![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 29, 2022, 5:01 PM IST
ಏಪ್ರಿಲ್ 01 ರಂದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ‘ಹೋಮ್ ಮಿನಿಸ್ಟರ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದರ ಭಾಗವಾಗಿ ಚಿತ್ರ ತಂಡ ಇತ್ತೀಚಿಗೆ ಟ್ರೈಲರ್ ಬಿಡುಗಡೆಗೊಳಿಸಿದ್ದು, 18 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಇದೀಗ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಉಪೇಂದ್ರ ಹೊಸದೊಂದು ಟಾಸ್ಕ್ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು, ಉಪ್ಪಿ ತಮ್ಮ ಚಿತ್ರ ‘ಹೋಮ್ ಮಿನಿಸ್ಟರ್’ ಪ್ರಚಾರ ಅಂಗವಾಗಿ ತಮ್ಮ ಅಭಿಮಾನಿಗಳಿಗೆ ಒಂದು ಹೊಸ ಚಾಲೆಂಜ್ ನೀಡಿದ್ದು, ಬಂಪರ್ ಆಫರ್ ಕೂಡ ನೀಡಿದ್ದಾರೆ.
ಮನೆ ಕೆಲಸ ಹಾಗು ಮಡದಿ ಪ್ರಿಯಾಂಕಾ ಅವರ ಸೇವೆ ಮಾಡಿ ಉಣ ಬಡಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ‘ಓ ಗಂಡಸರೇ ನಿಮ್ಮ ಹೋಮ್ ಮಿನಿಸ್ಟರ್ ಜೊತೆ ಈ ಸವಾಲನ್ನು ಒಪ್ಪುವಿರಾ? ಎಂದು ಹ್ಯಾಷ್ ಟ್ಯಾಗ್ ‘ಹೋಮ್ ಮಿನಿಸ್ಟರ್’ ಎಂದು ಹಾಕಿ ಸೋಷಿಯಲ್ ಮೀಡಿಯಾ ದಲ್ಲಿ ಅಭಿಮಾನಿಗಳಿಗೆ ಟಾಸ್ಕ್ ನೀಡುವ ಮೂಲಕ ವಿಭಿನ್ನ ಕಾರ್ಯದಲ್ಲಿ ತೊಡಗಿದ್ದಾರೆ.
ಓ ಗಂಡಸರೇ, ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ನೀವು ಒಪ್ಪುವಿರಾ?
Dear Men, Will you accept this challenge with your home minister?? #homeministerchallenge@KicchaSudeep @Official_Ganesh @PrajwalDevaraj @TheNameIsYash pic.twitter.com/wOdSBlzOcg
— Upendra (@nimmaupendra) March 27, 2022
ಈ ಚಾಲೆಂಜ್ ಅಚ್ಚುಕಟ್ಟಾಗಿ ನಿರ್ವಹಿಸಿ ಗೆಲ್ಲುವ ಮೂವರು ಅದೃಷ್ಟಶಾಲಿಗಳಿಗೆ ‘ಹೋಮ್ ಮಿನಿಸ್ಟರ್’ಚಿತ್ರದ ಮೊದಲ ಪ್ರದರ್ಶನ ಟಿಕೆಟ್ ದೊರೆಯಲಿದೆ. ಉಪೇಂದ್ರ ಜೊತೆ ವಿಶೇಷ ಭೋಜನದಲ್ಲಿ ಪಾಲ್ಗೊಳ್ಳುವ ಸುವರ್ಣ ಅವಕಾಶ ವನ್ನು ಕಲ್ಪಿಸಲಾಗಿದೆ. ಈಗಾಗಲೇ ‘ಹೋಮ್ ಮಿನಿಸ್ಟರ್’ ಚಾಲೆಂಜ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ರೀಲ್ಸ್ ಗಳು ಬರಲು ಪ್ರಾರಂಭವಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.