![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 30, 2022, 1:54 PM IST
ಬೆಂಗಳೂರು: ಕಳೆದ ಎರಡು ದಿನಗಳಿಂದ ಕೆಲ ಸಂಘಟನೆಗಳು ಬೇರೆ ಸಮುದಾಯಗಳ ಜೊತೆ ವ್ಯಾಪಾರಕ್ಕೆ ಒಪ್ಪುತ್ತಿಲ್ಲ, ಸಣ್ಣ ಪುಟ್ಟ ವ್ಯಾಪಾರಕ್ಕೆ ತೊಂದರೆ ಯಾಕೆ? ಪ್ರಧಾನಿ ಮೋದಿ ಮುಸ್ಲಿಂ ದೇಶಗಳ ಜತೆ ಮಾಡುತ್ತಿರುವ ವ್ಯಾಪಾರ ನಿಲ್ಲಿಸಲಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬುಧವಾರ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಈಗ ಹಲಾಲ್ ಕಟ್,ಜಟಕಾ ಕಟ್ ನಡೆಯುತ್ತಿದೆ. ಬಿಜೆಪಿ ನಾಯಕ ಆರ್ಥಿಕ ಜಿಹಾದ್ ಮಾಡುತ್ತಿದ್ದಾರೆ ಅಂತ ಹೇಳುತ್ತಾರೆ.ಬೊಮ್ಮಾಯಿ, ಮೋದಿಯವರು ಬಜೆಟ್ ನಲ್ಲಿ ಚೆಂದ ಹೆಸರು ಕೊಟ್ಟಿದ್ದಾರೆ. ಸರ್ವಸ್ಪರ್ಶಿ, ಸರ್ವವ್ಯಾಪಿ ಅಂತ. ಅವರು ಭ್ರಷ್ಟಾಚಾರ ದಲ್ಲಿ ಸರ್ವವ್ಯಾಪಿ ಆಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಜಿಹಾದ್ ನಡೆಯುತ್ತಿದೆ. ಶಿಕ್ಷಣ, ದಲಿತರು, ಮಹಿಳೆಯರು, ಹಿಂದುಳಿದವರ ಬಲವರ್ಧನೆ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ವ್ಯಾಪಾರಸ್ಥರು ಭಾರತ ದೇಶದವರಲ್ವಾ? ಇದು 40% ಸರ್ಕಾರ. ಪ್ರಧಾನಿಗೆ ಹಿರೋಯಿನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡೋದಕ್ಕೆ ಸಮಯ ಇದೆ. ಗುತ್ತಿಗೆದಾರ ಕೊಟ್ಟ ದೂರಿಗೆ ಪ್ರತಿಕ್ರಿಯಿಸುವುದಕ್ಕೆ ಸಮಯ ಇಲ್ಲವೇ ಎಂದು ಪ್ರಶ್ನಿಸಿದರು.
ಇದೇನಾ ಉದ್ಯೋಗ ನೀಡಿದ್ದು
ಬಿಜೆಪಿ ಮುಂಖಡರೇ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ. ದೊಡ್ಡ ದೊಡ್ಡವರನ್ನ ಬೇಟೆ ಯಾಡಿ. ಮೋದಿಯವರ ಬಳಿ ಹೋಗಿ ಮಾತಾಡಿ. ನಿಮಗೆ ಲಾಭ ಇದ್ದಾಗ ಮಾತ್ರ ಹಿಂದುಳಿದವರ ಬಗ್ಗೆ ಕಾಳಜಿವಹಿಸಿತ್ತೀರಾ ? ಸರ್ಕಾರ ಉದ್ಯೋಗ ನೀಡಲು ಆಗುತ್ತಿಲ್ಲ.ಹಲಾಲ್ ಕಟ್,ಜಟಕಾ ಕಟ್ ಅಂತ ಕಾಯಲು ಹೇಳುತ್ತಿದ್ದಾರೆ. ಇದೇನಾ ಉದ್ಯೋಗ ನೀಡಿದ್ದು, ಬೇಡದ ವಿಚಾರಗಳನ್ನು ಎತ್ತುವುದು ಮಾತ್ರ ಬಿಜೆಪಿ ಕೆಲಸ ಎಂದರು.
