ಭಾರತೀಯ ಸಂಪ್ರದಾಯದಲ್ಲಿ ಮ್ಯಾಕ್ಸ್‌ವೆಲ್ ಮದುವೆ: ಫೋಟೋಗಳು ವೈರಲ್


Team Udayavani, Mar 29, 2022, 6:19 PM IST

1-asdsa

ಚೆನ್ನೈ : ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಭಾರತೀಯ ಸಂಪ್ರದಾಯದಲ್ಲಿ ಗೆಳತಿ ವಿನಿ ರಾಮನ್ ಅವರೊಂದಿಗೆ ಮದುವೆಯಾಗಿರುವ ಫೋಟೋಗಳು ಮತ್ತು ವಿಡಿಯೋ ಗಳು ಈಗ ವೈರಲ್ ಆಗುತ್ತಿವೆ.

ತಮಿಳು ಸಂಪ್ರದಾಯದಲ್ಲಿ ನಡೆದ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ.

ವಿನಿ ರಾಮನ್ ಮೆಹೆಂದಿ ಸಮಾರಂಭದ ಹಲವಾರು ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಮಾರ್ಚ್ 18 ರಂದು ವಿವಾಹ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯದಂತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಅವರ ಮದುವೆಯ ಸಂಭ್ರಮಗಳು ಸಾಂಪ್ರದಾಯಿಕ ಹಳದಿ ಮತ್ತು ಮೆಹೆಂದಿ ಸಮಾರಂಭಗಳನ್ನು ಒಳಗೊಂಡಿತ್ತು. ಹಣೆಗೆ ತಿಲಕವಿಟ್ಟು ಹೂಮಾಲೆ ಧರಿಸಿ ಮ್ಯಾಕ್ಸ್‌ವೆಲ್ ದೇಸಿ ವರನ ಅವತಾರದಿಂದ ಸಾಕಷ್ಟು ಪ್ರಭಾವಿತರಾಗಿದ್ದೇವೆ ಎಂದು ಹಲವಾರು ಮಂದಿ ಪ್ರಶಂಶಿಸಿದ್ದಾರೆ.

ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದ ಅವರು ಹಿಂದೂ ಸಂಪ್ರದಾಯಕ್ಕೆ ಗೌರವ ಕೊಟ್ಟಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮದುವೆಯ ವಿಡಿಯೋದಲ್ಲಿ ವಿನಿ ಅವರ ಹಲವು ಸಂಬಂಧಿಕರೂ ಭಾಗಿಯಾಗಿದ್ದು ತಮಿಳು ಐಯಂಗಾರ್ ಸಂಪ್ರದಾಯದಂತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಮ್ಯಾಕ್ಸ್‌ವೆಲ್ ತನ್ನ ವಿವಾಹದಿಂದಾಗಿ ಐಪಿಎಲ್‌ಗಾಗಿ ಭಾರತಕ್ಕೆ ಆಗಮಿಸುವುದನ್ನು ವಿಳಂಬಗೊಳಿಸಿದರು. ಪಾಕಿಸ್ಥಾನ ವಿರುದ್ಧದ ಸರಣಿಗೆಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮುಂದಿನ ಕೆಲವು ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶಿಬಿರವನ್ನು ಸೇರುವ ನಿರೀಕ್ಷೆಯಿದೆ.

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಈಗ 2 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ದಂಪತಿಗಳು ಫೆಬ್ರವರಿ 2020 ರಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್‌ಗಳ ಮೂಲಕ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ಫಾರ್ಮಸಿಸ್ಟ್ ಆಗಿರುವ ವಿನಿ ರಾಮನ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನೆಲೆಸಿದ್ದಾರೆ. ಅವರು ಭಾರತೀಯ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಟಾಪ್ ನ್ಯೂಸ್

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Chess Olympiad: ಭಾರತದ ಗೆಲುವಿಗೆ ಬ್ರೇಕ್‌

Chess Olympiad: ಭಾರತದ ಗೆಲುವಿಗೆ ಬ್ರೇಕ್‌

1-bcci

INDvBAN Day 3: 515 ರನ್ ಚೇಸ್ ; ಬಾಂಗ್ಲಾ 4 ವಿಕೆಟ್ ನಷ್ಟಕ್ಕೆ 158 ರನ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.