ಸಾರ್ವಜನಿಕ ಉದ್ದಿಮೆಗಳೆಂಬ “ಬಿಳಿ ಆನೆ’ ಸಾಕಲು “ಅಂಬಾರಿ’ ಹೂಡಿಕೆ
ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳಿಗೆ "ಗಜ ಗಾತ್ರ'ದ ಸಾಲ ಹೂಡಿಕೆ ಪ್ರಮಾಣ 2020-21ರಲ್ಲಿ 42 ಸಾವಿರ ಕೋಟಿ ರೂ.
Team Udayavani, Mar 27, 2022, 7:20 AM IST
ಬೆಂಗಳೂರು: ಸತತ ನಷ್ಟದಿಂದ ಸರಕಾರದ ಪಾಲಿಗೆ “ಬಿಳಿ ಆನೆ’ಗಳಂತಾಗಿರುವ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಸರಕಾರ “ಅಂಬಾರಿ’ ಹೂಡಿಕೆ ಮಾಡುತ್ತಿದೆ. “ಗಜ ಗಾತ್ರದ’ ಸಾಲ ನೀಡುತ್ತಿದೆ. ಆದರೆ, ಅವುಗಳಿಂದ ಬರುತ್ತಿರುವ ಪ್ರತಿಫಲ “ಅಳಿಲಿನಷ್ಟು’.
ಹೌದು! ರಾಜ್ಯದಲ್ಲಿ ಸರಕಾರಿ ಸ್ವಾಮ್ಯದ 60 ಸಾರ್ವಜನಿಕ ಉದ್ದಿಮೆಗಳಿವೆ. ಅವುಗಳಲ್ಲಿ 21ಕ್ಕೂ ಹೆಚ್ಚು ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಈ ಪೈಕಿ ಸತತವಾಗಿ ನಷ್ಟದಲ್ಲಿರುವ 10ಕ್ಕೂ ಹೆಚ್ಚು ಉದ್ದಿಮೆಗಳಲ್ಲಿ ಸರಕಾರ ಕಳೆದು ಐದು ವರ್ಷಗಳಲ್ಲಿ ಬರೋಬ್ಬರಿ 42 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಇದರಲ್ಲಿ ಸಂಚಿತ ನಷ್ಟ 16 ಸಾವಿರ ಕೋಟಿ ರೂ. ಆಗಿದೆ.
ನಷ್ಟದಲ್ಲಿರುವ ಕಂಪೆನಿಗಳ ಪೈಕಿ ಶಾಸನಬದ್ಧ ಸಂಸ್ಥೆಗಳಾದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಸರಕಾರಿ ಕಂಪೆನಿಗಳಾದ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಮೈಸೂರು ಸಕ್ಕರೆ ಕಂಪೆನಿ, ಮೈಸೂರು ಪೇಪರ್ ಮಿಲ್ಸ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ದೊಡ್ಡ ಪ್ರಮಾಣದ ಹೂಡಿಕೆ ಸರಕಾರ ಮಾಡಿದೆ. ಈ ಕಂಪೆನಿಗಳಿಗೆ 2017-18ರಲ್ಲಿ ಇದ್ದ 13 ಸಾವಿರ ಕೋಟಿ ರೂ. ಹೂಡಿಕೆ ಪ್ರಮಾಣ 2020-21ರಲ್ಲಿ 42 ಸಾವಿರ ಕೋಟಿ ರೂ. ಆಗಿದೆ.
ಆರ್ಥಿಕ ಇಲಾಖೆ ಸಮಜಾಯಿಷಿ
ನಷ್ಟದಲ್ಲಿರುವ ಕಂಪೆನಿಗಳಲ್ಲಿ ಹೂಡಿಕೆ ಮತ್ತು ಸಾಲದ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ರಾಜ್ಯ ಸರಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಷ್ಟದಲ್ಲಿರುವ ಕಂಪೆನಿಗಳಲ್ಲಿ ನೀರಾವರಿ ಹಾಗೂ ಇಂಧನ ಕ್ಷೇತ್ರಕ್ಕೆ ಸಂಬಂಧಿ
ಸಿದ್ದಾಗಿದ್ದು, ಅದು ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಿರುವುದರಿಂದ ಹೂಡಿಕೆಯು ಅನಿವಾರ್ಯವಾಗಿದೆ ಎಂದು ಆರ್ಥಿಕ ಇಲಾಖೆ ಸಮಜಾಯಿಷಿ ನೀಡಿದೆ. ಸರಕಾರದ ಮಾಹಿತಿಯಂತೆ ರಾಜ್ಯ ದಲ್ಲಿರುವ 60 ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳ ಪೈಕಿ 21 ಉದ್ದಿಮೆಗಳು ನಷ್ಟದಲ್ಲಿವೆ.
