ಮುಂಬೈ ಮಾದ್ಲಿಗೆ ಭಾರೀ ಬೇಡಿಕೆ
Team Udayavani, Mar 28, 2022, 3:10 PM IST
ಬಕವಿ-ಬನಹಟ್ಟಿ: ಮಾದ್ಲಿ ಎಂದರೆ ಉತ್ತರ ಕರ್ನಾಟಕದಲ್ಲಿ ಹಬ್ಬ ಹರಿದಿನಗಳಲ್ಲಿ ಇದ್ದದ್ದೇ. ಆದರೆ ಬನಹಟ್ಟಿಯ ಕಡ್ಲಿ ಸಂಗಪ್ಪನವರು ತಯಾರಿಸುವ ಮಾದ್ಲಿಗೆ ತನ್ನದೇ ಆದ ರುಚಿ ಇದ್ದು, ದೇಶ- ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ.
ಈ ಮಾದ್ಲಿ ಬನಹಟ್ಟಿಯಲ್ಲಿ ತಯಾರಾದರೂ ಮುಂಬೈ ಮಾದ್ಲಿ ಎಂದೇ ಪ್ರಸಿದ್ಧಿ ಹೊಂದಿದೆ. ಹಳ್ಳಿಗಳಲ್ಲಿ ಜಾತ್ರೆ-ಉತ್ಸವ, ಹಬ್ಬ ಹರಿದಿನಗಳಲ್ಲಿ ಮಾತ್ರ ಮನೆಯಲ್ಲಿ ಎಡೆಗೆಂದು ತಯಾರಿಸುವ ಮಾದಲಿ ಇಲ್ಲಿ ವರ್ಷದ ಹನ್ನೆರಡೂ ತಿಂಗಳು ಸಿಗುತ್ತದೆ.
ಈ ಭಾಗದಲ್ಲಿ ಯಾವುದೇ ವಿಶೇಷವಾದ ಊಟವಿದ್ದರೆ ಕಡ್ಲಿ ಸಂಗಪ್ಪನವರು ತಯಾರಿಸಿರುವ ಮಾದ್ಲಿ ಇರಲೇಬೇಕು. ಸಂಕ್ರಮಣದ ಸಂದರ್ಭದಲ್ಲಿ ಅಂದಾಜು ಮೂರೂವರೆ ಕ್ವಿಂಟಲ್, ಗುಳ್ಳವ್ವನ ಸಂದರ್ಭದಲ್ಲಿ ಒಂದೂವರೆ ಕ್ವಿಂಟಲ್ ಮಾದ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇವರ ಮಾದ್ಲಿ ಬೆಂಗಳೂರು, ಮುಂಬೈ, ಬೆಳಗಾವಿ, ಕೊಲ್ಲಾಪುರ, ಧಾರವಾಡ, ಬಾಗಲಕೋಟೆ ಸೇರಿದಂತೆ ದೇಶದ ವಿವಿಧ ಮೂಲೆಗೆ ತಲುಪಿದೆ. ಅಷ್ಟೇ ಯಾಕೆ ದುಬೈ, ಅಮೆರಿಕಕ್ಕೂ ಹೋಗಿದೆ.