ಯಾವ ಬಂಡವಾಳವೂ ಬರುವುದಿಲ್ಲ
ಭಾರತವನ್ನು ಪಾಕಿಸ್ತಾನ ಮಾಡುತ್ತಿದ್ದೀರಾ? ಕರ್ನಾಟಕವನ್ನು ಯುಪಿ ಮಾಡುತ್ತಿದ್ದೀರಾ? ಅಮಿತ್ ಶಾ ಮಗ ದುಬೈನಲ್ಲಿ ಐಪಿಎಲ್ ಮಾಡುತ್ತಾರೆ. ಅದಕ್ಕೆಅವಕಾಶ ಇದೆ, ಬಡ ವ್ಯಾಪಾರಿಗಳಿಗೆ ಅವಕಾಶವಿಲ್ಲ ಅನ್ನುತ್ತೀರಿ. ಚುನಾವಣೆ ಬಂದಾಗ ಮಾತ್ರ ಇಂತಹ ವಿಚಾರ ಎತ್ತುತ್ತೀರಿ. ಭಾವನಾತ್ಮಕ ವಿಚಾರಗಳೆ ಬಿಜೆಪಿಗೆ ಬಂಡವಾಳ. ಸಿಎಂ ಮೇಲೆ ನನಗೆ ಗೌರವ ಇತ್ತು. ಲಿಬರಲ್ ಇದ್ದಾರೆ ಅಂತ ಗೌರವ ಇತ್ತು. ಆದರೆ ಅವರ ನಡೆ ನುಡಿಗೆ ವ್ಯತ್ಯಾಸ ಇದೆ. ಇವತ್ತಿನ ಬೆಳವಣಿಗೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಬಂಡವಾಳ ಹೂಡಿಕೆ ಸಮಾವೇಶ ಮಾಡುತ್ತಿದ್ದೀರಿ. ಇಂತಹ ಕಲುಷಿತ ವಾತಾವರಣ ಇದ್ದರೆ ಯಾವ ಬಂಡವಾಳವೂ ಬರುವುದಿಲ್ಲ ಎಂದು ಕಿಡಿ ಕಾರಿದರು.
ಸಂವಿಧಾನದ ವಿರುದ್ಧ ಜಿಹಾದ್
ನಾವು ಸಮೃದ್ಧಿ ಅಂತ ಯೋಜನೆ ಮಾಡಿದ್ದೇವು. ಸಣ್ಣ ಯೋಜನೆ ನಿಲ್ಲಿಸು ಅಂತ ಕಾರಜೋಳ ಹೇಳಿದರು. ಇದು ಎಸ್ಸಿ ಎಸ್ಟಿ ಕಾರ್ಯಕ್ರಮ ಇವತ್ತು ಯೋಜನೆ ನಿಲ್ಲಿಸುತ್ತಿದ್ದಾರೆ 225 ಕೋಟಿ ಆ ಯೋಜನೆಗೆ ಇತ್ತು, ಭೋವಿ ನಿಗಮ, ಜಾಂಭವ ನಿಗಮದ ಯೋಜನೆ ನಿಲ್ಲಿಸುತ್ತಿದ್ದಾರೆ. ಹತ್ತು ಲಕ್ಷದ ಯೋಜನೆ ಕಟ್ ಮಾಡಿ,ಈಗ ಐವತ್ತು ಸಾವಿರ ನಿಡುತ್ತಿದ್ದಾರೆ. ಐರಾವತ ಯೋಜನೆ ಅಂತ ಟ್ಯಾಕ್ಸಿ ಗೆ ಅನುದಾನ ಕೊಡುತ್ತಾ ಇದ್ದೆವು. 2018 ರಿಂದ ಐರಾವತಗೆ ಹಣ ನೀಡಿಲ್ಲ. ಬಡ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿಲ್ಲ. ಇದಕ್ಕೆಲ್ಲ ನಾವು ಜಿಹಾದ್ ಅಂತ ಹೇಳಬಹುದಾ? ಸರ್ಕಾರ ಮುಸ್ಲಿಂ ಅಷ್ಟೇ ಅಲ್ಲ, ಎಲ್ಲ ಸಮುದಾಯಗಳ ಮೇಲೆ ಜಿಹಾದ್ ಮಾಡುತ್ತಿದೆ. ಗಂಗಾಕಲ್ಯಾಣ ಯೋಜನೆ ಅವ್ಯವಹಾರ ಆಗಿದೆ. ಒಂದೇ ಬೋರ್ ಗೆ ಎರಡು ತರಹ ಅನುದಾನ ನೀಡುತ್ತಿದ್ದಾರೆ. ಫೇಕ್ ಎಸ್ ಟಿ ಸರ್ಟಿಫಿಕೇಟ್ ಕೂಡ ರೇಣುಕಾಚಾರ್ಯ ಪಡೆದಿದ್ದಾರೆ. ಇದು ಸಂವಿಧಾನದ ವಿರುದ್ಧ ಜಿಹಾದ್ ಅಲ್ಲವೇ ಎಂದು ತೀವ್ರ ವಾಗ್ದಾಳಿ ನಡೆಸಿದರು.
You seem to have an Ad Blocker on.
To continue reading, please turn it off or whitelist Udayavani.