ಮಳೆಗೆ ಅರಳಿದ ಕಾಫಿ ಹೂ: ಬೆಳೆಗಾರರ ಮೊಗದಲ್ಲಿ ಸಂತಸ
Team Udayavani, Mar 30, 2022, 3:57 PM IST
ಆಲ್ದೂರು: ಈ ಬಾರಿ ಮಲೆನಾಡಿನ ಕಾಫಿ ತೋಟಗಳಲ್ಲಿ ಕಾಫಿ ಹೂ ಉತ್ತಮವಾಗಿ ಅರಳಿದ್ದು ಕಾಫಿ ಬೆಳೆಗಾರನ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಹಲವು ವರ್ಷಗಳ ನಂತರ ಈ ಬಾರಿ ಮಾರ್ಚ್ ತಿಂಗಳಲ್ಲಿ ಉತ್ತರಭಾದ್ರೆ ಮಳೆ ಉತ್ತಮವಾಗಿ ಆಗಿದ್ದು ಕಾಫಿ ಹೂ ಅರಳಲು ಅನುಕೂಲವಾಗಿದೆ.
ಆಲ್ದೂರು ಸುತ್ತಮುತ್ತಲಿನ ಬಹುತೇಕ ಕಾಫಿ ತೋಟಗಳಲ್ಲಿ ಕಾಫಿ ಹೂ ಅರಳಿದ್ದು ಎಲ್ಲೆಡೆ ಮಲ್ಲಿಗೆ ಹೂ ಚೆಲ್ಲಿದಂತೆ ಭಾಸವಾಗುತ್ತಿದ್ದು ಕಾಫಿ ತೋಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸುತ್ತಿದೆ. ಸಾಮಾನ್ಯವಾಗಿ ರೋಬಸ್ಟಾ ಕಾಫಿ ಬೆಳೆಗಾರರು ಕಾಫಿ ತೋಟಗಳಿಗೆ ನೀರು ಹಾಯಿಸಿದ್ದು ಈಗಾಗಲೇ ಕಾಫಿ ಹೂ ಅರಳಿವೆ. ಕಳೆದ 10 ದಿನಗಳ ಹಿಂದೆ ಸುರಿದ ಉತ್ತರಭಾದ್ರ ಮಳೆಗೆ ಅರೇಬಿಕಾ ಕಾಫಿ ತೋಟಗಳಲ್ಲಿ ಹೂ ಅರಳಿದ್ದು ನೋಡುಗರ ಮನಸೂರೆಗೊಳ್ಳುತ್ತಿವೆ.
ಕಾಫಿ ಹೂ ಉತ್ತಮವಾಗಿ ಆಗಿದ್ದು ಈ ಬಾರಿ ಕಾಫಿ ಧಾರಣೆಯು ಹೆಚ್ಚಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಕಾಫಿ ತೋಟಗಳಲ್ಲಿ ಹೂ ಅರಳಲು ಮಳೆ ಎಷ್ಟು ಮುಖ್ಯವೋ, ಹೂ ಅರಳಿದ ನಂತರ ಮಳೆ ಬಾರದಿರುವುದು ಅಷ್ಟೇ ಪ್ರಮುಖವಾಗಿರುತ್ತದೆ.
ಕಾಫಿ ತೋಟಗಳಲ್ಲಿ ಹೂ ಅರಳಿದ್ದು ಕಳೆದ ಎರಡು ದಿನಗಳು ಮಳೆ ಬಿಡುವು ನೀಡಿದ್ದು ಅನುಕೂಲವಾಗಿದೆ. ಈ ಬಾರಿ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಕಾಫಿ ಬೆಳೆಗಾರ ಡಿ.ಪಿ. ನಾಗೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡೂರಲ್ಲಿ 40 ವರ್ಷದವರಿಗೂ ವೃದ್ದಾಪ್ಯ ವೇತನ! ಯೋಜನೆಯಲ್ಲಿ ಗೋಲ್‌ಮಾಲ್?
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.