ಪವರ್ ಪ್ಲೇಯಲ್ಲಿ ಬ್ಯಾಟಿಂಗ್ ಪವರ್ ಕಳೆದುಕೊಂಡ ಹೈದರಾಬಾದ್!
Team Udayavani, Mar 31, 2022, 5:30 AM IST
ಪವರ್ ಪ್ಲೇ ಎಂಬ ಹೆಸರು ಅನ್ವಯವಾಗುವುದೇ ಬ್ಯಾಟಿಂಗ್ ತಾಕತ್‌ಗೆ. ಏಕದಿನದಲ್ಲಿ ಮೊದಲ 15 ಓವರ್, ಟಿ20ಯಲ್ಲಿ ಮೊದಲ 6 ಓವರ್‌ಗಳಲ್ಲಿ ಕ್ಷೇತ್ರರಕ್ಷಣೆಯ ನಿರ್ಬಂಧ ಇರುವುದರಿಂದ ಬ್ಯಾಟರ್‌ಗಳು ಸಲೀಸಾಗಿ ಬೌಂಡರಿ, ಸಿಕ್ಸರ್ ಸುರಿಮಳೆಗೈಯಬಹುದು. ಆಗ ಬಹುತೇಕ ಫೀಲ್ಡರ್ ಸರ್ಕಲ್ ಒಳಗೆ ನಿಂತಿರುವುದೇ ಇದಕ್ಕೆ ಕಾರಣ.
ಈ ಫೀಲ್ಡಿಂಗ್ ನಿರ್ಬಂಧದ ಲಾಭ ಎತ್ತಿದ ಮೊದಲಿಗರೆಂದರೆ ಭಾರತದ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ನ್ಯೂಜಿಲ್ಯಾಂಡಿನ ಮಾರ್ಕ್ ಗ್ರೇಟ್‌ಬ್ಯಾಚ್. 1992ರ ಏಕದಿನ ವಿಶ್ವಕಪ್‌ನಲ್ಲಿ ಇವರಿಬ್ಬರು ಮೊದಲ 15 ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗಿಗೆ ಮುಂದಾಗಿದ್ದರು. ಇದನ್ನು ಇನ್ನಷ್ಟು ಸ್ಫೋಟಕಗೊಳಿಸಿ 15 ಓವರ್‌ಗಳಲ್ಲೇ 100 ರನ್ ಪೇರಿಸಿಲು ಸಾಧ್ಯ ಎಂದು ತೋರಿಸಿಕೊಟ್ಟವರು ಶ್ರೀಲಂಕಾದ ಡ್ಯಾಶಿಂಗ್ ಓಪನರ್ ಸನತ್ ಜಯಸೂರ್ಯ. ಅಂದು ಅರ್ಜುನ ರಣರುಂಗ ಸಾರಥ್ಯದ ಶ್ರೀಲಂಕಾ ವಿಶ್ವಕಪ್ ಗೆಲ್ಲಲು ಜಯಸೂರ್ಯ ಅವರ ಬ್ಯಾಟಿಂಗ್ ಅಬ್ಬರವೇ ಮುಖ್ಯ ಕಾರಣವಾಗಿತ್ತು. ಟಿ20 ಯುಗ ಆರಂಭಗೊಂಡ ಬಳಿಕವಂತೂ ಪ್ರತಿಯೊಂದು ಅವಧಿಯೂ “ಪವರ್ ಪ್ಲೇ’ ಆಗಿಯೇ ಗೋಚರಿಸಿದೆ. ಅಂದು ಏಕದಿನ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ದಾಖಲಾಗುತ್ತಿದ್ದ ಮೊತ್ತ ಇಂದು ಟಿ20 ಇನ್ನಿಂಗ್ಸ್‌ನಲ್ಲೇ ರಾಶಿ ಬೀಳುತ್ತದೆ!
ಹೈದರಾಬಾದ್ ಸಂಕಟ
ಇಂಥ ಹೊಡಿಬಡಿ ಜಮಾನಾದಲ್ಲಿ, ಟಿ20 ಪವರ್ ಪ್ಲೇ ಅವಧಿಯಲ್ಲಿ ತಂಡವೊಂದು ರನ್ನಿಗಾಗಿ ಪರದಾಡಿದರೆ ಅದು ದೊಡ್ಡ ಅಚ್ಚರಿಯಾಗಿ ಕಾಣುತ್ತದೆ. ರಾಜಸ್ಥಾನ್ ರಾಯಲ್ಸ್ ಎದುರಿನ ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡುವ ವೇಳೆ “ಆರೇಂಜ್ ಆರ್ಮಿ’ ಖ್ಯಾತಿಯ ಸನ್‌ರೈಸರ್ ಹೈದರಾಬಾದ್ ಕೂಡ ಇಂಥದೇ ಅವಸ್ಥೆಗೆ ಸಿಲುಕಿತು. ಅದು 3 ವಿಕೆಟಿಗೆ ಕೇವಲ 14 ರನ್ ಮಾಡಿತ್ತು! ನಾಯಕ ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ ಮತ್ತು ನಿಕೋಲಸ್ ಪೂರಣ್ 4.5 ಓವರ್‌ಗಳಲ್ಲಿ ಔಟಾಗಿ ಪೆವಿಲಿಯನ್ ಸೇರಿಯಾಗಿತ್ತು. ಈ 3 ವಿಕೆಟ್ ಬಿದ್ದಾಗ ಹೈದರಾಬಾದ್ ಗಳಿಕೆ ಕೇವಲ 9 ರನ್.
ಇದು ಐಪಿಎಲ್ ಇತಿಹಾಸದ ಪವರ್ ಪ್ಲೇ ಅವಧಿಯಲ್ಲಿ ದಾಖಲಾದ ಕನಿಷ್ಠ ಮೊತ್ತದ ಜಂಟಿ ದಾಖಲೆ. 2009ರ ಆರ್‌ಸಿಬಿ ಎದುರಿನ ಕೇಪ್‌ಟೌನ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 2 ವಿಕೆಟಿಗೆ 14 ರನ್ ಗಳಿಸಿತ್ತು. 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಒಮ್ಮೆ 15 ರನ್, 2 ಸಲ 16 ರನ್ ಗಳಿಸಿತ್ತು. ಇವುಗಳ ಅಂಕಿಅಂಶ ಇಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.