ಗೆಲುವಿನ ಗಂಟೆ ಬಾರಿಸಿದ ಗುಜರಾತ್‌ ಟೈಟಾನ್ಸ್‌


Team Udayavani, Mar 29, 2022, 12:12 AM IST

ಗೆಲುವಿನ ಗಂಟೆ ಬಾರಿಸಿದ ಗುಜರಾತ್‌ ಟೈಟಾನ್ಸ್‌

ಪುಣೆ: ಆಲ್‌ರೌಂಡ್‌ ಪ್ರದರ್ಶನ ನೀಡಿದ ನೂತನ ಐಪಿಎಲ್‌ ತಂಡ ಗುಜರಾತ್‌ ಟೈಟಾನ್ಸ್‌ ತಂಡವು ಕೂಟದ ಇನ್ನೊಂದು ನೂತನ ತಂಡವಾದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.

ಆರಂಭದಲ್ಲಿ ಎಡವಿದರೂ ಕೊನೆ ಹಂತದಲ್ಲಿ ಆಟಗಾರರ ಉತ್ತಮ ಆಟದಿಂದಾಗಿ ಗುಜರಾತ್‌ 19.4 ಓವರ್‌ಗಳಲ್ಲಿ 5 ವಿಕೆಟಿಗೆ 161 ರನ್‌ ಬಾರಿಸಿ ವಿಜಯಿಯಾಯಿತು. ಈ ಮೊದಲು ಲಕ್ನೋ 6 ವಿಕೆಟಿಗೆ 158 ರನ್‌ ಗಳಿಸಿತ್ತು.

ಕೊನೆ ಹಂತದಲ್ಲಿ ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯ ಮತ್ತು ಅಭಿನವ್‌ ಮನೋಹರ್‌ ಅವರ ಉಪಯುಕ್ತ ಆಟದಿಂದಾಗಿ ಗುಜರಾತ್‌ ಐಪಿಎಲ್‌ನಲ್ಲಿ ಮೊದಲ ಜಯದ ಸಂಭ್ರಮ ಆಚರಿಸಿತು.

ಲೆವಿಸ್‌ ಗಳಿಕೆ ಕೇವಲ 6 ರನ್‌. ಲಕ್ನೋದ 3 ವಿಕೆಟ್‌ಗಳನ್ನು ಬರೀ 20 ರನ್ನಿಗೆ ಉಡಾಯಿಸಿದ ಗುಜರಾತ್‌ “ಡ್ರೀಮ್‌ ಓಪನಿಂಗ್‌’ ಕಂಡಿತು.

ಕರ್ನಾಟಕದ ಮತ್ತೋರ್ವ ಆಟಗಾರ ಮನೀಷ್‌ ಪಾಂಡೆ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು. ಕೇವಲ 6 ರನ್‌ ಮಾಡಿದ ಅವರು ಶಮಿ ಎಸೆತದಲ್ಲಿ ಬೌಲ್ಡ್‌ ಆದರು. ಶಮಿ ಐಪಿಎಲ್‌ ಪವರ್‌ ಪ್ಲೇ ಅವಧಿಯಲ್ಲಿ ಮೊದಲ ಸಲ 3 ವಿಕೆಟ್‌ ಉರುಳಿಸಿದ ಸಾಧನೆಗೈದರು. ಮೊದಲ 6 ಓವರ್‌ಗಳಲ್ಲಿ ಲಕ್ನೋ 32ಕ್ಕೆ 4 ವಿಕೆಟ್‌ ಉರುಳಿಸಿಕೊಂಡು ಪರದಾಡುತ್ತಿತ್ತು. ಅರ್ಧ ಹಾದಿ ಕ್ರಮಿಸುವಾಗ ತಂಡಕ್ಕೆ ಹೆಚ್ಚಿನ ಹಾನಿಯೇನೂ ಆಗಲಿಲ್ಲ. ಆದರೆ ಸ್ಕೋರ್‌ ಮಾತ್ರ 47ರಲ್ಲಿ ಕುಂಟುತ್ತಿತ್ತು. ದೀಪಕ್‌ ಹೂಡಾ ಮತ್ತು ಆಯುಷ್‌ ಬದೋನಿ ನಿಧಾನವಾಗಿ ಕ್ರೀಸ್‌ ಆಕ್ರಮಿಸಿಕೊಳ್ಳುತ್ತಿದ್ದರು.

