ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ಗೆ ಗೆಲುವು


Team Udayavani, Mar 29, 2022, 11:20 PM IST

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ಗೆ ಗೆಲುವು

ಪುಣೆ: ಮಂಗಳವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿತು. ಬ್ಯಾಟಿಂಗ್‌-ಬೌಲಿಂಗ್‌ ಎರಡರಲ್ಲೂ ಹೈದರಾಬಾದ್‌ ವಿಫ‌ಲವಾಗುವುದರೊಂದಿಗೆ, ಹಿಂದಿನ ಆವೃತ್ತಿಯ ಶೋಚನೀಯ ಪ್ರದರ್ಶನವನ್ನೇ ಮುಂದುವರಿಸಿದಂತಾಯಿತು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ್‌, ನಾಯಕ ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಅರ್ಧಶತಕ ಹಾಗೂ ಅಗ್ರ ಕ್ರಮಾಂಕದ ಆಟಗಾರರ ಉಪಯುಕ್ತ ಆಟದಿಂದಾಗಿ 20 ಓವರ್‌ಗಳಲ್ಲಿ 6 ವಿಕೆಟಿಗೆ 210 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 149 ರನ್‌ ಗಳಿಸಿತು. ರಾಜಸ್ಥಾನ್‌ ಗೆಲುವಿನ ಅಂತರ 61 ರನ್‌.

ಹೈದರಾಬಾದ್‌ ಪರ ಐಡೆನ್‌ (57 ರನ್‌, 41 ಎಸೆತ) , ವಾಷಿಂಗ್ಟನ್‌ ಸುಂದರ್‌, ರೊಮಾರಿಯೊ ಶೆಫ‌ರ್ಡ್‌ ಹೊರತುಪಡಿಸಿದರೆ ಉಳಿದೆಲ್ಲ ಬ್ಯಾಟಿಗರು ಸಂಪೂರ್ಣ ವಿಫ‌ಲರಾದರು. ಸುಂದರ್‌ ಕೇವಲ 14 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ ಮೂಲಕ 40 ರನ್‌ ಸಿಡಿಸಿದರು. ರಾಜಸ್ಥಾನ್‌ ಪರ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (22ಕ್ಕೆ 3), ಪ್ರಸಿದ್ಧ ಕೃಷ್ಣ (16ಕ್ಕೆ 2), ಟ್ರೆಂಟ್‌ ಬೌಲ್ಟ್ (23ಕ್ಕೆ 2) ಅತ್ಯುತ್ತಮ ಬೌಲಿಂಗ್‌ ಮಾಡಿದರು.

ರಾಜಸ್ಥಾನ್‌ ಬ್ಯಾಟಿಂಗ್‌ ಸ್ಫೋಟ: ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ಪರ ಆರಂಭಿಕರು ಉತ್ತಮ ಆಟವಾಡಿದರು. ಬಳಿಕ ಜತೆಗೂಡಿದ ನಾಯಕ ಸಂಜು ಸ್ಯಾಮ್ಸನ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರ ಭರ್ಜರಿ ಆಟದಿಂದಾಗಿ ರಾಜಸ್ಥಾನ ಉತ್ತಮ ಮೊತ್ತ ಪೇರಿಸುವಂತಾಯಿತು. ಸುಮಾರು 7 ಓವರ್‌ ನಿಭಾಯಿಸಿದ ಅವರಿಬ್ಬರು ಮೂರನೇ ವಿಕೆಟಿಗೆ 73 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಬೇರ್ಪಟ್ಟರು. 41 ರನ್‌ ಗಳಿಸಿದ ಪಡಿಕ್ಕಲ್‌ ಔಟಾದ ಸ್ವಲ್ಪ ಹೊತ್ತಿನಲ್ಲಿ ಸ್ಯಾಮ್ಸನ್‌ ಕೂಡ ನಿರ್ಗಮಿಸಿದರು. ಬಿರುಸಿನ ಆಟವಾಡಿದ ಸ್ಯಾಮ್ಸನ್‌ ಕೇವಲ 27 ಎಸೆತಗಳಲ್ಲಿ 55 ರನ್‌ ಸಿಡಿಸಿದರು. 3 ಬೌಂಡರಿ ಮತ್ತು 5 ಮನಮೋಹಕ ಸಿಕ್ಸರ್‌ ಬಾರಿಸಿ ರಂಜಿಸಿದರು. ಪಡಿಕ್ಕಲ್‌ 29 ಎಸೆತಗಳಿಂದ 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

