ತೆರಿಗೆ ವಸೂಲಿಗೆ ಭಾರತ್ ಬಿಲ್ ಪೇ ವ್ಯವಸ್ಥೆ ಜಾರಿ
ಗೊಬ್ಬರ ಮಾರಾಟದಿಂದ 10 ಲಕ್ಷ ರೂ. ಹಾಗೂ ಜಾಹಿರಾತು ಶುಲ್ಕ 3 ಲಕ್ಷ ರೂ. ನಿರೀಕ್ಷಿಸಲಾಗಿದೆ
Team Udayavani, Apr 1, 2022, 6:21 PM IST
ದೊಡ್ಡಬಳ್ಳಾಪುರ: ನಗರಸಭೆಯ ಕಾರ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ಆಯವ್ಯಯ ವಿಶೇಷ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ 1.75 ಕೋಟಿ ರೂ. ಉಳಿತಾಯದ ಬಜೆಟ್ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಅವರು, ನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ನಗರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ, ನಗರದ ನಾಗರಿಕ ಸಮಸ್ಯೆ ಪರಿಹರಿಸುವಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುವಂತೆ ನಗರದ ಸೀಮಿತ ಹಣಕಾಸು ಸಂಪನ್ಮೂಲವಾದ ಈ ನಗರಸಭೆಗೆ ಅತಿಮುಖ್ಯ ಆದಾಯವಾದ ಮನೆ ಕಂದಾಯ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಪರವಾನಿಗೆ ಶುಲ್ಕ, ಇತರೆ ತೆರಿಗೆಗಳು,ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ 15ನೇ ಹಣಕಾಸು ಯೋಜನೆ, ಎಸ್‌ಎಫ್‌ಸಿ ಮೂಲಗಳಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಿದ್ದು, ನಗರಸಭೆಯು ಅಗತ್ಯವಾಗಿ ನಿರ್ವಹಿಸ ಬೇಕಾಗಿರುವ ನಿರ್ವಹಣೆ ಮತ್ತು ನಾಗರಿಕ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
2022-23ನೇ ಸಾಲಿನ ಆಯವ್ಯಯ ಅಂದಾಜು:
2022-23ನೇ ಸಾಲಿಗೆ ಪ್ರಾರಂಭಿಕ ಶಿಲ್ಕು 1,616 ಲಕ್ಷ ರೂ. ಮತ್ತು ವರಮಾನ 5,229 ಲಕ್ಷ ರೂ. ಒಟ್ಟು 6,845 ಲಕ್ಷ ರೂ. ಆದಾಯ ನೀರಿಕ್ಷಿಸಲಾಗಿದೆ. ಒಟ್ಟು ವೆಚ್ಚ 6,670 ಲಕ್ಷ ರೂಗಳೆಂದು ಅಂದಾಜಿಸಿದ್ದು, ಅಂತಿಮ ಶಿಲ್ಕು ರೂ.175 ಲಕ್ಷಗಳು ನಿರೀಕ್ಷಿಸಲಾಗಿದೆ.
ಅಂದಾಜು ಜಮಾ: ನಗರಸಭೆಯ 2022-23ನೇ ಸಾಲಿನಲ್ಲಿ ಒಟ್ಟು ಆದಾಯ ರೂ.5,229.46 ಲಕ್ಷ ರೂ.ನೀರಿಕ್ಷಿಸಲಾಗಿದ್ದು, ಈ ಪೈಕಿ ತೆರಿಗೆ ಆದಾಯದಿಂದ 504.22 ಲಕ್ಷ ರೂ. ಆಗಿದ್ದು ಹಾಗೂ ಇತರೆ ತೆರಿಗೆಯೇತರ ಆದಾಯಗಳಾದ ನೀರು ಸರಬರಾಜು ಶುಲ್ಕ, ಒಳಚರಂಡಿ ಸಂಪರ್ಕ ಶುಲ್ಕ, ಅಂಗಡಿ ಮಳಿಗೆಗಳ ಬಾಡಿಗೆ, ಅಭಿವೃದ್ಧಿ ಮತ್ತು ಉತ್ತಮತೆ ಶುಲ್ಕ, ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕ ಶುಲ್ಕಗಳು ಮತ್ತು ಇತರೆ ಆದಾಯದಿಂದ 1304.57 ಲಕ್ಷ ರೂ.
ನಿರೀಕ್ಷಿಸಲಾಗಿದೆ ಹಾಗೂ ಸದರಿ ಸಾಲಿನಲ್ಲಿ ತೆರಿಗೆ ವಸೂಲಿಗಾಗಿ ಆಧುನಿಕ ಪದ್ಧತಿಯಾದ ಭಾರತ್ ಬಿಲ್ ಪೇ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಆರೋಗ್ಯ ಶಾಖೆಯಿಂದ ಸ್ವಂತ ಮೂಲಗಳಿಂದ ಬರುವ ಆದಾಯವಾದ ಉದ್ದಿಮೆ ಪರವಾನಿಗೆ ಶುಲ್ಕ 32 ಲಕ್ಷ ರೂ., ತ್ಯಾಜ್ಯದಿಂದ ತಯಾರಿಸಲಾದ ಗೊಬ್ಬರ ಮಾರಾಟದಿಂದ 10 ಲಕ್ಷ ರೂ. ಹಾಗೂ ಜಾಹಿರಾತು ಶುಲ್ಕ 3 ಲಕ್ಷ ರೂ. ನಿರೀಕ್ಷಿಸಲಾಗಿದೆ. ಎಂದರು.
