ಆಂಧ್ರದ ಶ್ರೀ ಶೈಲದಲ್ಲಿ ಕನ್ನಡಿಗ ಯಾತ್ರಾರ್ಥಿಗೆ ಇರಿತ, ಗುಂಪು ಘರ್ಷಣೆ : ಉದ್ವಿಗ್ನ ಸ್ಥಿತಿ
ರಕ್ಷಣೆ ಒದಗಿಸಲು ಆಂಧ್ರ ಸಿಎಂಗೆ ಬೊಮ್ಮಾಯಿ ಮನವಿ, ಎಸ್ ಪಿ ಗೆ ಕರೆ ಮಾಡಿದ ನಿರಾಣಿ
Team Udayavani, Mar 31, 2022, 2:59 PM IST
ಶ್ರೀ ಶೈಲ : ಆಂಧ್ರ ಪ್ರದೇಶದ ಪುಣ್ಯ ಕ್ಷೇತ್ರ ಶ್ರೀ ಶೈಲದಲ್ಲಿ ಕನ್ನಡಿಗ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ಗುಂಪು ಘರ್ಷಣೆ ಸಂಭವಿಸಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ನಡೆದಿದ್ದೇನು?
ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದ್ದ ಭಕ್ತರು ಹೋಟೆಲ್ ನಲ್ಲಿ ನೀರಿನ ಬಾಟಲಿ ವಿಚಾರದಲ್ಲಿ ಹೆಚ್ಚಿನ ದರ ಯಾಕೆ ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಕನ್ನಡಿಗನಿಗೆ ಇರಿತ ನಡೆಸಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆ ಬಳಿಕ ಸ್ಥಳೀಯರು ಹಾಗೂ ಕನ್ನಡಿಗರ ಎರಡು ಗುಂಪುಗಳ ನಡುವೆ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ಉದ್ವಿಗ್ನ ಸ್ಥಿತಿಗೆ ತಿರುಗಿದೆ.
ಸ್ಥಳೀಯರು ಜಮಾವಣೆಗೊಂಡು ಕನ್ನಡಿಗರ ಮೇಲೆ ದಾಳಿಗೆ ಇಳಿದಿದ್ದು, ಹಲವು ವಾಹನಗಳನ್ನು ಜಖಂ ಗೊಳಿಸಿದ್ದಾರೆ. ಯಾತ್ರೆಗೆ ತೆರಳಿದ್ದ ಕನ್ನಡಿಗರ ಹಲವು ವಾಹನಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇಬ್ಬರು ಕನ್ನಡಿಗರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಆಂಧ್ರ ಸಿಎಂಗೆ ಬೊಮ್ಮಾಯಿ ಮನವಿ
ಭಕ್ತಾದಿಗಳಿಗೆ ರಕ್ಷಣೆ ಒದಗಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ. ಬೇರೆ ರಾಜ್ಯಗಳಿಂದ ಜಾತ್ರೆಗಳಿಗೆ ಭೇಟಿ ನೀಡಿವವರು ಹೆಚ್ಚಿರುತ್ತಾರೆ. ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಹೊರಗಿನಿಂದ ಬರುವ ಭಕ್ತರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದಲೂ ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಹಿಂದಿರುಗುವ ಸಂದರ್ಭದಲ್ಲಿ ಕೆಲವು ಭಕ್ತರ ನಡುವೆ ಜಗಳ ಉಂಟಾಗಿ ಇರಿತವೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಹೊರಗಿನಿಂದ ಬಂದಿದ್ದ ಭಕ್ತರ ನಡುವೆ ಜಗಳ ಉಂಟಾಗಿದೆ. ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ರಾತ್ರಿಯಿಂದಲೇ ಸಂಪರ್ಕ ದಲ್ಲಿದ್ದೇನೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಇಬ್ಬರಿಗೆ ತೀವ್ರವಾಗಿ ಗಾಯವಾಗಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಆಂಧ್ರಪ್ರದೇಶದ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡಲು ಪ್ರಯತ್ನ ನಡೆದಿದೆ ಎಂದರು.
ಕರ್ನೂಲ್ ಎಸ್ ಪಿ ಜತೆ ಮಾತನಾಡಿದ ನಿರಾಣಿ
ಶ್ರೀ ಶೈಲ ದಲ್ಲಿ ಇರಿತಕ್ಕೊಳಗಾದ ಯುವಕ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿಯಾವನಾಗಿದ್ದು, ಆ ಹಿನ್ನೆಲೆಯಲ್ಲಿ ಕರ್ನೂಲ್ ಎಸ್ ಪಿ ಸುಧೀರ್ ಕುಮಾರ ರೆಡ್ಡಿ ಜತೆ ಸಚಿವ ಮುರುಗೇಶ್ ನಿರಾಣಿ ಮಾತಾಡಿದ್ದಾರೆ.
ಭಕ್ತಾದಿಗಳು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುತ್ತಾರೆ. ಆದರೆ ಈ ಬಾರಿ ಭಕ್ತಾದಿಗಳ ಮೇಲೆ ಆದ ಹಲ್ಲೆ, ಗಲಾಟೆ ಬಗ್ಗೆ ಬಹಳ ನೋವಾಗಿದೆ ಎಂದು ನಿರಾಣಿ ತಿಳಿಸಿದ್ದಾರೆ.
“ನನ್ನ ಮತ ಕ್ಷೇತ್ರ ಬೀಳಗಿಯ ಯುವಕ ಶ್ರೀಶೈಲ್ ವಾರಿಮಠ ಅವರಿಗೆ ಚಾಕು ಇರಿತ ಬಹಳ ನೋವು ತಂದಿದೆ. ಈ ಹಿನ್ನೆಲೆ ಆಂಧ್ರ ಪ್ರದೇಶ ಕರ್ನೂಲ್ ಜಿಲ್ಲೆ ಎಸ್ ಪಿ ಸುಧೀರ್ ಕುಮಾರ ರೆಡ್ಡಿ ಜೊತೆ ಮಾತಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಘಟನೆಯ ಸವಿವರ ಕೇಳಿದ್ದೇನೆ. ಗಾಯಗೊಂಡ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ವಾರಿಮಠ, ಮತ್ತಿತರ ಚಿಕಿತ್ಸೆಗೆ ಅಲ್ಲಿ ಆಸ್ಪತ್ರೆ, ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ.ಕನ್ನಡಿಗರ ಮೇಲೆ ಹಲ್ಲೆ ವಾಹನ ಜಖಂಗೊಳಿಸಿದ್ದು ಖಂಡನೀಯ, ಕನ್ನಡಿಗರು ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಶಾಂತಿಯಿಂದ ಇರಿ. ಸರಕಾರ ಪರಿಸ್ಥಿತಿ ನಿರ್ವಹಿಸಲು ಕ್ರಮ ಕೈಗೊಳ್ಳುತ್ತಿದೆ” ಎಂದು ನಿರಾಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.