ಏನನ್ನಾದರೂ ಸಾ ಧಿಸಬೇಕೆಂದರೆ ಗುರುವಿನ ಆಶೀರ್ವಾದ ಮುಖ್ಯ. ಅದರಂತೆ ಎಲ್ಲ ಮಠಾಧಿಧೀಶರ ಆಶೀರ್ವಾದ ಸಿಗಬೇಕು ಎಂಬ ಉದ್ದೇಶದಿಂದ ಅಮರಸಿದ್ದೇಶ್ವರ ಶ್ರೀಗಳು ನಾಡಿನ ಅನೇಕ ಪೂಜ್ಯರನ್ನು ಜಾತ್ರೆಗೆ ಆಹ್ವಾನಿಸಿ ಆಶೀರ್ವದಿಸುತ್ತಾರೆ. ದೈನಂದಿನ ಕೆಲಸದ ಒತ್ತಡದ ನಡುವೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿಯ ಬದುಕು ಸಾಧ್ಯ ಎಂದರು.
ಚ.ಕಿತ್ತೂರು ರಾಜಗುರು ಸಂಸ್ಥಾನಮಠದ ಮಡಿವಾಳ ರಾಜೇಂದ್ರ ಸ್ವಾಮಿಗಳು ಮಾತನಾಡಿ, ಶ್ರೀಗಳು ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕುಂದರನಾಡಿನ ಪ್ರಶಸ್ತಿ ನೀಡಿ ಸನ್ಮಾನಿಸುವುದರ ಮೂಲಕ ಅವರ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿರು ವುದು ಶ್ಲಾಘನೀಯ. ಈ ಮೂಲಕ ಕುಂದರನಾಡಿನ ಕೀರ್ತಿಯನ್ನು ನಾಡಿಗೆ ತಲುಪಿಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಮಾತನಾಡಿದರು. ಸಾಧಕರಾದ ದಿ| ಡಾ.ಸಂತೋಷ ಮುತ್ನಾಳ, ಅಕ್ಕ ಅನು, ವೀರೇಶ ಹಿರೇಮಠ, ಜನನಿ ವತ್ಸಲ ಅವರಿಗೆ ಕುಂದರನಾಡೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಮತೇನಟ್ಟಿಯ ಗುರುದೇವದೇವರು ನಿರೂಪಣೆ ಮಾಡಿದರು.
ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮಿಗಳು, ಹೊಸಹಳ್ಳಿ ಅಭಿನವ ಬೂದಿಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮಿಗಳು, ರಾಯಚೂರು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಮಠದ ಮಹಾಂತ ಸ್ವಾಮಿಗಳು, ಯಳಸೂರು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಅರಳಿಕಟ್ಟಿಯ ವಿರಕ್ತಮಠದ ಶಿವಮೂರ್ತಿ ದೇವರು,ತಾರೀಹಾಳದ ಅಡವೀಶದೇವರು, ಬಸವರಾಜಸ್ವಾಮಿಗಳು ಕಪ್ಪಾರಹಟ್ಟಿ, ವಿಶ್ವನಾಥದೇವರು, ರೇಣುಕದೇವರು, ಶಿವಶರಣ ದೇವರು, ಚರಮೂರ್ತಿದೇವರು, ಚನ್ನವೀರದೇವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.