ಎನ್‌ಇಟಿ ಜಾರಿಯಿಂದ ಸೇವಾನಿರತ ಶಿಕ್ಷಕರಿಗೆ ಹಿಂಭಡ್ತಿ ಆತಂಕ

7ನೇ ತರಗತಿವರೆಗೆ ಬೋಧಿಸುತ್ತಿರುವವರು 5ನೇ ತರಗತಿವರೆಗೆ ಸೀಮಿತವಾಗುವ ಭೀತಿ

Team Udayavani, Mar 31, 2022, 7:00 AM IST

ಎನ್‌ಇಟಿ ಜಾರಿಯಿಂದ ಸೇವಾನಿರತ ಶಿಕ್ಷಕರಿಗೆ ಹಿಂಭಡ್ತಿ ಆತಂಕ

ಸಾಂದರ್ಭಿಕ ಚಿತ್ರ.

ಉಡುಪಿ: ಸರಕಾರಿ ಶಾಲಾ ಶಿಕ್ಷಕರಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಈಗ ಹಿಂಭಡ್ತಿಯ ಆತಂಕ ಎದುರಾಗಿದೆ.

1ರಿಂದ 7ನೇ ತರಗತಿಯವರೆಗೆ ಬೋಧಿಸುತ್ತಿದ್ದ ಶಿಕ್ಷಕರು ಇನ್ನು ಮುಂದೆ 5ನೇ ತರಗತಿಯವರೆಗೆ ಮಾತ್ರ ಬೋಧಿಸಬೇಕಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ 7ನೇ ತರಗತಿಯವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ ಮುಂಭಡ್ತಿ ಇಲ್ಲದೆ ಹೊಸ ನೇಮಕಾತಿಗೆ ಸರಕಾರ ಮುಂದಾಗಿರುವುದು ಶಿಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ.
15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಸೇವೆಯಲ್ಲಿ ಇರುವವರಲ್ಲಿ ಅನೇಕ ಪದವೀಧರರಿದ್ದರೂ ಅವ ರಿಗೆ ಪದೋ ನ್ನತಿಗೆ ಪರೀಕ್ಷೆ ನಡೆಸುತ್ತಿಲ್ಲ. ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಇವರನ್ನು 1ರಿಂದ 7ರ ಬದಲಿಗೆ ಪೂರ್ವ ಪ್ರಾಥಮಿಕ(ಎಲ್‌ಕೆಜಿ, ಯುಕೆಜಿ)ದಿಂದ 5ನೇ ತರಗತಿಗೆ ಸೀಮಿತಗೊಳಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಸರಕಾರಿ ಶಾಲೆಯಲ್ಲಿ ಪದವೀಧರ ಪ್ರತಿಭಾನ್ವಿತ ಶಿಕ್ಷಕರ ಕೊರತೆಯಿದೆ. ಈ ಹಿಂದೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾದಾಗಲೂ 3,200 ಶಿಕ್ಷಕರನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಸಾಧ್ಯವಾಗಿತ್ತು. ಸೇವಾ ನಿರತರಿಗೆ ಮೊದಲ ಆದ್ಯತೆಯಲ್ಲಿ ಮುಂಭಡ್ತಿ ನೀಡಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.

ಮುಕ್ತ ಸ್ಪರ್ಧೆ ಮಾಡಬೇಕು
ಪದವೀಧರ ಶಿಕ್ಷಕರ ಹುದ್ದೆಗೆ ಸರಕಾರ ನಡೆಸ ಲಿರುವ ನೇಮಕಾತಿಯಲ್ಲಿ ಸದ್ಯ ಸೇವೆಯಲ್ಲಿರುವವರು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯ ಬಹುದು. ಆದರೆ ಅವರನ್ನು ಸೇವಾ ನಿರತರ ಶಿಕ್ಷಕ ರಾಗಿ ಪರಿಗಣಿಸುವುದಿಲ್ಲ. ಬದಲಾಗಿ ಹೊಸ ಅಭ್ಯರ್ಥಿ ಯಾಗಿಯೇ ಪರಿಗಣಿಸುತ್ತೇವೆ. ಸೇವಾ ನಿರತರ ಶಿಕ್ಷಕರಿಗೆ ಸದ್ಯ ಪದೋನ್ನತಿ ಪರೀಕ್ಷೆ ನಡೆಸುವ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ| ಆರ್‌. ವಿಶಾಲ್‌ ತಿಳಿಸಿದ್ದಾರೆ.

