ಹಾನಗಲ್ಲದಲ್ಲಿ ಕನ್ನಡ ಹಬ್ಬ

ಸಾಹಿತ್ಯ ಸಮ್ಮೇಳನಗಳು ಮನುಷ್ಯತ್ವದ ಬೀಜ ಬಿತ್ತುವ ವೇದಿಕೆಗಳಾಗಲಿ

Team Udayavani, Apr 1, 2022, 3:47 PM IST

18

ಹಾನಗಲ್ಲ: ಸಾಹಿತ್ಯದ ಮೂಲ ಉದ್ದೇಶ ಸಾಮರಸ್ಯ. ಎಲ್ಲರ ಭಾವನೆ ಐಕ್ಯವಾದಾಗ ಭಾವೈಕ್ಯತೆ ಮೂಡಲಿದೆ. ಈ ಮಣ್ಣಿನ ಗುಣಧರ್ಮ ಭಾವೈಕ್ಯತೆ. ಸಾಹಿತ್ಯ ಸಮ್ಮೇಳನಗಳು ಮನುಷ್ಯತ್ವದ ಬೀಜ ಬಿತ್ತುವ ವೇದಿಕೆಗಳಾಗಬೇಕೆಂದು ಶಾಸಕ ಶ್ರೀನಿವಾಸ ಮಾನೆ ಆಶಯ ವ್ಯಕ್ತಪಡಿಸಿದರು.

ಗುರುವಾರ ಹಾನಗಲ್ಲ ತಾಲೂಕಿನ ಹಾವಣಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡದ ಆದಿಕವಿ ಪಂಪ “ಮಾನವ ಕುಲಂ ತಾ ವಂದೇ ವಲಂ’ ಎಂದಿದ್ದಾರೆ. ರಾಷ್ಟ್ರಕವಿ ಕುವೆಂಪು “ಮಾನವ ಜಾತಿ ಒಂದೇ’ ಎಂದು ಹೇಳಿದ್ದಾರೆ. ಯಾರಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮನಃಸ್ಥಿತಿ ಇರುತ್ತದೋ ಅವರು ಮಾತ್ರ ಸಾಮರಸ್ಯ, ಮಾನವತೆ ಬಿತ್ತುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಜಗತ್ತಿಗೆ ಇಂದು ಮಾನವೀಯ ಗುಣ ಧರ್ಮದ ಸಹೃದಯಿಗಳ ಅಗತ್ಯ ಹೆಚ್ಚಾಗಿದೆ. ಮನುಷ್ಯ ತನ್ನನ್ನು ತಾನು ಪ್ರೀತಿಸುವ ಜೊತೆಗೆ ಇತರರನ್ನು, ಇತರ ಜೀವಿಗಳನ್ನೂ ಪ್ರೀತಿಸಬೇಕು. ಸೃಷ್ಟಿಯಾಗುವ ಸಾಹಿತ್ಯ ಜೀವ ಪರವಾಗಿರಬೇಕು. ಸಾಹಿತ್ಯ ಸಮ್ಮೇಳ ನಗಳು ಧನಾತ್ಮಕ ಚಿಂತನೆಗಳಿಗೆ ವೇದಿಕೆಯಾಗಬೇಕು. ವಿರಾಟನಗರ ಖ್ಯಾತಿಯ ಹಾನಗಲ್ಲ ಐತಿಹಾಸಿಕ ಪುಣ್ಯಭೂಮಿ. ಇಂಥ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಪೂರ್ವ ಜನ್ಮದ ಪುಣ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿ, ಕನ್ನಡದ ಬಳಕೆ ಹೆಚ್ಚಿದಂತೆ ಜಾಗೃತಿ, ಅಭಿಮಾನವೂ ವೃದ್ಧಿಯಾಗಲಿದೆ. ಸುತ್ತಲಿನ ರಾಜ್ಯಗಳ ಭಾಷಿಕರ ಪ್ರಭಾವದಿಂದ ಕನ್ನಡ ಮಂಕಾದಂತೆ ಕಾಣುತ್ತಿದ್ದು, ಬೇರೆ ಭಾಷಿಕ ರನ್ನು ತೃಪ್ತಿಪಡಿಸುವ ಭರಾಟೆಯಲ್ಲಿ ನಮ್ಮ ಮಾತೃಭಾಷೆ ನಿರ್ಲಕ್ಷಿಸುವುದು ಸರಿಯಲ್ಲ. ಕನ್ನಡಿಗರು ತಮ್ಮನ್ನು ತಾವು ಮೋಸ ಮಾಡಿ ಕೊಳ್ಳದೇ ಕನ್ನಡ-ಕನ್ನಡಿಗರ ಕಲ್ಯಾಣಕ್ಕೆ ಕಂಕಣಬದ್ಧರಾಗಬೇಕಿದೆ ಎಂದರು.

