ಸರಕಾರಗಳು ಸಂವಿಧಾನ ವಿರೋಧಿಯಾಗಿವೆ: ಚೇತನ್
ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ
Team Udayavani, Mar 29, 2022, 6:22 PM IST
ಗಂಗಾವತಿ: ದೇಶದ ಸರಕಾರಗಳು ಶ್ರೀಮಂತರು, ಕಾರ್ಪೋರೇಟ್, ಇಂಗ್ಲಿಷ್ ಮಾತನಾಡುವವರ ಪರವಾಗಿದ್ದು ಬಡ, ಅಲೆಮಾರಿ ಮತ್ತು ತಳ ಸಮುದಾಯಗಳ ವಿರೋಧಿಯಾಗಿವೆ ಎಂದು ನಟ ಚೇತನ್ ಹೇಳಿದರು.
ಅವರು ಹಿರೇಜಂತಗಲ್‌ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ದೇಶದ ಸಮಸ್ಯೆಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಸಿದ್ಧಾಂತದಲ್ಲಿ ಪರಿಹಾರವಿದೆ. ಕೆಲ ಮೇಲ್ವರ್ಗದವರು ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟು ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜನರಲ್ಲಿದ್ದ ಭಾವೈಕ್ಯತೆ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಶೋಷಿತರು ದಲಿತರ ಪರವಾಗಿ ಸಂವಿಧಾನದ ಆಶಯದಂತೆ ಸರಕಾರ ನಡೆಸುವಂತೆ ಪ್ರತಿಭಟನೆ ನಡೆಸಿದರೆ ದೇಶ ದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಸದಾಶಯಗಳನ್ನು ಗಾಳಿಗೆ ತೂರಿ ಕೆಲವರು ಜಾತಿ ವೈಷಮ್ಯ ಮೆರೆಯುತ್ತಿದ್ದರೂ ಆಡಳಿತ ನಡೆಸುವವರು ಮೌನ ವಹಿಸಿ ಪಟ್ಟಭದ್ರರಿಗೆ ಬೆಂಬಲಿಸುತ್ತಿರುವುದು ನಾಚಿಕೆಗೇಡು. ಸಮಾನ ಮನಸ್ಕರೆಲ್ಲ ಸೇರಿ ಪ್ರತಿಯೊಂದು ಜಿಲ್ಲೆಗೂ ತೆರಳಿ ಕಾರ್ಮಿಕರು, ಕೃಷಿ ಕೂಲಿಕಾರರು, ರೈತರು ಅಸಂಘಟಿತ, ಶೋಷಿತರು. ಇವರೆಲ್ಲ ಪ್ರಗತಿಯಾದಾಗ ಮಾತ್ರ ದೇಶ ಸಮಗ್ರವಾಗಿ ಪ್ರಗತಿ ಹೊಂದಲು ಸಾಧ್ಯ. ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಶೋಷಿತರು ಅಲೆಮಾರಿಗಳು, ದೇವದಾಸಿ ಮಹಿಳೆಯರಿಗೆ ಗುಡಿಸಲು ರಹಿತ ಮನೆ ನಿರ್ಮಿಸುವ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ರಮೇಶ, ಹ.ರ. ಮಹೇಶ, ಜೆ.ಭಾರದ್ವಾಜ್, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ರಮೇಶ ಕಿರಿಕಿರಿ, ಹುಲಿಗೆಮ್ಮ ಕಿರಿಕಿರಿ, ತಿಮ್ಮಣ್ಣ ಮುಂಡಾಸ್, ಜಗದೀಶ, ರಮೇಶ ಗಬ್ಬೂರ್, ಜಡಿಯಪ್ಪ, ಅಂಜನೇಯ, ಪತ್ರಕರ್ತರಾದ ಹಂಚಿನಾಳ ಹುಸೇನಪ್ಪ ಮಾಸ್ತರ್, ರಗಡಪ್ಪ ಹೊಸಳ್ಳಿ, ಸೇರಿ ಹಿರೇಜಂತಗಲ್ ಚಲುವಾದಿ ಓಣಿಯ ಜನರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.