ಪದವಿಯಾಗಿದ್ದರೂ ಪದವೀಧರ ಶಿಕ್ಷಕರಲ್ಲ !
ಸರಕಾರಿ ಶಾಲೆಯಲ್ಲಿ 5 ವರ್ಷಕ್ಕಿಂತಲೂ ಹೆಚ್ಚುಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ಪದವಿ ಹಾಗೂ ಬಿ.ಇಡಿ. ಮಾಡಿರುವವರಿಗೆ ಪದವೀಧರ ಶಿಕ್ಷಕರ ಪಟ್ಟ ಸಿಕ್ಕಿಲ್ಲ. ಇದಕ್ಕೆ ಶಿಕ್ಷಕರಲ್ಲಿರುವ ಕೆಲವು ಗೊಂದಲಗಳೂ ಕಾರಣವಾಗಿವೆ. ಹಲವು ಶಿಕ್ಷಕರು (ಈಗಾಗಲೇ ಬಿ.ಇಡಿ. ಮಾಡಿಕೊಂಡಿರುವವರು) ಪದೋನ್ನತಿಗೆ ನೇರ ನೇಮಕಾತಿ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಡಿ.ಇಡಿ. ಮಾಡಿಕೊಂಡಿರುವ (ಬಿ.ಇಡಿ. ಆದವರೂ ಇದ್ದಾರೆ) ಕೆಲವು ಹಿರಿಯ ಶಿಕ್ಷಕರು ಪದವೀಧರ ಶಿಕ್ಷಕರಾಗಿ ಪದೋನ್ನತಿಗೆ ಪರೀಕ್ಷೆ ನಡೆಸುವುದು ಬೇಡ, ನೇರ ಸೇವಾಹಿರಿತನದ ಆಧಾರದಲ್ಲಿ ಭಡ್ತಿ ನೀಡಬೇಕು ಎನ್ನುವ ವಾದವನ್ನು ಇಲಾಖೆಯ ಮುಂದಿಟ್ಟಿದ್ದಾರೆ. ಶಿಕ್ಷಕರ ಸಂಘವೂ ಈ ವಿಷಯದಲ್ಲಿ ಸ್ವಲ್ಪಮಟ್ಟಿನ ಮೌನವನ್ನೇ ವಹಿಸಿದೆ. ಹೀಗಾಗಿ ಸೇವಾ ನಿರತರಲ್ಲಿ ಅರ್ಹರಿಗೂ ಪದವೀಧರ ಶಿಕ್ಷಕರಾಗಲು ಆಗುತ್ತಿಲ್ಲ.

ಸೇವೆಯಲ್ಲಿರುವವರಿಗೆ ಪದ ವೀಧರ ಶಿಕ್ಷಕರಾಗಲು ಭಡ್ತಿ ಸಂಬಂಧ ಪರೀಕ್ಷೆ ನಡೆಸುವ ಪ್ರಸ್ತಾವನೆ ಈಗಿಲ್ಲ. ಪರೀಕ್ಷೆ ನಡೆಸದೆ ಇರುವುದು ಕಾನೂನಾತ್ಮಕವಾಗಿ ತಪ್ಪಾಗಲಾರದು. 5ನೇ ತರಗತಿ ವರೆಗೆ ಬೋಧಿಸಲು ನೇಮಕವಾಗಿರುವವರು 7ನೇ ತರಗತಿ ವರೆಗೆ ಹೆಚ್ಚುವರಿಯಾಗಿ ಬೋಧಿಸು ತ್ತಿದ್ದರೆ, ಹೊಸ ನೇಮಕವಾದ ಬಳಿಕ 5ನೇ ತರಗತಿವರೆಗಷ್ಟೇ ಬೋಧಿಸಬೇಕಾದೀತು.
– ಡಾ| ಆರ್‌. ವಿಶಾಲ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ಪ್ರಾಥಮಿಕ ಶಾಲೆಯಲ್ಲಿ ರುವ ಪದವೀಧರ ಶಿಕ್ಷಕ ರಿಗೆ ಭಡ್ತಿ ನೀಡುವ ಸಂಬಂಧ ಪರೀಕ್ಷೆ ನಡೆಸಲು ಹಲವು ಬಾರಿ ಮನವಿ ಮಾಡಿದ್ದೇವೆ. ಮೂರು ನೇಮ  ಕಾತಿ ಸಂದರ್ಭದಲ್ಲೂ ಅವಗಣಿ ಸಿರು ವುದು ಸರಿಯಲ್ಲ. ಇನ್ನೊಮ್ಮೆ ಶಿಕ್ಷಣ ಸಚಿವರು ಹಾಗೂ ಆಯುಕ್ತರ ಗಮನಕ್ಕೂ ತರಲಿದ್ದೇವೆ.
– ಚಂದ್ರಶೇಖರ ನೂಗ್ಲಿ,
ರಾಜ್ಯ ಪ್ರ. ಕಾರ್ಯದರ್ಶಿ,
ಸ. ಪ್ರಾ. ಶಾ. ಶಿಕ್ಷಕರ ಸಂಘ

-ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.