ಸಂಬಳ ಕೊಡದ ಮಾಲೀಕರ ವಿರುದ್ಧ ಸೆಲ್ಫಿ ವಿಡಿಯೋ ಮಾಡಿ ಲಾರಿ ಚಾಲಕ ಆತ್ಮಹತ್ಯೆ
Team Udayavani, Mar 31, 2022, 11:30 PM IST
ಬೆಂಗಳೂರು: ಸಂಬಳ ಕೊಡದೆ ಸತಾಯಿಸುತ್ತಿದ್ದ ಮಾಲೀಕರ ವಿರುದ್ಧ ಸೆಲ್ಫಿ ವಿಡಿಯೋ ಮಾಡಿರುವ ಲಾರಿ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಿರಣ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ಲಾರಿ ಚಾಲಕ. ಈ ಸಂಬಂಧ ಲಾರಿ ಮಾಲೀಕರಾದ ಮಂಜಣ್ಣ, ಶಿವಣ್ಣ ಹಾಗೂ ಟಿಎಲ್‌ಎಸ್ ಮಾಲೀಕ ಮನು ಎಂಬವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಕಿರಣ್ ಕುಮಾರ್, ಕೆ.ಆರ್. ಪುರ ಬಳಿಯ ಲಾಜಿಸ್ಟಿಕ್ ಕಂಪನಿಯೊಂದರಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕಂಪನಿ ಮಾಲೀಕರು ನಿಗದಿತ ದಿನದಂದು ಸಂಬಳ ನೀಡದೇ ಸತಾಯಿಸುತ್ತಿದ್ದರು. ಅದರಿಂದ ಬೇಸತ್ತ ಕಿರಣ್ ಕುಮಾರ್ ಸಂಜೀವಿನಿನಗರದಲ್ಲಿರುವ ಸಂಬಂಧಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ :
ಲಾರಿ ಮಾಲೀಕರ ವರ್ತನೆಯಿಂದ ಬೇಸತ್ತ ಕಿರಣ್ ಕುಮಾರ್ ಆತ್ಮಹತ್ಯೆಗೂ ಮೊದಲು ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅಲ್ಲದೆ, ಅದನ್ನು ಕುಟುಂಬಸದಸ್ಯರು ಹಾಗೂ ಸ್ನೇಹಿತರಿಗೆ ಕಳುಹಿಸಿ, ತನ್ನ ಸಾವಿಗೆ ಇವರೇ ಕಾರಣ ಎಂದು ಉಲ್ಲೇಖೀಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ, “ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇನೆ. ಕೆಲಸ ಮಾಡಿದರೂ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕೇಳಿದರೆ ಕೊಡುವುದಾಗಿ ಸತಾಯಿಸುತ್ತಿದ್ದಾರೆ. ಕೆಲವೊಂದು ವಿಚಾರಕ್ಕೆ ಸ್ಕ್ರೀನ್ ಶಾಟ್ ಕಳುಹಿಸಿ ಮಾನಸಿಕ ಕಿರಿಕಿರಿ ಕೊಡುತ್ತಿದ್ದಾರೆ. ಕೂಡಲೇ ತನ್ನ ಖಾತೆಗೆ 30 ಸಾವಿರ ರೂ. ವರ್ಗಾವಣೆ ಮಾಡಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಮಂಜಣ್ಣ, ಶಿವಣ್ಣ ಮತ್ತು ಟಿಎಲ್‌ಎಸ್ ಲಾಜಿಸ್ಟಿಕ್ ಮಾಲೀಕ ಮನು ಕಾರಣ’ ಎಂದು ಉಲ್ಲೇಖೀಸಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.