![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 1, 2022, 10:33 AM IST
ಕುಂದಗೋಳ: ಪಟ್ಟಣ ಪಂಚಾಯಿತಿಯ 2022-23ರ ಸಾಲಿನ 11,88,44000 ರೂ. ಬಜೆಟ್ ಅನ್ನು ಅಧ್ಯಕ್ಷ ಪ್ರಕಾಶ ಕೊಕಾಟೆ ಓದಿ 7.65 ಲಕ್ಷ ಉಳಿತಾಯ ಬಜೆಟ್ ಸೋಮವಾರ ಮಂಡಿಸಿದರು.
ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಬಜೆಟ್ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಪಟ್ಟಣದ ಏಳ್ಗೆ ಹಾಗೂ ಕನಸು ಹೊತ್ತು ಜನಸೇವೆಗಾಗಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.
ಸರಕಾರದ ಮುಕ್ತನಿಧಿ ಅನುದಾನ 22 ಲಕ್ಷ, 15ನೇ ಹಣಕಾಸು ಯೋಜನೆ 77 ಲಕ್ಷ, ವಿದ್ಯುತ್ಛಕ್ತಿ ಅನುದಾನ 42 ಲಕ್ಷ, ವಿಶೇಷ ಅನುದಾನ 400 ಲಕ್ಷ, ನಗರೋತ್ಥಾನ ಅನುದಾನ 425 ಲಕ್ಷ ನಿರೀಕ್ಷೆ ಇದೆ. ಅದೆ ರೀತಿ ಆಸ್ತಿ ತೆರಿಗೆಯಿಂದ 30 ಲಕ್ಷ, ನೀರು ಸರಬರಾಜು ಕರ 35 ಲಕ್ಷ, ವಾಣಿಜ್ಯ ಸಂಕೀರ್ಣ ಬಾಡಿಗೆ 5.28 ಲಕ್ಷ, ಮಾರುಕಟ್ಟೆ ಶುಲ್ಕ 5.25 ಲಕ್ಷ, ಎಸ್.ಡಬ್ಲು.ಎಮ್ 4.50 ಲಕ್ಷ, ಇತರೆ ಮೂಲದ 16.03 ಲಕ್ಷ ಹೀಗೆ ಒಟ್ಟು 101.40 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ನೀರು ಸರಬರಾಜು ನಿರ್ವಹಣೆಗೆ 70 ಲಕ್ಷ, ಕಂದಾಯ ವಿಭಾಗ ನಿರ್ವಹಣೆಗೆ 22.70 ಲಕ್ಷ, ಘನ ತ್ಯಾಜ್ಯ ನಿರ್ವಹಣೆಗೆ 97.05 ಲಕ್ಷ, ರಸ್ತೆ ಚರಂಡಿ ದುರಸ್ತಿಗೆ 17.30 ಲಕ್ಷ, ಬೀದಿ ದೀಪ ನಿರ್ವಹಣೆಗೆ 23 ಲಕ್ಷ, ವಾಣಿಜ್ಯ ಮಳಿಗೆ ನಿರ್ವಹಣೆಗೆ 50 ಸಾವಿರ, ಜನಗಣತಿಗೆ 50 ಸಾವಿರ ಬಜೆಟ್ ವಿವರಣೆ ನೀಡಿ ಒಟ್ಟು 7.65 ಲಕ್ಷ ಉಳಿತಾಯ ಗುರಿ ಹೊಂದಲಾಗಿದೆ ಎಂದರು.
ಬಜೆಟ್ ಅನ್ನು ನಂತರ ಸರ್ವಾನುಮತದಿಂದ ಒಪ್ಪಿ ಅನುಮೋದನೆ ನೀಡಲಾಯಿತು.
ಪಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿ, ಪಟ್ಟಣದಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವುದು ಅವಶ್ಯವಿದ್ದು, ಅದರ ಬಗ್ಗೆ ಗಣನೆ ತೆಗೆದುಕೊಳ್ಳಲು ಹೇಳಿದರು. ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯ ಮಾಡುತ್ತೇವೆಂದು ಪಪಂ ಮುಖ್ಯಾಧಿಕಾರಿ ನಾರಾಯಣ ಡೊಂಬರ ಹೇಳಿದರು.
ಶೌಚಾಲಯ ನಿರ್ಮಾಣದಲ್ಲಿ ಅನೇಕ ಸಮಸ್ಯೆಗಳಿದ್ದು ಫಲಾನುಭವಿಗಳಿಗೆ ಸರಿಯಾಗಿ ಹಣ ಪಾವತಿಯಾಗಿಲ್ಲ ಎಂದು ಸದಸ್ಯ ಬಸವರಾಜ ತಳವಾರ ಗಮನಕ್ಕೆ ತಂದರು. ಇದರ ಸವಿಸ್ತಾರ ಮಾಹಿತಿ ನೀಡುವುದಾಗಿ ಅಧಿಕಾರಿ ಡೊಂಬರ ಸದಸ್ಯರಿಗೆ ತಿಳಿಸಿದರು.
ಉಪಾಧ್ಯಕ್ಷ ಹನಮಂತಪ್ಪ ರಣತೂರ, ಸ್ಥಾಯಿ ಸಮಿತಿ ಅಧ್ಯಕ್ಷ ದೀಲಿಪ ಕಲಾಲ, ಸದಸ್ಯರಾದ ಶಾಮ್ ದೇಸಾಯಿ, ಮಂಜುನಾಥ ಹಿರೇಮಠ, ವಾಗೇಶ ಗಂಗಾಯಿ, ಹನಮಂತಪ್ಪ ಮೇಲಿನಮನಿ, ಪ್ರವೀಣ ಬಡ್ನಿ, ಸುನಿತಾ ಪಾಟೀಲ, ಬಸಮ್ಮ ಕುಂದಗೋಳ, ಮಲ್ಲಿಕ ಶಿರೂರ ಸೇರಿದಂತೆ ಅನೇಕರಿದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.