ಕಂಬಳಕ್ಕೆ ಒತ್ತು ಕೊಡಿ; ಮೇಲ್ಮನೆಯಲ್ಲಿ ಕರಾವಳಿ ಶಾಸಕರ ಆಗ್ರಹ

Team Udayavani, Mar 30, 2022, 7:05 AM IST

ಕಂಬಳಕ್ಕೆ ಒತ್ತು ಕೊಡಿ; ಮೇಲ್ಮನೆಯಲ್ಲಿ ಕರಾವಳಿ ಶಾಸಕರ ಆಗ್ರಹ

ಬೆಂಗಳೂರು: ಮೇಲ್ಮನೆಯಲ್ಲಿ ಮಂಗಳವಾರ ಇಡೀ ಸದನ ಕರಾವಳಿ ಸಂಸ್ಕೃತಿಯ ಪ್ರತೀಕ “ಕಂಬಳ’ ಪರ ಧ್ವನಿಯಾಯಿತು. ಈ ಅಪ್ಪಟ ಗ್ರಾಮೀಣ ಕ್ರೀಡೆ ಮತ್ತು ಓಟಗಾರರ ನೆರವಿಗೆ ಧಾವಿಸುವಂತೆ ಸಭಾಪತಿಗಳಾದಿಯಾಗಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಸರಕಾರವನ್ನು ಒತ್ತಾಯಿಸಿದರು.

ಆರಂಭದಲ್ಲಿ ನಿಯಮ 330ರ ಅಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ವಿಷಯ ಪ್ರಸ್ತಾವಿಸಿ, ಕಂಬಳಕ್ಕೆ ತನ್ನದೇ ಆದ ಇತಿಹಾಸವಿದೆ. ಕರಾವಳಿಯಲ್ಲಿ ಕೋಣಗಳು ಕೃಷಿ ಬದುಕಿನ ಅವಿಭಾಜ್ಯ ಅಂಗ. ಕಂಬಳದ ಕೋಣಗಳನ್ನು ಸಾಕುವುದು ಪ್ರತಿಷ್ಠೆ ಎಂದರು.

ಜಾತಿ, ಧರ್ಮ ಮರೆತು ನಡೆಯುವ ಕ್ರೀಡೆ ಎನ್ನುವುದೇ ಕಂಬಳದ ವಿಶೇಷ. ಇಂದು ವಾರ್ಷಿಕ 200 ಸಾಂಪ್ರದಾಯಿಕ ಮತ್ತು 20 ಆಧುನಿಕ ಕಂಬಳಗಳು ನಡೆಯುತ್ತಿವೆ. ಇವುಗಳ ವೀಕ್ಷಣೆಗೆ 75 ಸಾವಿರದಿಂದ ಒಂದು ಲಕ್ಷ ಜನ ಸೇರುತ್ತಾರೆ. ಆಧುನಿಕ ಕಂಬಳದಲ್ಲಿ ಭಾಗವಹಿಸುವ ಒಂದು ಜೋಡಿ ಕೋಣಗಳ ಸಾಕಾಣಿಕೆ ವೆಚ್ಚ ವಾರ್ಷಿಕ 10-12 ಲಕ್ಷ ರೂ. ಆಗುತ್ತದೆ. ಕಂಬಳ ಓಟ ಗಾರರು ಉಸೇನ್‌ ಬೋಲ್ಟ್ ದಾಖಲೆಯನ್ನು ಸರಿಗಟ್ಟಿದ ಉದಾಹರಣೆಗಳೂ ಇವೆ. ಸರಕಾರ ನೆರವಿಗೆ ಧಾವಿಸಬೇಕಿದೆ ಎಂದು ಆಗ್ರಹಿಸಿದರು.

ಕಂಬಳ ಆಯೋಜನೆಗೆ ಸರಕಾರದಿಂದ ಸಹಾಯ ಧನ ನೀಡಬೇಕು. ಕಂಬಳದ ಓಟಗಾರ ರಿಗೆ ತರಬೇತಿ, ಕೌಶಲಾಭಿವೃದ್ಧಿಗೆ ವಾರ್ಷಿಕ ಕನಿಷ್ಠ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡ ಬೇಕು. ಕರಾವಳಿಯ ಎರಡು ಜಿಲ್ಲೆಗಳಿಗೆ ಕಂಬಳ ಆಯೋಜಕರನ್ನು ಒಳಗೊಂಡ ಕಂಬಳ ಸಮಿತಿ ರಚಿಸಬೇಕು. ಮೂಡುಬಿದರೆಯಲ್ಲಿ ಕಂಬಳ ಮ್ಯೂಸಿಯಂ ಸ್ಥಾಪನೆಗೆ 2 ಕೋ.ರೂ. ಮೀಸಲಿಡಬೇಕು. ಓಟಗಾರರಿಗೆ ವಿಮೆ, ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ವೀಕ್ಷಕ ರಿಗೆ ಮೂಲಸೌಕರ್ಯ ಹಾಗೂ ಕಂಬಳ ತಾಣಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಮಂಗಳೂರು: ಬೆಂಕಿಗಾಹುತಿಯಾದ ಕಾರು: ಮಹಿಳೆ, ನಾಯಿ ಪಾರು

