ವಿನ್ಯಾಸಕಾರರು, ನೇಕಾರರ ನಡುವೆ ಸಮನ್ವಯದ ಅಗತ್ಯ: ಪವಿತ್ರ ಮುದ್ದಯ್ಯ ಪ್ರತಿಪಾದನೆ


Team Udayavani, Mar 27, 2022, 11:32 AM IST

ವಿನ್ಯಾಸಕಾರರು, ನೇಕಾರರ ನಡುವೆ ಸಮನ್ವಯದ ಅಗತ್ಯ: ಪವಿತ್ರ ಮುದ್ದಯ್ಯ ಪ್ರತಿಪಾದನೆ

ಸಾಗರ: ಕೈಮಗ್ಗ ಸೇರಿದಂತೆ ಎಲ್ಲ ಕರಕುಶಲಕರ್ಮಿಗಳು ಮಾರುಕಟ್ಟೆಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೋವಿಡ್ ಕಾರಣದಿಂದ ಸವಾಲುಗಳು ಹೆಚ್ಚಾಗಿವೆ. ಗ್ರಾಮೀಣ ಕೈಗಾರಿಕೆಯಾಗಿರುವ ಕೈಮಗ್ಗ ನೇಕಾರಿಕೆ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯಾಗಬೇಕಾದರೆ ಈ ಕ್ಷೇತ್ರದಲ್ಲಿಯ ವಿನ್ಯಾಸಕಾರರು ಹಾಗೂ ನೇಕಾರರು ಒಟ್ಟಿಗೆ ಸೇರಿ ಕೆಲಸ ಮಾಡುವ ಸಮನ್ವಯದ ಅಗತ್ಯವಿದೆ ಎಂದು ಬೆಂಗಳೂರಿನ ವಸ್ತ್ರ ವಿನ್ಯಾಸಕರಾದ ಪವಿತ್ರ ಮುದ್ದಯ್ಯ ಪ್ರತಿಪಾದಿಸಿದರು.

ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಯದಲ್ಲಿ ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ನಡೆದ ಎರಡು ದಿನಗಳ ಚರಕ ಉತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೊಡುಕೊಳ್ಳುವವರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೈಮಗ್ಗ ಕ್ಷೇತ್ರದಲ್ಲಿಯ ನಮ್ಮ ನಡುವಿನ ಬಹುತೇಕ ವಿನ್ಯಾಸಕಾರರು ಸಾಂಪ್ರದಾಯಿಕ ನೇಕಾರರಿಂದಲೇ ವಿನ್ಯಾಸದ ವಿವಿಧ ಬಗೆಗಳನ್ನು ಕಲಿತಿರುತ್ತಾರೆ. ವಿನ್ಯಾಸ ಎಂಬುದು ಕೇವಲ ನಮ್ಮ ತೃಪ್ತಿಗೆ ಎನ್ನುವಂತಾಗಬಾರದು. ಬದಲಿಗೆ ಆಯಾ ಕಾಲದ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ಜೊತೆಗೆ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವ ಮಾದರಿಯನ್ನು ಅನುಸರಿಸಬೇಕು ಎಂದರು.

ಕೋವಿಡ್‌ನಿಂದಾಗಿ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ನೇಕಾರರ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹೊಸ ಯೋಜನೆಯ ಮೂಲಕ ಅವರ ನೆರವಿಗೆ ನಿಲ್ಲಬೇಕಿತ್ತು. ಆದರೆ ಕೋವಿಡ್ ಪರಿಹಾರ ರೂಪದಲ್ಲಿ ಒಬ್ಬ ನೇಕಾರನಿಗೆ ವರ್ಷಕ್ಕೆ ಕೇವಲ ೨ ಸಾವಿರ ರೂ. ಪರಿಹಾರ ನೀಡಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಾಂಪ್ರದಾಯಿಕ ವಿಧಾನದಲ್ಲಿ ವಸ್ತುಗಳನ್ನು ತಯಾರಿಸುವ ಗ್ರಾಮೀಣ ಶ್ರಮಿಕರನ್ನು ತರಬೇತುಗೊಳಿಸುವ ಕಾರ‍್ಯ ಆಗಬೇಕು. ಆಧುನಿಕ ತಾಂತ್ರಿಕ ಮಾಹಿತಿ ಇರುವವರು ಗ್ರಾಮೀಣ ಕರಕುಶಲಕರ್ಮಿಗಳ ಜತೆ ಬೆರೆತು ಕೆಲಸ ಮಾಡಬೇಕು. ಚರಕ ಅಂತಹ ಅವಕಾಶ ಸೃಷ್ಟಿಸುತ್ತಿದೆ. ಕೊಡುಕೊಳ್ಳುವವರ ಸಮಾವೇಶದ ಮೂಲಕ ಅದು ಸಾಧ್ಯವಾಗುತ್ತದೆ ಎಂದರು.
ವಿಜಯಪುರದ ಬಂಜಾರ ಕಸೂತಿ ಒಕ್ಕೂಟದ ನಿರ್ದೇಶಕರಾದ ಆಶಾ ಪಾಟೀಲ್ ಮಾತನಾಡಿ, ಕೈಮಗ್ಗ ನಮ್ಮ ನಡುವಿನ ಪ್ರಮುಖ ಕರಕುಶಲ ಕಲೆ ಆಗಿದೆ. ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿರುವ ಅಪ್ಪಟ ದೇಸಿತನದ ಈ ಕಲೆಗೆ ಅಗತ್ಯವಿರುವಷ್ಟು ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಎದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.