ಆಯವ್ಯಯದ ಪಕ್ಷಿನೋಟ: ನಗರದ ಉದ್ಯಾನವನಗಳ ಅಭಿವೃದ್ಧಿಗಾಗಿ 56.35 ಲಕ್ಷ ರೂ. ಅಂದಾಜಿಸಲಾಗಿದ್ದು ಹಾಗೂ ಸದರಿ ಉದ್ಯಾನವನಗಳ ನಿರ್ವಹಣೆಗಾಗಿ 12 ಲಕ್ಷ ರೂ.. ಒಳಚರಂಡಿ ಶುದ್ಧೀಕರಣ ಫಟಕ ಸುತ್ತಲು ಸಸಿ ಮತ್ತು ಮರ ಬೆಳೆಸಲು 5 ಲಕ್ಷ ರೂ. ಹಾಗೂ ಡಿ. ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು 20 ಲಕ್ಷ ರೂ. ನೂತನ ಕೆ.ಆರ್. ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ 145 ಲಕ್ಷ ರೂ., ಹಾಗೂ ಡಿ.ಕ್ರಾಸ್ ರಸ್ತೆಯಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ 210.95 ಲಕ್ಷ ರೂ. ಅಂದಾಜಿಸಲಾಗಿದೆ. ಕೊಂಗಾಡಿಯಪ್ಪ ಬಸ್ ನಿಲ್ದಾಣ ಉನ್ನತೀಕರಣಕ್ಕಾಗಿ ಹಾಗೂ ನಗರಸಭಾ ಕಚೇರಿ ಅವರಣದಲ್ಲಿ ಪುತ್ಥಳಿ ನಿರ್ಮಾಣಕ್ಕಾಗಿ 25 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ರಸ್ತೆ ಅಗಲೀಕರಣಕ್ಕೆ 2 ಕೋಟಿ: ನಗರಕ್ಕೆ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕಾಗಿ ಜಾಗವನ್ನು ಗುರುತಿಸಲಾಗಿದ್ದು, ಸದರಿ ಜಾಗಕ್ಕೆ ಕಾಂಪೌಂಡ್ ಮತ್ತು ತಂತಿ ನಿರ್ಮಿಸಲು 50 ಲಕ್ಷ ರೂ. ನಗರಸಭೆ ಸ್ವತ್ತುಗಳಿಗೆ ತಂತಿ ಬೇಲಿ ಅಳವಡಿಸಲು 70 ಲಕ್ಷ ರೂ. ಅಂದಾಜಿಸಲಾಗಿದೆ. ನಗರದ ಪ್ರಮುಖ ವೆಚ್ಚಕ್ಕಾಗಿ 200 ಲಕ್ಷ ರೂ. ಅಂದಾಜಿಸಲಾಗಿದೆ. ಕ್ರೀಡಾಂಗಣ ಅಭಿವೃದ್ಧಿಗಾಗಿ ಮತ್ತು ಬಯಲು ರಂಗ ಮಂದಿರ ನಿರ್ಮಾಣಕ್ಕಾಗಿ 35 ಲಕ್ಷ ರೂ. ಅಂದಾಜಿಸಲಾಗಿದೆ. ಯುವಜನ ಕ್ರೀಡಾ ಇಲಾಖೆಯವರ ಸಹಯೋಗದೊಂದಿಗೆ ನಗರ ವ್ಯಾಪ್ತಿಯಲ್ಲಿ ಈಜುಕೊಳ ನಿರ್ಮಾಣಕ್ಕಾಗಿ 25 ಲಕ್ಷ ರೂ. ಅಂದಾಜಿಸಲಾಗಿದೆ ಎಂದರು.
ವಿಶೇಷ ಕಾರ್ಯಕ್ರಮಗಳು: ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವವರಿಗೆ ಉತ್ತೇಜಿಸಲು ಪ್ರೋತ್ಸಾಹಧನ ನೀಡುವುದು. ನೇಕಾರ
ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅಂದಾಜು, ನಗರದ ಒಳಚರಂಡಿ ರೊಚ್ಚು ನೀರನ್ನು ಆಧುನಿಕ ರೀತಿಯಲ್ಲಿ ಸಂಸ್ಕರಿಸಿ ಶುದ್ಧೀಕರಿಸಲು ಪ್ಲೂಟಿಂಗ್ ಎರಿಏಟರ್ಗಳ ಅಳವಡಿಕೆಗಾಗಿ 75 ಲಕ್ಷ ರೂ. ಅಂದಾಜಿಸಲಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4ರ ಯೋಜನೆಯಡಿ ದೊಡ್ಡಬಳ್ಳಾಪುರ ನಗರಸಭೆಗೆ 30 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಡಿ ಪ.ಜಾತಿ, ವರ್ಗದವರ ಕಲ್ಯಾಣ ಕಾರ್ಯಕ್ರಮಕ್ಕಾಗಿ 437 ಲಕ್ಷ ರೂ.
ಅಂದಾಜಿಸಲಾಗಿದೆ ಎಂದರು.
ಪ.ಪಂಗಡ ವರ್ಗದವರ ಕಲ್ಯಾಣಕ್ಕಾಗಿ 177ಲಕ್ಷ ರೂ. ಇತರೆ ಬಡ ಜನರ ಕಲ್ಯಾಣ ಕಾರ್ಯಕ್ರಮಕ್ಕೆ 185 ಲಕ್ಷ ರೂ. ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ 128 ಲಕ್ಷ ರೂ., ನಗರದ ಮುಖ್ಯರಸ್ತೆಗಳಲ್ಲಿ ಟ್ರಾμಕ್ ಸಿಗ್ನಲ್ ದೀಪ ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ 40 ಲಕ್ಷ ರೂ. ಅಂದಾಜಿಸಲಾಗಿದೆ ಎಂದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಫರ್ಹಾನ ತಾಜ್, ಪೌರಾಯುಕ್ತ ಕೆ.ಜಿ.ಶಿವಶಂಕರ್ ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.