ಹೂಡಾ-ಬದೋನಿ ಸಾಹಸ
ಹೂಡಾ-ಬದೋನಿ ಗುಜರಾತ್‌ ಬೌಲಿಂಗ್‌ ದಾಳಿಯನ್ನು ಎಚ್ಚರಿಕೆಯಿಂದಲೇ ನಿಭಾಯಿಸಿದರು. ಆರಂಭದಲ್ಲಿ ನಿಧಾನವಾಗಿ ಆಡತೊಡಗಿದ ಈ ಜೋಡಿ ಬಳಿಕ ಬಿರುಸಿನ ಬ್ಯಾಟಿಂಗಿಗೆ ಮುಂದಾಯಿತು. ಅಲ್ಲಿಯ ತನಕ ಘಾತಕ ಲಯದಲ್ಲಿ ಸಾಗುತ್ತಿದ್ದ ಗುಜರಾತ್‌ ಬೌಲಿಂಗ್‌ ಹಳಿತಪ್ಪತೊಡಗಿತು. ನಾಯಕ ಪಾಂಡ್ಯ ಚೆನ್ನಾಗಿ ದಂಡಿಸಲ್ಪಟ್ಟರು. ಈ ಜೋಡಿ 5ನೇ ವಿಕೆಟಿಗೆ 87 ರನ್‌ ಪೇರಿಸಿ ಲಕ್ನೋ ಹೋರಾಟವನ್ನು ಜಾರಿಯಲ್ಲಿರಿಸಿತು. 15ನೇ ಓವರ್‌ನಲ್ಲಿ ತಂಡದ ಮೊತ್ತ ನೂರರ ಗಡಿ ತಲುಪಿತು.

ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್‌ ಬೀಸತೊಡಗಿದ ದೀಪಕ್‌ ಹೂಡಾ 41 ಎಸೆತಗಳಿಂದ 55 ರನ್‌ ಬಾರಿಸಿದರು. ಸಿಡಿಸಿದ್ದು 6 ಫೋರ್‌ ಹಾಗೂ 2 ಸಿಕ್ಸರ್‌. ಅಂತಿಮವಾಗಿ ಇವರನ್ನು ರಶೀದ್‌ ಖಾನ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.

15ನೇ ಓವರ್‌ ಮುಕ್ತಾಯಕ್ಕೆ ಲಕ್ನೋ 4 ವಿಕೆಟಿಗೆ 109 ರನ್‌ ಗಳಿಸಿತ್ತು. ಡೆತ್‌ ಓವರ್‌ನಲ್ಲಿ ಆಯುಷ್‌ ಬದೋನಿ ಮತ್ತು ಕೃಣಾಲ್‌ ಪಾಂಡ್ಯ ಜತೆಗೂಡಿದರು. ರನ್‌ ಬಿರುಸಿನ ಗತಿಯಲ್ಲಿ ಬರತೊಡಗಿತು. ಆರಂಭದಲ್ಲಿ ಘಾತಕವಾಗಿ ಪರಿಣಮಿಸಿದ್ದ ಶಮಿ ಇಲ್ಲಿ ದಂಡಿಸಿಕೊಂಡರು.

18 ವರ್ಷದ ಆಯುಷ್‌ ಬದೋನಿ ತಮ್ಮ ಪದಾರ್ಪಣಾ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು. ಫ‌ರ್ಗ್ಯುಸನ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಇವರ ಫಿಫ್ಟಿ ಪೂರ್ತಿಗೊಂಡಿತು. ಅಂತಿಮ ಓವರ್‌ನಲ್ಲಿ ಔಟಾದ ಬದೋನಿ 41 ಎಸೆತಗಳಿಂದ 54 ರನ್‌ ಕೊಡುಗೆ ಸಲ್ಲಿಸಿದರು. ಇದರಲ್ಲಿ 3 ಸಿಕ್ಸರ್‌, 4 ಬೌಂಡರಿ ಒಳಗೊಂಡಿತ್ತು. ಕೃಣಾಲ್‌ ಪಾಂಡ್ಯ 13 ಎಸೆತಗಳಿಂದ 21 ರನ್‌ ಮಾಡಿ ಔಟಾಗದೆ ಉಳಿದರು. ಡೆತ್‌ ಓವರ್‌ಗಳಲ್ಲಿ ಲಕ್ನೋ 49 ರನ್‌ ಪೇರಿಸಿತು.