ಕಂಬಳಕ್ಕೆ ಪ್ರೋತ್ಸಾಹ ಸರಕಾರದ ಕರ್ತವ್ಯ
ಕಂಬಳ ಮಾತ್ರ ಅಲ್ಲ; ಕರಾವಳಿ ಎಂದರೆ ಯಕ್ಷಗಾನ, ಕೋಳಿ ಅಂಕ, ಪಾಡªನ ಸೇರಿದಂತೆ ಹಲವು ಸಂಸ್ಕೃತಿಗಳ ಸಮ್ಮಿಲನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸುವುದು ಸರಕಾರದ ಕರ್ತವ್ಯ ಎಂದು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ದನಿಗೂಡಿಸಿದರು.

ಕಂಬಳವನ್ನು ದಸರಾ ಕ್ರೀಡಾಕೂಟದಲ್ಲಿ ಸೇರಿಸಬೇಕು. ಮಂಡ್ಯ, ಮೈಸೂರು ಸುತ್ತ ಭತ್ತದ ಗದ್ದೆಗಳಿವೆ. ಸರಕಾರ ಮನಸ್ಸು ಮಾಡಿದರೆ ಅಲ್ಪಾವಧಿಯಲ್ಲೇ ಕಂಬಳಕ್ಕೆ ಅಗತ್ಯವಿರುವ ಕೆಸರು ಗದ್ದೆ ಗಳನ್ನು ತಯಾರು ಮಾಡಬಹುದು ಎಂದು ಉಪನಾಯಕ ಡಾ| ಕೆ. ಗೋವಿಂದರಾಜು ಅಭಿಪ್ರಾಯ ಪಟ್ಟರು. ಸರಕಾರವು ಪ್ರತೀ ಕಂಬಳಕ್ಕೆ 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಆಗ್ರಹಿಸಿದರು.

ಕಂಬಳಕ್ಕೆ ಪ್ರೋತ್ಸಾಹ ನೀಡುವುದು ಸರಕಾರದ ಕರ್ತವ್ಯ ಎಂದು ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್‌ ಹೇಳಿದರು. ಕಂಬಳದ ಆಯೋಜನೆ ದುಬಾರಿಯಾಗಿದೆ. ಇದಕ್ಕೆ ಸರಕಾರ ಸಹಾಯ ಮಾಡಬೇಕು ಎಂದು ಜೆಡಿಎಸ್‌ನ ಭೋಜೇಗೌಡ ಒತ್ತಾಯಿಸಿ ದರು. ಕಂಬಳದ ಕೋಣಗಳನ್ನು, ಅಂಕದ ಕೋಳಿಗಳನ್ನು ಸಾಕುವುದು ಕರಾವಳಿ ಭಾಗದ ಕುಟುಂಬಗಳಿಗೆ ಪ್ರತಿಷ್ಠೆಯಾಗಿದೆ. ಈ ಕ್ರೀಡೆಗಳು ಉಳಿಯಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆಶಿಸಿದರು.

ಅಧಿವೇಶನ ಮುಗಿದೊಡನೆ ಸಭೆ
ಕಂಬಳವನ್ನು ಪ್ರೋತ್ಸಾಹಿಸಲು ಸಭಾಪತಿ ಯವರ ನೇತೃತ್ವದಲ್ಲಿ ಸಂಬಂಧಪಟ್ಟ ಮೇಲ್ಮನೆ ಸದಸ್ಯರು ಮತ್ತು ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ| ಕೆ.ಸಿ. ನಾರಾಯಣಗೌಡ ತಿಳಿಸಿದರು.

ನಿಯಮ 330ರಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಸ್ತಾವಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಕಂಬಳಕ್ಕೆ ಹೆಚ್ಚು ಶಕ್ತಿ ತುಂಬಲು ಸರಕಾರ ಬದ್ಧವಾಗಿದೆ ಎಂದರು. ಕಂಬಳಕ್ಕೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದೆ.

“ಕರ್ನಾಟಕ ಕ್ರೀಡಾ ರತ್ನ’, “ಕ್ರೀಡಾ ಪೋಷಕ’ ಪ್ರಶಸ್ತಿಗಳನ್ನು ಕಂಬಳದ ಬೆಳವಣಿಗೆಗೆ ಗಣನೀಯ ಕೊಡುಗೆ ಕೊಟ್ಟಿರುವವರಿಗೆ ನೀಡಿ ಗೌರವಿಸ ಲಾಗುತ್ತಿದೆ. ಮೂಡುಬಿದಿರೆಯಲ್ಲಿ “ಕೋಟಿ-ಚೆನ್ನಯ’ ಜೋಡುಕರೆ ನಿರ್ಮಾಣ ಮಾಡಲಾಗಿದ್ದು, ವೀಕ್ಷಕರ ಗ್ಯಾಲರಿಯ ಸಹಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ 5 ಎಕರೆಯಲ್ಲಿ “ಲವ-ಕುಶ’ ಕಂಬಳ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಟಾಪ್ ನ್ಯೂಸ್

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.