ನಷ್ಟದಲ್ಲಿರುವ ಕಂಪೆನಿ
ಮುಚ್ಚಲು ಶಿಫಾರಸು
ಸಾರ್ವಕನಿಕ ಲೆಕ್ಕಪತ್ರ ಸಮಿತಿಯು 2015ರಲ್ಲಿ ಸಲ್ಲಿಸಿದ್ದ ತನ್ನ 5ನೇ ವರದಿಯಲ್ಲಿ ನಷ್ಟದಲ್ಲಿರುವ ಕಂಪೆನಿಗಳು, ನಿಗಮಗಳ ಕಾರ್ಯ ಸಾಧನೆ ನಿರ್ಣಯಿಸಲು ಮತ್ತು 13ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸದ ಕಂಪೆನಿ, ನಿಗಮಗಳನ್ನು ಗುರುತಿಸಿ ಮುಚ್ಚಲು ಶಿಫಾರಸು ಮಾಡಿದೆ ಎಂದು ಸಿಎಜಿ ವರದಿ ಉಲ್ಲೇಖೀಸಿದ್ದು, ಸಿಎಜಿ ಮತ್ತು ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಗಳಲ್ಲಿ ಭಾರಿ ನಷ್ಟ ಅನುಭವಿಸುತ್ತಿರುವ ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳ ಕೆಲಸವನ್ನು ಪರಿಶೀಲಿಸಲು ಮತ್ತು ಹೂಡಿಕೆ, ಪುನಶ್ಚೇತನ, ಮುಚ್ಚುವಿಕೆಗೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.
ಗಜ ಗಾತ್ರದ ಹೂಡಿಕೆ ಅಳಿಲಷ್ಟು ಪ್ರತಿಫಲ
ರಾಜ್ಯ ಸರಕಾರವು 2021ರ ಮಾರ್ಚ್ ಅಂತ್ಯದಲ್ಲಿರುವಂತೆ ಕಳೆದ ಐದು ವರ್ಷಗಳಲ್ಲಿ ಕಂಪೆನಿ, ನಿಗಮ ಮತ್ತು ಇತರ ಸಂಸ್ಥೆಗಳಲ್ಲಿ 68, 256 ಕೋಟಿ ರೂ. ಹೂಡಿಕೆ ಮಾಡಿದೆ. ಅದರಲ್ಲಿ 89 ಸರಕಾರಿ ಕಂಪೆನಿಗಳಲ್ಲಿ 60,731 ಕೋಟಿ, ಒಂಭತ್ತು ಶಾಸನಬದ್ಧ ನಿಗಮಗಳಲ್ಲಿ 2,934 ಕೋಟಿ, 44 ಕೂಡು ಬಂಡವಾಳ ಕಂಪೆನಿಗಳಲ್ಲಿ 4,137 ಕೋಟಿ, ಸಹಕಾರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 455 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಈ ಹೂಡಿಕೆ 2020-21ರಲ್ಲಿ ಬಂದಿರುವ ಪ್ರತಿಫಲ ಕೇವಲ 80 ಕೋಟಿ ರೂ. ಮಾತ್ರ.
31 ಸಾವಿರ ಕೋಟಿ ಸಾಲ
ಕಂಪೆನಿಗಳು, ನಿಗಮಗಳು ಮತ್ತು ಸಹಕಾರ ಸಂಸ್ಥೆಗಳಲ್ಲಿ ಹೂಡಿಕೆಯ ಜತೆಗೆ ಸರಕಾರವು ಅನೇಕ ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡಗಳನ್ನು ಸಹ ನೀಡುತ್ತದೆ. ಅದರಂತೆ ಕಳೆದ ಐದು ವರ್ಷಗಳಿಂದ 2021ರ ಮಾರ್ಚ್ 31ರಲ್ಲಿದ್ದಂತೆ ಒಟ್ಟು 31 ಸಾವಿರ ಕೋಟಿ ರೂ. ಸಾಲ ಬಾಕಿ ಇದೆ. ಈ ಸಾಲ ಬಾಕಿಯ ಮೇಲಿನ ಬಡ್ಡಿ 4,374 ಕೋಟಿ ರೂ. ಇದ್ದು, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 278 ಕೋಟಿ ರೂ. ಬಡ್ಡಿ ಸ್ವೀಕೃತವಾಗಿದೆ. 2020-21ರಲ್ಲಿ 2,669 ಕೋಟಿ ರೂ. ಸಾಲ ನೀಡಲಾಗಿದೆ. 2021ರ ಮಾ.31ರ ಅಂತ್ಯಕ್ಕೆ ವಸೂಲು ಮಾಡಬೇಕಿದ್ದ 5 ಸಾವಿರ ಕೋಟಿ ರೂ. ಅಸಲು ಮತ್ತು 4,904 ಬಡ್ಡಿ ಸೇರಿ ಒಟ್ಟು 9,911 ಕೋಟಿ ರೂ.ಗಳ ವಸೂಲಾತಿಯ ಅವಧಿ ಮೀರಿದೆ. 2020-21ರಲ್ಲಿ ರಾಜ್ಯ ಸರಕಾರವು ಮಂಜೂರು ಮಾಡಿದ ಒಟ್ಟು 4,063 ಕೋಟಿ ರೂ. ಮೊತ್ತದ 66 ಸಾಲಗಳಲ್ಲಿ 2,817 ಕೋಟಿ ರೂ. ಮೊತ್ತದ 50 ಸಾಲ ಮಂಜೂರು ಮಾಡಲಾಗಿದೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.