ಇದನ್ನೂ ಓದಿ : ದಿಗ್ಗಾಂವ ಮಠದ ಬಾವಿಯಲ್ಲಿ ಬಿದ್ದು ಶಿಕ್ಷಕಿ ಸಾವು

ನಮ್ಮ ಯೋಚನಾ ಲಹರಿಯಲ್ಲಿ ಆಧುನಿತೆ ಇರಬೇಕು. ಆದರೆ ಕೇವಲ ಉಡುಗೆ ತೊಡುಗೆ, ಭಾಷೆ, ಆಹಾರ ಸೇವನೆಯಲ್ಲಿ ಆಧುನಿಕತೆಯನ್ನು ಅನುಸರಿಸಿದರೆ ಸಾಲದು. ಇಂತಹ ಸಂಸ್ಕೃತಿ ನಮ್ಮ ಮಾನವೀಯ ಸಂಬಂಧಗಳನ್ನು ದೂರ ಮಾಡುತ್ತದೆ. ಕೈಮಗ್ಗ ನೇಕಾರಿಕೆಯಂತಹ ಈ ನೆಲದ ಕಲೆಗೆ ಸಂಬಂಧಗಳನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ನೇಕಾರರಾದ ಸಂಗಪ್ಪ ಮಂಟೆ, ನೇಕಾರರು ಉಳಿದರೆ ಮಾತ್ರ ಕೈಮಗ್ಗ ಕ್ಷೇತ್ರ ಜೀವಂತವಾಗಿರಲು ಸಾಧ್ಯ. ಒಂದು ಮಗು ಮೃತಪಟ್ಟರೆ ಮತ್ತೊಂದು ಮಗು ಪಡೆಯಬಹುದು. ಆದರೆ ತಾಯಿಯೇ ಮೃತಪಟ್ಟರೆ ಮಗುವನ್ನು ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಬಂಜಾರ ಕಸೂತಿ ಒಕ್ಕೂಟದ ಸೀಮಾ, ತುಲಾ ಸಂಸ್ಥೆಯ ಸುಷ್ಮಿತಾ, ಗುಜರಾತ್‌ನ ವಾರ್ಧಾದ ಮಗನ್ ಸಂಗ್ರಹಾಲಯದ ಸೋನು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ರಮೇಶ್, ಇಂಧುಕುಮಾರ್, ಮಹಾಲಕ್ಷ್ಮಿ, ಪ್ರಸನ್ನ ಇದ್ದರು. ಪದ್ಮಶ್ರೀ ನಿರೂಪಿಸಿದರು.
ಚರಕ ಸಂಸ್ಥೆಯ ಉಡುಪುಗಳನ್ನು ಧರಿಸಿದವರಿಂದ ಆಕರ್ಷಕ ಪ್ರದರ್ಶನ ನಡೆಯಿತು. ನಿರಾಮಯ ಕಲಾತಂಡದ ರಾಮಚಂದ್ರ ಹೆಗಡೆ ಕೊಂಡದಕುಳಿ, ರಾಮಕೃಷ್ಣ ಹಿಲ್ಲೂರು, ಪ್ರಸನ್ನ ಶೆಟ್ಟಿಗಾರ್, ಅಶ್ವಿನಿ ಮುಂತಾದ ಕಲಾವಿದರಿಂದ ದಕ್ಷ ಯಜ್ಞ ಯಕ್ಷಗಾನ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.