ಕೆರೆ ಭರ್ತಿ ಮಾಡದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ
Team Udayavani, Mar 28, 2022, 5:25 PM IST
ಸಿಂಧನೂರು: ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಕೆರೆಗಳನ್ನು ಕಾಲುವೆಗೆ ನೀರು ಬಂದ್ ಮಾಡುವ ಮುನ್ನವೇ ತುಂಬಿಸಬೇಕು. ಇದರಲ್ಲಿ ಯಾರಾದರೂ ವಿಫಲವಾದರೆ, ಅವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಎಚ್ಚರಿಕೆ ನೀಡಿದರು.
ನಗರದ ತಾಪಂನಲ್ಲಿ ಭಾನುವಾರ ಕುಡಿಯುವ ನೀರಿಗೆ ಸಂಬಂಧಿಸಿ ಕರೆದಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ವರ್ಷ ಕೆಲವು ಗ್ರಾಪಂಗಳಲ್ಲಿ ಸಮಸ್ಯೆಯಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಉದ್ಬಭವಿಸದ ರೀತಿಯಲ್ಲಿ ಏ.6ರಿಂದಲೇ ಕೆರೆ ತುಂಬಿಸುವ ಕೆಲಸ ಆರಂಭಿಸಬೇಕು. ಕುಡಿಯುವ ನೀರಿಗಾಗಿ ಕೆರೆ ತುಂಬಿಸುವುದಕ್ಕೆ ಸಮಯ ನಿಗದಿಪಡಿಸಿಕೊಂಡು, ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.
ಬಂದೋಬಸ್ತ್ ಪಡೆದುಕೊಳ್ಳಿ
ಗ್ರಾಪಂವಾರು ಪಿಡಿಒಗಳು ಹಾಗೂ ಅಧ್ಯಕ್ಷರಿಂದ ಮಾಹಿತಿ ಪಡೆದುಕೊಂಡ ಶಾಸಕರು, ಕೆರೆ ತುಂಬಿಸುವ ಕೆಲಸಕ್ಕೆ ಯಾರಾದರೂ ಅಡ್ಡಿಪಡಿಸಿದರೆ, ಪೊಲೀಸ್ ಬಂದೋಬಸ್ತ್ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಎಡದಂಡೆ ಕಾಲುವೆ ಕೊನೆ ಭಾಗದ ಊರಿನ ಕೆರೆಗಳಿಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯವಾಗಿ ನರೇಗಾ, 14 ಮತ್ತು 15ನೇ ಹಣಕಾಸು ಅನುದಾನವನ್ನು ಇದಕ್ಕಾಗಿ ಬಳಸಬೇಕು. ಟಾಸ್ಕ್ಪೋರ್ಸ್‌ಗೂ ಹಣ ಬರುವ ನಿರೀಕ್ಷೆಯಿದ್ದು, ಆದ್ಯತೆ ಮೇಲೆ ವಿನಿಯೋಗಿಸಲಾಗುವುದು ಎಂದರು.
ಬೋರ್‌ವೆಲ್ ಬೇಡ
ಬೇಸಿಗೆಯಲ್ಲಿ ಬೋರ್‌ವೆಲ್ ಕೊರೆಯಿಸುವುದಕ್ಕೆ ಪಿಡಿಒಗಳು ಬೇಡಿಕೆ ಸಲ್ಲಿಸಿದಾಗ, ಈಗಾಗಲೇ ಮನೆ-ಮನೆಗೆ ನೀರು ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇಂತಹ ಸಮಯದಲ್ಲಿ ಮತ್ತೆ ಬೋರ್ ವೆಲ್ ಕೊರೆಯುವುದು ಬೇಡ. ಪೈಪ್ ಲೈನ್ ಇಲ್ಲವೇ ಸಣ್ಣಪುಟ್ಟ ಕೆಲಸಗಳಿದ್ದರೆ, ಅವುಗಳನ್ನು ಮುಗಿಸಿ ಒಂದೇ ಒಂದು ಗ್ರಾಮದಲ್ಲಿ ಸಮಸ್ಯೆಯಾಗದಂತೆ ನೀರು ಕೊಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ತಹಶೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಲಕ್ಷ್ಮೀದೇವಿ, ಸಿಪಿಐ ಉಮೇಶ್ ಕಾಂಬಳೆ, ಗ್ರಾಪಂ ಪಿಡಿಒಗಳು, ಅಧ್ಯಕ್ಷರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.