ಗಾಂಧೀಜಿ ಹೋರಾಟಕ್ಕೆ ರಂಗಭೂಮಿಯೇ ಚೈತನ್ಯ ಶಕ್ತಿ
ಶಿಕ್ಷಕ ಕಲಾವಿದ ವಿರೂಪಾಕ್ಷ ಪಡಿಗೋದಿ ಬೀದಿ ನಾಟಕ ಪರಂಪರೆ ಕುರಿತು ವಿಚಾರಗಳನ್ನು ಹಂಚಿಕೊಂಡರು.
Team Udayavani, Mar 30, 2022, 6:07 PM IST
ಹಾವೇರಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಗಾಂಧೀಜಿ ಜೀವನ ಮತ್ತು ಹೋರಾಟಕ್ಕೆ ಆದರ್ಶ ತುಂಬಿದ್ದೇ ರಂಗಭೂಮಿ. ಇಂದಿಗೂ ಅನೇಕ ಸ್ವಾತಂತ್ರ್ಯ ಸೇನಾನಿಗಳು ಜನಮಾನಸದಲ್ಲಿ ಜೀವಂತವಾಗಿ ಉಳಿದಿದ್ದರೆ ಅದು ರಂಗಭೂಮಿಯಿಂದಲೇ ಎಂದು ಮೈಲಾರ ಮಹಾದೇವ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಶಶಿಕಲಾ ಹುಡೇದ ಹೇಳಿದರು.
ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಜಿಲ್ಲಾ ಕಲಾ ಬಳಗ, ಗೆಳೆಯರ ಬಳಗ ಹಾಗೂ ಗುದೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಂಗಭೂಮಿಗೆ ಬೇರೆ ಬೇರೆ ಸ್ವರೂಪದಲ್ಲಿ ಸೇವೆ ಸಲ್ಲಿಸಿದ ಐವರು ಸಾಧಕರಾದ ರಮೇಶ ದೇಶಪಾಂಡೆ, ರೇಣುಕಾ ಗುಡಿಮನಿ, ಶೇಷಗಿರಿ ಕಲಾ ತಂಡದ ಶಿವಮೂರ್ತಿ ಹುಣಸಿಹಳ್ಳಿ, ಮಿಮಿಕ್ರಿ ಕಲಾವಿದ ವಸಂತ ಕಡತಿ ಹಾಗೂ ಬ್ಯಾಡಗಿಯ ಕಲಾವಿದ ಜಮೀರ ರಿತ್ತಿ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಸ್ವಾತಂತ್ರ್ಯೋತ್ತರ ಕನ್ನಡ ರಂಗಭೂಮಿ ಕುರಿತ ವಿಚಾರ ಗೋಷ್ಠಿಯಲ್ಲಿ ನಾಟಕಗಳ ವಿಕಾಸ-ದೇಶಪ್ರೇಮ ನಾಟಕಗಳ ಕುರಿತು ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಶಿಕ್ಷಕ ಕಲಾವಿದ ವಿರೂಪಾಕ್ಷ ಪಡಿಗೋದಿ ಬೀದಿ ನಾಟಕ ಪರಂಪರೆ ಕುರಿತು ವಿಚಾರಗಳನ್ನು ಹಂಚಿಕೊಂಡರು.
ಜ್ಞಾನಗಂಗಾ ಶಿಕ್ಷಣ ಸಮಿತಿ ಕೋಶಾಧ್ಯಕ್ಷ ವಿ.ಎಂ.ಪತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೆಳೆಯರ ಬಳಗದ ಕಾರ್ಯದರ್ಶಿ ಡಾ. ಶ್ರವಣ ಪಂಡಿತ, ಜಿ.ಎಚ್.ಕಾಲೇಜಿನ ಡಾ.ಸಂಜೀವ ನಾಯಕ್, ರಂಗ ನಿರ್ದೇಶಕಿ ಗಂಗಾ ಕಾಳೇನವರ ಮಾತನಾಡಿದರು.
ಆರ್.ಸಿ. ನಂದೀಹಳ್ಳಿ, ರವೀಂದ್ರ ಮಂಜುನಾಥ ವಾಲ್ಮೀಕಿ, ಹನುಮಂತಸಿಂಗ್ ರಜಪೂತ, ಕಾಂತೇಶ, ದತ್ತಾತ್ರೇಯ ಜೋಶಿ ಮುಂತಾದವರು ರಂಗಗೀತೆಗಳನ್ನು ಹಾಡಿದರು. ಗದುಗಿನ ಶಂಕರಗೌಡ ಪಾಟೀಲ ಅವರು ನಾಡಿನ ರಂಗ ಸಾಧಕರ ಚಿತ್ರಗಳನ್ನು ಆವರಣದಲ್ಲಿ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು. ಎಸ್.ಆರ್.ಹಿರೇಮಠ ಸ್ವಾಗತಿಸಿ, ಟ್ರಸ್ಟ್ ಹಿರಿಯ ಸದಸ್ಯ ವಿ.ಎನ್. ತಿಪ್ಪನಗೌಡ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಜಿ.ಎಂ.ಓಂಕಾರಣ್ಣನವರ ಹಾಗೂ ನಾಗರಾಜ ನಡುವಿನಮಠ ನಿರೂಪಿಸಿ, ಚಂದ್ರಶೇಖರ ಮಾಳಗಿ ವಂದಿಸಿದರು. ಕೊನೆಯಲ್ಲಿ ಜಿ.ಎಚ್. ಕಾಲೇಜಿನ ವಿದ್ಯಾರ್ಥಿಗಳ ಕಲಾತಂಡ ಸಿಡಿಲ ಕಿಡಿ ಸುಭಾಸ್‌ಚಂದ್ರ ಭೋಸ್ ನಾಟಕ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.