ಕಂಬಳ ಋತು ಮುಗಿಯುತ್ತಿದ್ದಂತೆ ಮತ್ತೊಂದು ಕಂಬಳ ?
ಬಂಟ್ವಾಳದ ನಾವೂರಿನಲ್ಲಿ ಕರೆಗಳ ಸಿದ್ಧತೆ
Team Udayavani, Mar 29, 2022, 12:57 PM IST
ಬಂಟ್ವಾಳ: ಈ ವರ್ಷದ ಕಂಬಳ ಸೀಸನ್ ಮುಗಿಯುತ್ತಾ ಬರುತ್ತಿದ್ದು, ಇದೀಗ ಬಂಟ್ವಾಳದ ನಾವೂರು ಗ್ರಾಮದಲ್ಲಿ ಮತ್ತೂಂದು ಕಂಬಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಮಂಗಳೂರಿನ ಬಂಗ್ರಕೂಳೂರಿನಲ್ಲಿ ರವಿವಾರ ಮುಕ್ತಾಯಗೊಂಡ ಕಂಬಳದಲ್ಲಿ ಎ. 16ರಂದು ನಾವೂರಿನ ಕಂಬಳ ನಡೆಯುವ ಸಾಧ್ಯತೆಯ ಕುರಿತು ಘೋಷಣೆ ಮಾಡಲಾಗಿದ್ದು, ಮಳೆಯ ಕಾರಣಕ್ಕೆ ಒಂದು ವಾರ ಹಿಂದೆ ಹೋಗುವ ಸಾಧ್ಯತೆಯೂ ಇದೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಈ ಕಂಬಳ ಕೂಟ ನಡೆಯಲಿದ್ದು, ಕಾವಳಕಟ್ಟೆಯ ಮೂಡೂರು-ಪಡೂರು ಕಂಬಳ ನಿಂತ ಬಳಿಕ ಇದೀಗ ಮತ್ತೆ ಅವರ ನೇತೃತ್ವದಲ್ಲಿ ಕಂಬಳ ಆಯೋಜನೆಯ ಸಿದ್ಧತೆ ನಡೆದಿದೆ.
ಜಿಲ್ಲಾ ಕಂಬಳ ಸಮಿತಿ ಅನುಮತಿ ಸೇರಿದಂತೆ ಇನ್ನಿತರ ವಿಚಾರಗಳು ಇನ್ನೂ ಅಂತಿಮಗೊಳ್ಳದೆ ಇರುವುದರಿಂದ ಇದೇ ವರ್ಷ ಕಂಬಳ ನಡೆಯುತ್ತದೆಯೇ ಎಂಬುದು ಕೂಡ ಅಧಿಕೃತ ಘೋಷಣೆಯಾಗಿಲ್ಲ. ನಾವೂರು ಗ್ರಾಮದ ಕೂಡಿಬೈಲು ಎಂಬ ಪ್ರದೇಶ ಗದ್ದೆಯಲ್ಲಿ ಕಂಬಳಕ್ಕೆ ಜೋಡುಕರೆಗಳು ಸಿದ್ಧಗೊಳ್ಳುತ್ತಿದ್ದು, ಉದ್ಯಮಿ ಪಿಯೂಸ್ ಎಲ್.ರಾಡ್ರಿಗಸ್ ಅವರ ನೇತೃತ್ವದಲ್ಲಿ ಕರೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಜಿಲ್ಲಾ ಕಂಬಳ ಸಮಿತಿಯ ಈ ವರ್ಷದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಎ. 9ರ ವೇಣೂರು ಸೂರ್ಯ-ಚಂದ್ರ ಕಂಬಳಕ್ಕೆ ಈ ವರ್ಷದ ಕಂಬಳ ಸೀಸಸ್ ಮುಕ್ತಾಯಗೊಳ್ಳಲಿದ್ದು, ಅದರ ಬಳಿಕ ನಾವೂರಿನ ಕಂಬಳಕ್ಕೆ ಅವಕಾಶ ಕೋರಲಾಗಿದೆ. ಈಗಾಗಲೇ ಎ. 16ಕ್ಕೆ ನಾವೂರು ಕಂಬಳ ನಡೆಯುವ ಘೋಷಣೆಯಾಗಿದ್ದರೂ, ಪ್ರಸ್ತುತ ಕಳೆದ ಕೆಲವು ದಿನಗಳಿಂದ ಮಳೆ ಕಾಣಿಸಿಕೊಂಡಿದೆ. ಹೀಗಾಗಿ ಅದನ್ನು ಒಂದು ವಾರ ಮುಂದಕ್ಕೆ ಹಾಕಿ ಎ. 23-24ಕ್ಕೆ ನಡೆಸುವ ಕುರಿತು ನಾವೂರು ಕಂಬಳ ಸಮಿತಿ ಚಿಂತನೆ ನಡೆಸುತ್ತಿದೆ.
ಮೂಡೂರು-ಪಡೂರು ಕಂಬಳ?
ಹಿಂದೆ ಕಾವಳಕಟ್ಟೆಯಲ್ಲಿ ಮೂಡೂರು-ಪಡೂರು ಹೆಸರಿನಲ್ಲಿ ಕಂಬಳ ನಡೆಯುತ್ತಿದ್ದು, ನಾವೂರಿನಲ್ಲೂ ಅದೇ ಹೆಸರಿನಲ್ಲಿ ಕಂಬಳ ನಡೆಸುವ ಕುರಿತು ಸಮಿತಿ ಆಲೋಚಿಸಿದೆ. ಅದೇ ಹೆಸರನ್ನು ಉಳಿಸುವ ಚಿಂತನೆಯಾದರೆ, ಮತ್ತೂಂದೆಡೆ ಕಂಬಳ ನಡೆಯುವ ಸ್ಥಳ ನಾವೂರಿನ ಪಕ್ಕದಲ್ಲೇ ದೇವಶ್ಯಪಡೂರು ಹಾಗೂ ದೇವಶ್ಯಮೂಡೂರು ಎಂಬ ಗ್ರಾಮಗಳಿವೆ. ಹೀಗಾಗಿ ಅದೇ ಹೆಸರು ಹೊಂದಿಕೊಳ್ಳಲಿದ್ದು, ಜತೆಗೆ ನಿರ್ಮಾಣವಾಗುತ್ತಿರುವ ಕಂಬಳದ ಜೋಡುಕರೆಗಳು ಮೂಡಾಯಿ- ಪಡ್ಡಾಯಿ ಬರುತ್ತದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ದಿನಾಂಕ ಅಂತಿಮಗೊಂಡಿಲ್ಲ
ಪ್ರಸ್ತುತ ಕಂಬಳದ ಕರೆಗಳ ಕೆಲಸ ನಡೆಯುತ್ತಿದ್ದು, ಇನ್ನೂ ಕೂಡ ದಿನಾಂಕ ಅಂತಿಮಗೊಂಡಿಲ್ಲ. ಒಂದೆಡೆ ಮಳೆಯ ಲಕ್ಷಣ ಕೂಡ ಇದ್ದು, ಹೀಗಾಗಿ ದಿನಾಂಕ ಘೋಷಿಸಿಲ್ಲ. ಎ.1ಕ್ಕೆ ನಾವೂರು ಕಂಬಳದ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. –ಪಿಯೂಸ್ ಎಲ್.ರಾಡ್ರಿಗಸ್, ನಾವೂರು ಕಂಬಳದ ಮುಂದಾಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.