ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚು ನಡೆಯಲಿ
Team Udayavani, Mar 28, 2022, 5:51 PM IST
ರಾಯಚೂರು: ಸಂಗೀತ, ವೀರಗಾಸೆ ತುಂಬಾ ಸೊಗಸಾದ ಕಲಾ ಪ್ರಕಾರಗಳು. ಅದರಂತೆ ರಂಗಭೂಮಿ ಕೂಡ ಜನರನ್ನು ಮನರಂಜಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಆರ್‌ಟಿಪಿಎಸ್ ಮುಖ್ಯ ಇಂಜಿನಿಯರ್ ಸಿದ್ದಗಂಗಯ್ಯ ಅಭಿಪ್ರಾಯ ಪಟ್ಟರು.
ತಾಲೂಕಿನ ಶಕ್ತಿನಗರದಲ್ಲಿ ದೇವಸುಗೂರಿನ ಡಾ| ಬಾಬು ಜಗಜೀವನ್‌ರಾಂ ರಂಗನಿರಂತರ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಗೀತ ಜಾನಪದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ವೆಂಕಟ ನರಸಿಂಹಲು ತಂಡದಿಂದ ಹಾಸ್ಯಭರಿತ ನಾಟಕ ಕಳ್ಳ ಗುರು ಸುಳ್ಳ ಶಿಷ್ಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಇಂಥ ಕಾರ್ಯಕ್ರಮ ನಿರಂತರ ನಡೆಯಬೇಕು. ಜನರು ಒಟ್ಟೊಟ್ಟಿಗೆ ಸೇರಬೇಕೆಂದರೆ ಇಂಥ ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚು-ಹೆಚ್ಚು ಆಯೋಜನೆ ಮಾಡಬೇಕು ಎಂದರು.
ಆರ್‌ಟಿಪಿಎಸ್ ನೌಕರರ ಸಂಘದ ಕಾರ್ಯದರ್ಶಿ ವೆಂಕನಗೌಡ ಮಾತನಾಡಿ, ಈ ಕಲಾ ಸಂಸ್ಥೆ ಸಾಂಸ್ಕೃತಿಕ ನಡೆಸಿಕೊಡುವ ಸಂಗೀತ, ನೃತ್ಯ, ನಾಟಕಗಳನ್ನು ಜನ ನೋಡಿ ಆನಂದಿಸುತ್ತಾರೆ. ಜನರಿಗೆ ಖುಷಿ ನೀಡಿದರೆ ಅಂಥ ಕಾರ್ಯಕ್ರಮಗಳ ಉದ್ದೇಶ ಈಡೇರಿದಂತೆ ಎಂದರು.
ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಜಗದೀಶ್ ಸಮಾಳ ಮಾತನಾಡಿ, ಕೋವಿಡ್ ಕಾರಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ಈಗಷ್ಟೇ ಮತ್ತೆ ಶುರುವಾಗುತ್ತಿವೆ. ಕಲಾವಿದರು ಬಹಳ ಸಂಕಷ್ಟದಲ್ಲಿದ್ದು, ಇಂಥ ಕಲಾವಿದರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದರು.
ಆರ್‌ಟಿಪಿಎಸ್ ಎಸ್ಸಿ, ಎಸ್ಟಿ ನೌಕರರ ಸಂಘದ ಕಾರ್ಯದರ್ಶಿ ಭೀಮಯ್ಯ ನಾಯಕ್ ಮಾತನಾಡಿದರು. ನಿವೃತ್ತ ನೌಕರ ಸತ್ಯನಾಥ್, ಭೀಮಣ್ಣ ಗಂಟೆ ಸೇರಿ ಇತರರಿದ್ದರು. ಸೂಗುರೇಶ್ವರ ಜಾನಪದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ಸಂಗೀತ ಪ್ರದರ್ಶನ ಹಾಗೂ ಕಳ್ಳ ಗುರು ಸುಳ್ಳು ಶಿಷ್ಯ ನಾಟಕ ಪ್ರದರ್ಶಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.