ಮಿಲ್ಲರ್‌ ,ತೆವಾಟಿಯ ಆಟ
ಮಿಲ್ಲರ್‌ ಮತ್ತು ತೆವಾಟಿಯ 16ನೇ ಮತ್ತು 17ನೇ ಓವರಿನಲ್ಲಿ ಅನುಕ್ರಮವಾಗಿ 22 ಮತ್ತು 17 ರನ್‌ ಸಿಡಿಸಿ ತಂಡದ ಗೆಲುವಿನ ಒತ್ತಡವನ್ನು ಕಡಿಮೆ ಮಾಡಿದರು. ಅಂತಿಮವಾಗಿ ತೆವಾಟಿಯ 40 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಲಕ್ನೋದಂತೆ ಗುಜರಾತ್‌ ಕೂಡ ಆರಂಭದಲ್ಲಿ ಎಡವಿತು. ಮೊದಲ ಓವರಿನಲ್ಲಿ ಶುಭ್‌ಮನ್‌ ಗಿಲ್‌ ಅವರನ್ನು ಕಳೆದುಕೊಂಡರೆ ಸ್ವಲ್ಪ ಹೊತ್ತಿನಲ್ಲಿ ವಿಜಯ್‌ ಶಂಕರ್‌ 4 ರನ್ನಿಗೆ ಔಟಾದರು. ಆಬಳಿಕ ಮ್ಯಾಥ್ಯೂ ವೇಡ್‌ ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು.

ಲಕ್ನೋ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ವೇಡ್‌-ಪಾಂಡ್ಯ ಮೂರನೇ ವಿಕೆಟಿಗೆ 8 ಓವರ್‌ಗಳಲ್ಲಿ 57 ರನ್‌ ಹೊಡೆದರು. ಈ ಹಂತದಲ್ಲಿ ತಂಡ ಪಾಂಡ್ಯ ಅವರನ್ನು ಕಳೆದುಕೊಂಡಿತು.

ಲಕ್ನೋ ತಂಡದ ಪ್ರಾರಂಭ ಅತ್ಯಂತ ಆಘಾತಕಾರಿಯಾಗಿತ್ತು. ನಾಯಕ ಕೆ.ಎಲ್‌. ರಾಹುಲ್‌ ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ನೂತನ ತಂಡಕ್ಕೆ ಅತ್ಯಂತ ನಿರಾಶಾದಾಯಕ ಆರಂಭ ಒದಗಿಸಿದರು. ಮೊಹಮ್ಮದ್‌ ಶಮಿ ಎಸೆತ ಅವರ ಬ್ಯಾಟನ್ನು ಸವರಿ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ಕೈ ಸೇರಿತು. ಆದರೆ ಅಂಪಾಯರ್‌ ಔಟ್‌ ನೀಡಲಿಲ್ಲ. ಡಿಆರ್‌ಎಸ್‌ ತೆಗೆದುಕೊಂಡಾಗ ರಾಹುಲ್‌ ಔಟಾದುದು ಸ್ಪಷ್ಟವಾಗಿತ್ತು. 11 ವರ್ಷಗಳ ಬಳಿಕ ಐಪಿಎಲ್‌ ಆಡತೊಡಗಿದ ವೇಡ್‌ ಪ್ರಥಮ ಎಸೆತದಲ್ಲೇ ಕ್ಯಾಚ್‌ ಪಡೆದರು!

ರಾಹುಲ್‌ ಬೆನ್ನಲ್ಲೇ, ಮುಂದಿನ ಓವರ್‌ನಲ್ಲೇ ಮತ್ತೋರ್ವ ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಆವರನ್ನೂ ಶಮಿ ಪೆವಿಲಿಯನ್ನಿಗೆ ಅಟ್ಟಿದರು. 7 ರನ್‌ ಮಾಡಿದ ಡಿ ಕಾಕ್‌ ಬೌಲ್ಡ್‌ ಆಗಿ ವಾಪಸಾದರು.

