ಯುದ್ಧಕ್ಕೆ ಅಂತ್ಯರಾಗ? ಶೀಘ್ರವೇ ಉಕ್ರೇನ್-ರಷ್ಯಾ ಅಧ್ಯಕ್ಷರ ಮುಖಾಮುಖಿ ಭೇಟಿ
Team Udayavani, Mar 30, 2022, 8:10 AM IST
ಕೀವ್/ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಕಳೆದ 34 ದಿನಗಳಿಂದ ನಡೆಸುತ್ತಿರುವ ಯುದ್ಧವು ಅಂತ್ಯಗೊಳ್ಳುವ ಸುಳಿವು ಸಿಕ್ಕಿದೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ಮಂಗಳವಾರ ಎರಡೂ ದೇಶಗಳ ನಿಯೋಗವು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದೆ.
ಅಷ್ಟೇ ಅಲ್ಲ, ಸದ್ಯದಲ್ಲೇ ಉಕ್ರನ್ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ಮುಖಾಮುಖಿ ಭೇಟಿಯಾಗಿ ಈ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳಲಿದ್ದಾರೆ ಎಂದು ಉಕ್ರೇನ್‌ನ ಸಂಧಾನ ಕಾರರೊಬ್ಬರು ತಿಳಿಸಿದ್ದಾರೆ. ಅವರ ಈ ಹೇಳಿ ಕೆಯು ಯುದ್ಧ ಮುಗಿಯುವ ಆಶಾಭಾವ ಮೂಡಿಸಿದೆ.
ರಷ್ಯಾ ನಿಯೋಗ ಕೂಡ ಮಾತುಕತೆಯು “ಅರ್ಥಪೂರ್ಣ’ವಾಗಿತ್ತು ಎಂದು ಹೇಳಿದೆ. ಈ ಹಿಂದೆಯೂ ಝೆಲೆ ನ್‌ಸ್ಕಿ ಅವರು ರಷ್ಯಾ ಅಧ್ಯಕ್ಷರೊಂದಿಗೆ ನೇರ ಮಾತು ಕತೆಗೆ ಸಿದ್ಧ ಎಂದು ಹೇಳಿಕೊಂಡಿದ್ದರು. ಆದರೆ, ರಷ್ಯಾ ಸತತವಾಗಿ ಈ ಆಹ್ವಾನವನ್ನು ತಳ್ಳಿಹಾಕಿತ್ತು.
ಯುದ್ಧ ಮುಗಿಯುವ ಮತ್ತೊಂದು ಸೂಚನೆ ಎಂಬಂತೆ, ಮಂಗಳವಾರ ಉಕ್ರೇನ್ ರಾಜಧಾನಿ ಕೀವ್ ಮತ್ತು ಉತ್ತರದ ನಗರ ಚೆರ್ನಿಹಿವ್‌ನಲ್ಲಿ ಕಾರ್ಯಾಚರಣೆಯನ್ನು ಕುಂಠಿತ ಗೊಳಿಸುವುದಾಗಿ ರಷ್ಯಾ ಘೋಷಿಸಿದೆ. ಎರಡೂ ದೇಶಗಳ ನಡುವೆ ಪರಸ್ಪರ ನಂಬಿಕೆ ಮೂಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿಯೂ ಹೇಳಿದೆ.
ದಾಳಿಯಲ್ಲಿ 7 ಸಾವು: ಎರಡು ಕಡೆ ರಷ್ಯಾ ಪಡೆ ಹಿಂದೆ ಸರಿದಿದ್ದರೂ ದಕ್ಷಿಣದ ಮೈಕೋಲಾಯಿವ್ ನಗರದ ಪ್ರಾದೇಶಿಕ ಸರಕಾರಿ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ. 22 ಮಂದಿ ಗಾಯಗೊಂಡಿದ್ದಾರೆ.
ಸೂಪರ್‌ಯಾಕ್ಟ್ ಜಪ್ತಿ: ಈ ಬೆಳವಣಿಗೆಯ ನಡುವೆಯೇ, ರಷ್ಯಾದ ಕೋಟ್ಯಧಿಪತಿ ಉದ್ಯಮಿಯ ಮಾಲಕತ್ವದ ಬೃಹತ್ ವಿಹಾರನೌಕೆಯೊಂದನ್ನು ಲಂಡನ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮೇಲೆ ಯುಕೆ ಸರಕಾರ ಈಗಾಗಲೇ ನಿರ್ಬಂಧ ವಿಧಿಸಿದ್ದು, ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನೌಕೆ 38 ದಶಲಕ್ಷ ಪೌಂಡ್ ಮೌಲ್ಯದ್ದು. ಇನ್ನೊಂದೆಡೆ, ಬೇಹುಗಾರಿಕೆಯಲ್ಲಿ ತೊಡ ಗಿದ ಆರೋಪದ ಮೇರೆಗೆ ರಷ್ಯಾದ 21 ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ಬಿಟ್ಟು ಹೋಗುವಂತೆ ಬೆಲ್ಜಿಯಂ ಮಂಗಳವಾರ ಆದೇಶಿಸಿದೆ.
