ಗ್ರಾಮೀಣ ಬ್ಯಾಂಕ್ ನೌಕರರ ಪ್ರತಿಭಟನೆ
Team Udayavani, Mar 30, 2022, 5:33 PM IST
ವಿಜಯಪುರ: ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ರಚನೆ ಆಗಲೇಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟಿಸಿದರು.
ಪ್ರತಿಭಟನಾ ಮೆರವಣಿಗೆ ಜಿಲ್ಲಾ ಪಂಚಾಯಿತಿ ಆವರಣದಿಂದ ತಹಶೀಲ್ದಾರ್ ಕಚೇರಿಗೆ ಹಾಗೂ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕ ಬಿ.ಶೇಖರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, 2010ರ ನಂತರ ಸೇವೆಗೆ ಸೇರಿದ ಸಿಬ್ಬಂದಿಗೂ ಹಿಂದಿನ ಸುತ್ತೋಲೆ ಪ್ರಕಾರ ನಿವೃತ್ತಿ ವೇತನ ಜಾರಿಯಾಗಬೇಕು. 11ನೇ ವೇತನ ಪರಿಷ್ಕರಣೆ ಸಂಪೂರ್ಣ ಜಾರಿಗೆ ಬರಬೇಕು. ಬಡ್ತಿ ಮತ್ತು ಸೇವಾ ನಿಯಮಗಳು ತಿದ್ದುಪಡಿ ಆಗಲೇಬೇಕು ಎಂದು ಆಗ್ರಹಿಸಿದರು.
ಕಂಪ್ಯೂಟರ್ ಇನ್‌ಕ್ರಿಮೆಂಟ್ ಜಾರಿಗೆ ಬರಬೇಕು, ಅನುಕಂಪದ ನೇಮಕಾತಿ ಹಿಂದಿನಿಂದಲೂ ಜಾರಿಗೆ ಬರಬೇಕು, ಹೊರಗುತ್ತಿಗೆ ಪದ್ಧತಿ ರದ್ದಾಗಲಿ, ದಿನಗೂಲಿ ನೌಕರರನ್ನು ಕಾಯಂ ಮಾಡಬೇಕು. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ, ಕೇಂದ್ರ ಸರ್ಕಾರದ ಹಣಕಾಸು ನೀತಿ, ಪ್ರವರ್ತಕ ಬ್ಯಾಂಕ್ ತಾರತಮ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎಂಪ್ಲಾಯ್ ಅಸೋಸಿಯೇಶನ್ ಉಪಾಧ್ಯಕ್ಷ ರಾಜು ಭಜಂತ್ರಿ, ಜಂಟಿ ಕಾರ್ಯದರ್ಶಿ ವಿಶ್ವನಾಥರಡ್ಡಿ, ಜಿಲ್ಲಾ ಅಧಿಕಾರಿಗಳ ಸಂಘದ ಅಧ್ಯಕ್ಷ ಈಶ್ವರ ಬಾಲರಡ್ಡಿ, ಕಾರ್ಯದರ್ಶಿ ವಿಜಯ ನಾಯ್ದೊಡಿ, ಶಿವಕುಮಾರ ಉಮದಿ, ಅಮರನಾಥ, ಜಿಲ್ಲಾಧ್ಯಕ್ಷ ಎ.ಎಂ.ಮುಲ್ಲಾ, ಲಕ್ಷ್ಮಣ ಅಂಬಿಗೇರ, ಕೆ.ಎ.ಹುಂಡೇಕಾರ, ರಘುವೀರ ನೀಲೂರ, ಲಕ್ಷ್ಮೀಕಾಂತ ಅಂಬಲಿ ಹಾಗೂ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.