ಸಿದ್ದರಾಮಯ್ಯರದು ಹತಾಶ ಮನೋಭಾವ: ಬಿ.ಸಿ. ಪಾಟೀಲ್
Team Udayavani, Mar 26, 2022, 10:45 PM IST
ಚಿತ್ರದುರ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯಅವರಿಗೆ ಹತಾಶ ಮನೋಭಾವ ಕಾಡುತ್ತಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದು, ಅವರಿಬ್ಬರ ನಡುವೆ ದಿನೇ ದಿನೇ ಕಂದಕ ಹೆಚ್ಚಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಹಿಜಾಬ್, ಕಾಶ್ಮೀರಿ ಫೈಲ್ ಸೇರಿದಂತೆ ಮತ್ತಿತರೆ ವಿಚಾರಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವು ಮುಳುಗಿ ಹೋಗುತ್ತಿದ್ದೇವೆನೋ ಎಂಬ ಮನೋಭಾವ ಅವರಲ್ಲಿ ಕಾಡುತ್ತಿದೆ. ಆದ್ದರಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಆಗಿದ್ದವರು ಬಹಳ ತೂಕವಾಗಿ, ಗೌರವಯುತವಾಗಿ ಮಾತನಾಡಬೇಕು. ಯಾವುದೇ ಧರ್ಮ-ಜಾತಿ ಇರಲಿ, ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು ಎಂದು ಸಲಹೆ ನೀಡಿದರು.
ಯಾವುದೇ ಚಲನಚಿತ್ರವನ್ನು ಥಿಯೇಟರ್‌ನಿಂದ ತೆಗೆಯಿರಿ, ಹಾಕಿ ಎಂದು ಹೇಳುವುದು ಯಾರ ಕೈಯಲ್ಲೂ ಇಲ್ಲ. ಅದು ಪ್ರೇಕ್ಷಕರಿಗೆ ಸಂಬಂ ಧಿಸಿದ್ದು. ಪ್ರೇಕ್ಷಕ ಸಿನಿಮಾ ಥಿಯೇಟರ್‌ಗೆ ಹೋಗುವ ತನಕ ಸಿನಿಮಾ ರನ್ ಆಗುತ್ತದೆ. ಈ ಹಿಂದೆ ಎಬಿಸಿ ಸೆಂಟರ್‌ಗಳಲ್ಲಿ ಕ್ರಮವಾಗಿ ಸಿನಿಮಾ ರನ್ ಆಗುತ್ತಿದ್ದವು. ತಂತ್ರಜ್ಞಾನ ಅಪ್‌ಡೇಟ್ ಆಗಿರುವ ಕಾರಣ ಈಗ ಏಕಕಾಲದಲ್ಲಿ ಎಬಿಸಿ ಸೆಂಟರ್‌ನಲ್ಲಿ ಸಿನಿಮಾ ರನ್ ಆಗುತ್ತವೆ. ಯಾರೂ ಯಾವ ಸಿನಿಮಾ ಹಾಕಿ ಎಂದು ಹೇಳಿಲ್ಲ.
ಪ್ರೇಕ್ಷಕರ ಬೇಡಿಕೆಗೆ ಅನುಸಾರವಾಗಿ ಸಿನಿಮಾ ರನ್ ಆಗುತ್ತಿವೆ. “ದಿ ಕಾಶ್ಮೀರಿ ಫೈಲ್ಸ್’ನ ಅಂಶಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ್ದರಿಂದ ಜನ ಕಿಕ್ಕಿರಿದು ಸಿನಿಮಾ ಥಿಯೇಟರ್‌ಗಳಿಗೆ ಹೋಗಿ ನೋಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.