ಇವರ ಮಾದ್ಲಿಗೆ ಮಾರು ಹೋದವರಿಲ್ಲ. ಸದ್ಯ ಇದರ ಬೆಲೆ 350 ರೂ.ಇದೆ. ಗೋಧಿ ,ಕಡ್ಲಿ, ಬೇಳೆ, ಅಕ್ಕಿಯ ಮಿಶ್ರಣವನ್ನು ಬೀಸಿದ ನಂತರ ಬೆಲ್ಲ ಹಾಗೂ ಸಕ್ಕರೆ ಹಾಕುತ್ತಾರೆ. ಹಿಟ್ಟು-ಬೆಲ್ಲ-ಸಕ್ಕರೆ ಒಂದಾಗುವವರೆಗೆ ಅದನ್ನು ಕೈಯಿಂದ ತಿಕ್ಕುತ್ತಾರೆ. ನಂತರ ಅದಕ್ಕೆ ಒಣ ಕೊಬ್ಬರಿ ಹೆರೆದು ಹಾಕುತ್ತಾರೆ. ನಂತರ ಕಸಕಸಿ ಹುರಿದು ಹಾಕುತ್ತಾರೆ. ಜಾಜಿಕಾಯಿ ಕಂಪು ಹೆಚ್ಚಿಸುತ್ತಿರುವುದರಿಂದ ಹಾಕುತ್ತಾರೆ. ಗೋಡಂಬಿ, ಒಣ ದ್ರಾಕ್ಷಿ, ಕೇರಬೀಜ ಇವೆಲ್ಲವುಗಳನ್ನು ಹಾಕುತ್ತಾರೆ. ಮಾದ್ಲಿ ಎಂದರೆ ತುಪ್ಪ ಇರಲೇಬೇಕು. ಮಾದ್ಲಿಗೆ ತುಪ್ಪ ಹಾಕಿದಷ್ಟು ಅದರ ರುಚಿ ಹೆಚ್ಚಾಗುತ್ತದೆ. ಹೀಗಾಗಿ ಇಲ್ಲಿ ಯಾವುದೇ ಸಮಾರಂಭ ಇರಲಿ ಊಟದ ಸಂದರ್ಭದಲ್ಲಿ ಊಟಕ್ಕೆ ನೀಡುವವರಿಗೆ ತುಪ್ಪ ಹಾಕಾಕ ನಾಚಬ್ಯಾಡ್ರಿ ಎನ್ನುತ್ತಾರೆ ಈ ಭಾಗದ ಜನರು.
ಡಾ| ರಾಜಕುಮಾರ ಮಾದ್ಲಿ ತಿಂದಿದ್ರು ಗೋಕಾಕ ವರದಿ ಚಳವಳಿ ಸಂದರ್ಭದಲ್ಲಿ ವರನಟ ಡಾ| ರಾಜಕುಮಾರ ಅವರು ಬನಹಟ್ಟಿಗೆ ಬಂದ ಸಂದರ್ಭದಲ್ಲಿ ಅವರೂ ಕೂಡಾ ಮಾದ್ಲಿ ಹಾಗೂ ತುಪ್ಪದ ಸವಿ ಉಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎರಡೆರಡು ಸಲ ಹಾಕಿಸಿಕೊಂಡು ಊಟ ಮಾಡಿದ್ದರು.
ಮುಂಬೈ ಮಾದ್ಲಿ ಎಂದೇ ಖ್ಯಾತಿ ಬನಹಟ್ಟಿಯಲ್ಲಿ ಮಾದ್ಲಿ ತಯಾರಾದರೂ ಅದಕ್ಕೆ ಮುಂಬೈ ಮಾದ್ಲಿ ಎಂದೇ ಕರೆಯುತ್ತಾರೆ. ಮೊದಲು ಇದಕ್ಕೆ ಬೇಕಾಗುವ ಗೋಡಂಬಿ, ಒಣ ದ್ರಾಕ್ಷಿ, ಕೇರಬೀಜಗಳು ಮುಂಬೈಯಿಂದ ಬರುತ್ತಿದ್ದ ಕಾರಣಕ್ಕೆ ಇಲ್ಲಿಯ ಮಾದ್ಲಿಗೆ ಮುಂಬೈ ಮಾದ್ಲಿ ಎಂದೇ ಖ್ಯಾತಿ ಪಡೆದಿದೆ.
ಮಾದ್ಲಿ ತಯಾರು ಮಾಡೂದಂದ್ರ ಒಬ್ಬರು, ಇಬ್ಬರು ಸಾಲೂದಿಲ್ರಿ. ಹಿಟ್ಟು, ಸಕ್ಕರೆ ಮತ್ತು ಬೆಲ್ಲವನ್ನು ಹದವಾಗಿ ಮಿಶ್ರಣ ಮಾಡಬೇಕಾಗುತ್ತದೆ. ಅದನ್ನು ಕೈಯಿಂದಲೇ ತಿಕ್ಕಬೇಕು. ಮಿಕ್ಸಿಗೆ ಹಾಕಿದರೆ ಅಷ್ಟೊಂದು ಸ್ವಾದ ಬರಲ್ಲ. ಅದಕ್ಕಾಗಿ ಬಹಳಷ್ಟು ಶ್ರಮವಹಿಸ ಬೇಕಾಗುತ್ತದೆ. ಅದಕ್ಕಾಗಿ ಬೇರೆಯವರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಸಂಗಪ್ಪ ಕಡ್ಲಿ, ಮಾದ್ಲಿ ತಯಾರಕರು.
-ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.