ಎಚ್ಚರಿಕೆಯ ಆಟ: ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್‌ ರಾಯಲ್ಸ್‌ ಎಚ್ಚರಿಕೆಯ ಆಟವಾಡಿತು. ನೋಬಾಲ್‌ನಿಂದಾಗಿ ಮೊದಲ ಓವರಿನಲ್ಲಿಯೇ ಜೀವದಾನ ಪಡೆದ ಜೋಸ್‌ ಬಟ್ಲರ್‌ ಆಬಳಿಕ ಉತ್ತಮ ಪ್ರದರ್ಶನ ನೀಡಿದರು. ಬಟ್ಲರ್‌ ಬಿರುಸಿನ ಆಟ ಆಡಿದರೆ ಯಶಸ್ವಿ ಜೈಸ್ವಾಲ್‌ ಉತ್ತಮ ಬೆಂಬಲ ನೀಡಿದರು. ವಾಷಿಂಗ್ಟನ್‌ ಸುಂದರ್‌ ಎಸೆದ ಐದನೇ ಓವರಿನಲ್ಲಿ ಅವರಿಬ್ಬರು 18 ರನ್‌ ಸಿಡಿಸಿದ್ದರಿಂದ ತಂಡದ ಮೊತ್ತ 50ರ ಗಡಿ ದಾಟುವಂತಾಯಿತು. ಆದರೆ ಮುಂದಿನ ಓವರಿನಲ್ಲಿ ಶೆಫ‌ರ್ಡ್‌ ಅವರು ಯಶಸ್ವಿ ಜೈಸ್ವಾಲ್‌ ಅವರ ವಿಕೆಟನ್ನು ಹಾರಿಸಲು ಯಶಸ್ವಿಯಾದರು. ಕೊನೆ ಹಂತದಲ್ಲಿ ಶಿಮ್ರಾನ್‌ ಹೆಟ್‌ಮೈರ್‌ 13 ಎಸೆತಗಳಿಂದ ಮೂರು ಸಿಕ್ಸರ್‌ ಸಹಿತ 32 ರನ್‌ ಸಿಡಿಸಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತಾಯಿತು.

ಹೈದರಾಬಾದ್‌ ಪರ ವೆಸ್ಟ್‌ಇಂಡೀಸ್‌ ಮತ್ತು ಗಯಾನ ಅಮೆಜಾನ್‌ ವಾರಿಯರ್ಸ್‌ ತಂಡದ ಶಕ್ತಿಶಾಲಿ ಹೊಡೆತಗಾರ ರೊಮಾರಿಯೊ ಶೆಫ‌ರ್ಡ್‌ ಐಪಿಎಲ್‌ಗೆ ಪಾದಾರ್ಪಣೆಗೈದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್‌ರೇಟ್‌ 160 ಇದೆ. ಸ್ಫೋಟಕ ಆಟಕ್ಕೆ ಅವರು ಹೆಸರುವಾಸಿಯಾಗಿದ್ದಾರೆ. ಅಂತಿಮ ಓವರಿನಲ್ಲಿ ನಟರಾಜನ್‌ ಎರಡು ವಿಕೆಟ್‌ ಉರುಳಿಸಲು ಯಶಸ್ವಿಯಾಗಿದ್ದಾರೆ. ಉಮ್ರಾನ್‌ ಮಲಿಕ್‌ ಕೂಡ ಎರಡು ವಿಕೆಟ್‌ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ್‌ 20 ಓವರ್‌, 210/6 (ಸಂಜು ಸ್ಯಾಮ್ಸನ್‌ 55, ದೇವದತ್ತ ಪಡಿಕ್ಕಲ್‌ 41, ಉಮ್ರಾನ್‌ ಮಲಿಕ್‌ 39ಕ್ಕೆ 2). ಹೈದರಾಬಾದ್‌ 20 ಓವರ್‌, 149/7 (ಐಡೆನ್‌  57, ವಾಷಿಂಗ್ಟನ್‌ ಸುಂದರ್‌ 40, ಚಹಲ್‌ 22ಕ್ಕೆ 3)

ಟಾಪ್ ನ್ಯೂಸ್

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

KAR-BE

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

Test match: ಭಾರತ “ಎ’ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

6

Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.