ಆರ್‌ಜಿವಿ ಡೇಂಜರಸ್ ಸ್ಟೋರಿ! ಸಲಿಂಗಕಾಮದ ಸುತ್ತ ‘ಕತ್ರಾ ಡೇಂಜರಸ್’
Team Udayavani, Apr 1, 2022, 10:58 AM IST
ಶಿವರಾಜಕುಮಾರ್ ಅಭಿನಯದ “ಕಿಲ್ಲಿಂಗ್ ವೀರಪ್ಪನ್’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿಯಾಗಿದ್ದ ರಾಮ್ ಗೋಪಾಲ್ ವರ್ಮಾ ಇದೀಗ “ಕತ್ರಾ ಡೇಂಜರಸ್’ ಎಂಬ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.
ಹೌದು, ಸಲಿಂಗಕಾಮದ ಕಥಾಹಂದರ ಹೊಂದಿರುವ “ಕತ್ರಾ ಡೇಂಜರಸ್’ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿದ್ದರು, ಇದೇ ಏ. 8ಕ್ಕೆ ಚಿತ್ರ ತೆರೆ ಕಾಣಲಿದೆ.
ನೈನಾ ಗಂಗೂಲಿ, ಅಪ್ಸರಾ ರಾಣಿ “ಕತ್ರಾ ಡೇಂಜರಸ್’ ಸಿನಿಮಾದ ಲೀಡ್ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ “ಕತ್ರಾ ಡೇಂಜರಸ್’ ಪ್ರಮೋಶನ್ ಕಾರ್ಯದಲ್ಲಿ ಬಿಝಿಯಾಗಿರುವ ಆರ್‌ಜಿವಿ ತಮ್ಮ ಟೀಮ್ ಜೊತೆಗೆ ಬೆಂಗಳೂರಿಗೆ ಆಗಮಿಸಿದ್ದರು.
ಇದನ್ನೂ ಓದಿ:ಐಪಿಎಲ್ 2022: ಎಬಿ ಡಿವಿಲಿಯರ್ಸ್ ಸಿಕ್ಸರ್ ದಾಖಲೆ ಸರಿಗಟ್ಟಿದ ಮಹೇಂದ್ರ ಸಿಂಗ್ ಧೋನಿ
ಇದೇ ವೇಳೆ ಮಾತಿಗಿಳಿದ ಆರ್‌ಜಿವಿ ತಮ್ಮ ಸಿನಿಮಾದ ಕಥಾಹಂದರ ಅದರ ವಿಶೇಷತೆಗಳ ಬಗ್ಗೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡರು.
“ಇದೊಂದು ಎಲ್‌ಜಿಬಿಟಿ ಸಮುದಾಯವನ್ನು ಇಟ್ಟುಕೊಂಡು ಮಾಡಲಾದ ಸಿನಿಮಾ. ನಮ್ಮ ಸಮಾಜ ಈ ಸಮುದಾಯವನ್ನು ಅಪರಾಧಿ ಮನೋಭಾವನೆಯಲ್ಲಿ ನೋಡುತ್ತದೆ. ಆದರೆ ಐಪಿಸಿ ಸೆಕ್ಷನ್ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ 2018ರಲ್ಲಿ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪು ಅಂಥವರ ಪರವಾಗಿದೆ. ಅದೇ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇಬ್ಬರು ಸಲಿಂಗಿ ಹುಡುಗಿಯರ ಜೀವನದಲ್ಲಿ ನಡೆದಿರುವ ಒಂದಷ್ಟು ಕಾಲ್ಪನಿಕ ಘಟನೆ, ಕ್ರೈಂ, ಆ್ಯಕ್ಷನ್‌ಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ’ ಎಂಬುದು ಸಿನಿಮಾದ ಬಗ್ಗೆ ಆರ್‌ಜಿವಿ ವಿವರಣೆ.
ಅಂದಹಾಗೆ, “ಸಲಿಂಗಿಗಳು ಹಾಗೂ ಲೈಂಗಿಕ ಕಾರ್ಯಕರ್ತರ ನಡುವಿನ ಪ್ರೇಮ, ಒಂದು ಪ್ರೇಮಕಥೆಯಾಗಿ ಉಳಿಯಬೇಕು, ಕಾಮಕಥೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ’ ಎನ್ನುವುದು ತಮ್ಮ ಸಿನಿಮಾದ ಸಬ್ಜೆಕ್ಟ್ ಬಗ್ಗೆ ಆರ್‌ಜಿವಿ ನಿಲುವು.
ಇನ್ನು ಆರ್ ಜಿವಿ ನಿರ್ದೇಶನದ ಇಂಥದ್ದೊಂದು ಕಥಾಹಂದರದ ಸಿನಿಮಾದಲ್ಲಿ ಅಭಿನಯಿಸಿರುವುದರ ಬಗ್ಗೆ ಇಬ್ಬರು ನಾಯಕಿಯರಾದ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಖುಷಿ ಹೆಮ್ಮೆ ಮತ್ತು ಖುಷಿಯ ಮಾತುಗಳನ್ನಾಡಿದರು. “ಮೇಲ್ನೋಟಕ್ಕೆ ಇದೊಂದು ಗ್ಲಾಮರಸ್, ಕ್ರೈಂ ಸಬ್ಜೆಕ್ಟ್‌ನಂತೆ ಕಂಡರೂ ಸಿನಿಮಾ ನೋಡಿದ ಬಳಿಕ ಯೋಚಿಸುವ ಹಲವು ವಿಷಯಗಳಿವೆ’ ಎಂಬುದು ಇಬ್ಬರು ನಾಯಕಿಯರ ಮಾತು. ಉಳಿದಂತೆ ರಾಜ್‌ಪಾಲ್ ಯಾದವ್, ಘಾಜಿ, ಮಿಥುನ್ ಪುರಂದರಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.