ಅತ್ಯಾಚಾರ ಆರೋಪ: ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರ ಮೇಲೆ ಅತ್ಯಾ ಚಾರ ವೆಸಗುತ್ತಿರುವ ದೂರು ಗಳು ಕೇಳಿಬಂದಿವೆ. ಮಂಗಳವಾರ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದು, “ಮಾ.9ರಂದು ಮನೆಗೆ ನುಗ್ಗಿದ ಇಬ್ಬರು ಸೈನಿಕರು, ನಾವು ಸಾಕಿದ್ದ ನಾಯಿಯನ್ನು ಕೊಂದರು. ನಂತರ ನನ್ನ ಪತಿಯನ್ನು ಕೊಂದರು. ಆಮೇಲೆ ನನ್ನ ತಲೆಗೆ ಬಂದೂಕು ಇಟ್ಟು, ಬಟ್ಟೆ ಬಿಚ್ಚುವಂತೆ ಹೇಳಿ ಅತ್ಯಾಚಾರವೆಸಗಿದರು. ನನ್ನ 4 ವರ್ಷದ ಮಗ ಇನ್ನೊಂದು ರೂಮಿನಲ್ಲಿ ಅಳುತ್ತಾ ಕುಳಿತಿದ್ದ’ ಎಂದು ಆರೋಪಿಸಿದ್ದಾರೆ.
ಏನೂ ತಿನ್ನದಿರಿ,ನೀರೂ ಮುಟ್ಟದಿರಿ!
ರಷ್ಯಾದ ಕೋಟ್ಯಧಿಪತಿ ಉದ್ಯಮಿ ರೋಮನ್ ಅಬ್ರಮೋವಿಚ್ ಮತ್ತು ಉಕ್ರೇನ್‌ನ ಇಬ್ಬರು ಹಿರಿಯ ಸಂಧಾನಕಾರರಿಗೆ ಈ ತಿಂಗಳ ಆರಂಭದಲ್ಲಿ ರಷ್ಯಾ ವಿಷ ಹಾಕಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರದ ಸಂಧಾನ ಸಭೆಯ ವೇಳೆ, “ನೀರು ಕುಡಿಯಬಾರದು, ಏನನ್ನೂ ತಿನ್ನಬಾರದು, ಯಾವುದೇ ಮೇಲ್ಮೈ ಯನ್ನೂ ಮುಟ್ಟಬಾರದು’ ಎಂದು ಸಂಧಾನಕಾರರಿಗೆ ಉಕ್ರೇನ್ ಸೂಚಿಸಿದೆ. ಈ ಹಿಂದೆ ಉಕ್ರೇನ್‌ನ ಕೋರಿಕೆಗೆ ಮಣಿದು ಉದ್ಯಮಿ ಅಬ್ರಮೋವಿಚ್ ಅವರು ಸಂಧಾನಕಾರರಾಗಲು ಒಪ್ಪಿದ್ದರು. ಇದು ರಷ್ಯಾದ ಕೋಪಕ್ಕೆ ಕಾರಣವಾಗಿತ್ತು. ಕೀವ್‌ನಲ್ಲಿ ಸಂಧಾನ ಮಾತುಕತೆಗೆಂದು ಹೋಗಿದ್ದಾಗ ಈ ಮೂವರಿಗೂ ರಷ್ಯಾ ವಿಷ ಹಾಕಿತ್ತು ಎಂದು ಹೇಳಲಾಗಿದೆ. ಪರಿಣಾಮ, ಮೂವರಿಗೂ ಕಣ್ಣುರಿ, ಮುಖ, ಕೈಗಳ ಚರ್ಮಕ್ಕೆ ಹಾನಿ ಮತ್ತಿತರ ಸಮಸ್ಯೆ ತಲೆದೋರಿತ್ತು.
ಭಾರತಕ್ಕೆ ರಷ್ಯಾದಿಂದ 45,000 ಟನ್ ಅಡುಗೆ ಎಣ್ಣೆ
ರಷ್ಯಾ ತನ್ನ ವಿರುದ್ಧ ಯುದ್ಧ ಆರಂಭಿಸಿದ ಅನಂತರ ಉಕ್ರೇನ್ ಸೂರ್ಯಕಾಂತಿ ಎಣ್ಣೆ ರಫ¤ನ್ನು ನಿಲ್ಲಿಸಿದೆ. ಇದರ ಪರಿಣಾಮ ಭಾರತದ ಮೇಲಾಗಿ, ಸ್ಥಳೀಯ ಅಡುಗೆ ಎಣ್ಣೆಯ ಬೆಲೆ ತೀವ್ರವಾಗಿ ಏರಿದೆ. ಇದೇ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಎಪ್ರಿಲ್‌ನಲ್ಲಿ ದುಬಾರಿ ಬೆಲೆಗೆ 45,000 ಟನ್ ಸೂರ್ಯಕಾಂತಿ ಎಣ್ಣೆ ಭಾರತಕ್ಕೆ ಬರಲಿದೆ. ಹೀಗೆಂದು ದೇಶದ 5 ಉದ್ಯಮಗಳ ಮೂಲಗಳು ಮಾಹಿತಿ ನೀಡಿವೆ. ಸದ್ಯ ಇಂಡೋನೇಷ್ಯಾ ತನ್ನದೇ ಕಾರಣಗಳಿಗಾಗಿ ತಾಳೆ ಎಣ್ಣೆಯ ರಫ¤ನ್ನು ಕಡಿಮೆ ಮಾಡಿದೆ. ಮತ್ತೂಂದು ಕಡೆ ದ.ಅಮೆರಿಕದಲ್ಲಿ ಸೋಯಾಬೀನ್ ಬೆಳೆಯೂ ಕಡಿಮೆಯಾಗಿದೆ. ಒಟ್ಟಾರೆ ಈ ಎಲ್ಲದರ ಪರಿಣಾಮ ಜಗತ್ತಿನಲ್ಲೇ ಗರಿಷ್ಠ ಎಣ್ಣೆ ಆಮದುದಾರ ದೇಶವಾದ ಭಾರತದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.