ಯುನೈಟೆಡ್ ಕಿಂಗ್‌ಡಮ್: ಚಿಕನ್ ನಜೆಟ್ಸ್ ತಿಂದು ಗಿನ್ನೆಸ್ ರೆಕಾರ್ಡ್
Team Udayavani, Mar 27, 2022, 8:00 AM IST
ಲಂಡನ್: ಗಿನ್ನೆಸ್ ರೆಕಾರ್ಡ್ ಮಾಡಬೇಕೆಂದು ಎಂತೆಂತಧ್ದೋ ಸಾಹಸಗಳನ್ನು ಮಾಡುವವರಿದ್ದಾರೆ. ಅದೇ ರೀತಿ ಯುನೈಟೆಡ್ ಕಿಂಗ್‌ಡಮ್‌ನ ಲೇಹ್ ಶಟ್ಕೆವರ್ ಚಿಕನ್ ನಜೆಟ್ಸ್ ತಿನ್ನುವ ಮೂಲಕ ಗಿನ್ನೆಸ್ ರೆಕಾರ್ಡ್ ಬರೆದಿದ್ದಾರೆ.
ಲೇಹ್ ಅವರು 1 ನಿಮಿಷದಲ್ಲಿ 19 ಚಿಕನ್ ನಜೆಟ್ಸ್ ಅಂದರೆ ಒಟ್ಟು 352 ಗ್ರಾಂ ಚಿಕನ್ ತಿಂದಿದ್ದಾರೆ. ಈ ಹಿಂದಿನ ದಾಖಲೆಯಲ್ಲಿ ನ್ಯೂಜಿಲೆಂಡ್‌ನ ನೇಲಾ ಅವರು 298 ಗ್ರಾಂ ಚಿಕನ್ ನಜೆಟ್ಸ್ ತಿಂದಿದ್ದರು. ಆ ದಾಖಲೆಯನ್ನು ಇದೀಗ ಲೇಹ್ ಮುರಿದಿದ್ದು, ವಿಶ್ವದಲ್ಲಿ ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಚಿಕನ್ ನಜೆಟ್ಸ್ ತಿಂದವರಾಗಿ ಹೊರಹೊಮ್ಮಿದ್ದಾರೆ.
ಅಂದ ಹಾಗೆ ಲೇಹ್ ಅವರು ತಿನ್ನುವ ಮೂಲಕ ಅನೇಕ ಗಿನ್ನೆಸ್ ರೆಕಾರ್ಡ್ ಬರೆದಿದ್ದಾರೆ. 3 ನಿಮಿಷದಲ್ಲಿ ಅತಿ ಹೆಚ್ಚು ಚಿಕನ್ ನಜೆಟ್ಸ್ ತಿನ್ನುವುದು, 1 ನಿಮಿಷದಲ್ಲಿ ಹೆಚ್ಚು ಟೊಮೊಟೋ(8) ತಿನ್ನುವುದು ಹೀಗೆ ಹತ್ತಾರು ಗಿನ್ನೆಸ್ ರೆಕಾರ್ಡ್ ಅವರ ಹೆಸರಿನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.