ಕನ್ನಡ ಭಾಷೆ ಬೆಳವಣಿಗೆಯ ಕುರಿತು ನಮ್ಮ ಮಾತು ಕಡಿಮೆಯಾಗಿ, ಕೆಲಸ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕಿದೆ. ನಮ್ಮ ಭಾಷೆ, ನೆಲ, ಜಲದ ಕುರಿತು ಪ್ರತಿಯೊಬ್ಬರೂ ಪ್ರೀತಿ, ಅಭಿಮಾನ ಮೈಗೂಡಿಸಿಕೊಳ್ಳಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಅಕ್ಕಿಆಲೂರು ವಿರಕ್ತ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಕನ್ನಡವನ್ನು ಇನಷ್ಟು ಸಮೃದ್ಧಗೊಳಿಸಲು ನಾವೆಲ್ಲರೂ ದೀಕ್ಷೆ ತೊಡಬೇಕಿದೆ. ಕರ್ನಾಟಕದಲ್ಲಿ ಕನ್ನಡವನ್ನು ಎಂದಿಗೂ ಅಳಿಯಲು ಬಿಡದಂತೆ ಎಲ್ಲರೂ ಮೈಮನ ಜಾಗೃತಗೊಳಿ ಸಿಕೊಳ್ಳಬೇಕು ಎಂದರು.

ಸಮ್ಮುಖ ವಹಿಸಿದ್ದ ಅಕ್ಕಿಆಲೂರು ಮುತ್ತಿನ ಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಆಯಾ ಕಾಲದ ಸನ್ನಿವೇಶ, ಸಾಮಾಜಿಕ ನೋಟದ ಅಭಿವ್ಯಕ್ತಿಯೇ ಸಾಹಿತ್ಯ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷೆ ಪಾರ್ವತಿಬಾಯಿ ಕಾಶಿಕರ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಉದಯ ನಾಸಿಕ್‌, ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ವಿಜಯೇಂದ್ರ ಯತ್ನಳ್ಳಿ, ರುಕ್ಮಣ್ಣ ಸಾಳಂಕಿ, ದತ್ತಾತ್ರೇಯ ಕುಲಕರ್ಣಿ, ಎನ್‌.ಎಸ್‌.ಜವಳಿ, ಕರಬಸಪ್ಪ ಹೆಬ್ಬಳ್ಳಿ, ಸುನೀಲ್‌ಕುಮಾರ ಬಿ., ಆರ್‌. ಎನ್‌.ಹುರುಳಿ, ಎಂ.ಎಸ್‌.ಬಡಿಗೇರ ಇದ್ದರು. ಚನ್ನವೀರಪ್ಪ ಬೆಲ್ಲದ ಸ್ವಾಗತಿಸಿ, ಜಗದೀಶ್‌ ಮಡಿವಾಳರ ನಾಡಗೀತೆ ಹಾಡಿದರು. ರಾಜೇಶ್ವರಿ ತಿರುಮಲೆ, ಶ್ರೀಕಾಂತ ಹುಲ್ಮನಿ ನಿರೂಪಿಸಿ, ಪ್ರವೀಣ ಅಪ್ಪಾಜಿ ವಂದಿಸಿದರು.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.