ವರುಣ್‌ ಆರೋನ್‌ ಕೂಡ ಘಾತಕವಾಗಿ ಗೋಚರಿಸಿದರು. ವಿಂಡೀಸಿನ ಅಪಾಯಕಾರಿ ಆಟಗಾರ ಎವಿನ್‌ ಲೆವಿಸ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಸ್ಕೋರ್‌ ಪಟ್ಟಿ
ಲಕ್ನೋ ಸೂಪರ್‌ ಜೈಂಟ್ಸ್‌
ಕೆ.ಎಲ್‌. ರಾಹುಲ್‌ ಸಿ ವೇಡ್‌ ಬಿ ಶಮಿ 0
ಕ್ವಿಂಟನ್‌ ಡಿ ಕಾಕ್‌ ಬಿ ಶಮಿ 7
ಎವಿನ್‌ ಲೆವಿಸ್‌ ಸಿ ಗಿಲ್‌ ಬಿ ಆರೋನ್‌ 10
ಮನೀಷ್‌ ಪಾಂಡೆ ಬಿ ಶಮಿ 6
ದೀಪಕ್‌ ಹೂಡಾ ಎಲ್‌ಬಿಡಬ್ಲ್ಯು ರಶೀದ್‌ 55 ಆಯುಷ್‌ ಬದೋನಿ ಸಿ ಪಾಂಡ್ಯ ಬಿ ಆರೋನ್‌ 54
ಕೃಣಾಲ್‌ ಪಾಂಡ್ಯ ಔಟಾಗದೆ 21
ದುಷ್ಮಂತ ಚಮೀರ ಔಟಾಗದೆ 1
ಇತರ 4
ಒಟ್ಟು (6 ವಿಕೆಟಿಗೆ) 158
ವಿಕೆಟ್‌ ಪತನ: 1-0, 2-13, 3-20, 4-29, 5-116, 6-156.
ಬೌಲಿಂಗ್‌:
ಮೊಹಮ್ಮದ್‌ ಶಮಿ 4-0-25-3
ವರುಣ್‌ ಆರೋನ್‌ 4-0-45-2
ಲಾಕಿ ಫ‌ರ್ಗ್ಯುಸನ್‌ 4-0-24-0
ಹಾರ್ದಿಕ್‌ ಪಾಂಡ್ಯ 4-0-37-0
ರಶೀದ್‌ ಖಾನ್‌ 4-0-27-1

ಗುಜರಾತ್‌ ಟೈಟಾನ್ಸ್‌
ಶುಭ್‌ಮನ್‌ ಗಿಲ್‌ ಸಿ ಹೂಡಾ ಬಿ ಚಮೀರ 0
ಮ್ಯಾಥ್ಯೂ ವೇಡ್‌ ಬಿ ದೀಪಕ್‌ ಹೂಡಾ 30
ವಿಜಯ್‌ ಶಂಕರ್‌ ಬಿ ಚಮೀರ 4
ಹಾರ್ದಿಕ್‌ ಪಾಂಡ್ಯ ಸಿ ಪಾಂಡೆ ಬಿ ಕೃಣಾಲ್‌ 33
ಡೇವಿಡ್‌ ಮಿಲ್ಲರ್‌ ಸಿ ರಾಹುಲ್‌ ಬಿ ಅವೇಶ್‌ ಖಾನ್‌ 30
ರಾಹುಲ್‌ ತೆವಾಟಿಯ ಔಟಾಗದೆ 40
ಅಭಿನವ್‌ ಮನೋಹರ್‌ ಔಟಾಗದೆ 15
ಇತರ: 9
ಒಟ್ಟು (19.4 ಓವರ್‌ಗಳಲ್ಲಿ 5 ವಿಕೆಟಿಗೆ) 161
ವಿಕೆಟ್‌ ಪತನ: 1-4, 2-15, 3-72, 4-78, 5-138
ಬೌಲಿಂಗ್‌:
ದುಷ್ಮಂತ ಚಮೀರ 3-0-22-2
ಅವೇಶ್‌ ಖಾನ್‌ 3.4-0-33-1
ಮೊಸಿನ್‌ ಖಾನ್‌ 2-0-18-0
ರವಿ ಬಿಷ್ಣೋಯಿ 4-0-34-0
ಕೃಣಾಲ್‌ ಪಾಂಡ್ಯ 4-0-17-1
ಪಂದ್ಯಶ್ರೇಷ್ಠ: ಮೊಹಮ್ಮದ್‌ ಶಮಿ

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.